ರಣ ಕಾಯಕತತ್ವ,ದಾಸೋಹತತ್ವ ಸರ್ವಸಮಾನತೆತತ್ವವನ್ನು ಅಳವಡಿಸಿಕೊಂಡು ಬಾಳುವುದರಿಂದ ಜೀವನದಲ್ಲಿ ಸಾರ್ಥಕತೆ ಸಿಗಲಿದೆ ಎಂದು ಕಸಾಪದ ಪಡಿಂತ್ ತ.ಶಿ.ಬಸವಮೂರ್ತಿ ಅವರು ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಖಾಸಗಿ ಬಸ್ ಏಜೆಂಟರ್ ಸಂಘದ ಅಧ್ಯಕ್ಷ ಲೋಕೇಶಣ್ಣ ಅವರ ನಿವಾಸದಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಯೋಜಿಸಿದ್ದ ಮನೆಮನೆಗಳಲ್ಲಿ ಪಾಕ್ಷಿಕ ಕವಿಕಾವ್ಯ ಗೋಷ್ಠಿ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಕುರಿತು ಅವರು ಉಪನ್ಯಾಸ ನೀಡಿದರು.
ವಚನಸಾಹಿತ್ಯದ ಬಗ್ಗೆ ತಿಳಿಸುತ್ತಾ, ಆದ್ಯವಚನಕಾರರಾದ ಜೇಡರದಾಸಿಮಯ್ಯನ ಕರಿಯನಿತ್ತಡೆ ಒಲ್ಲೆ,ಸಿರಿಯನಿತ್ತಡೆ ಒಲ್ಲೆ ಎಂಬ ವಚನವನ್ನು ಉಲ್ಲೇಖಿಸಿ .ವಚನಕಾರರ ಕಾಯಕತತ್ವ,ಸರ್ವಸಮಾನತೆ, ದಾಸೋಹ,ಸ್ತ್ರೀಸ್ವಾತಂತ್ರ್ಯ ಸೇರಿದಂತೆ ಅವರ ನಡೆನುಡಿಗಳ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ವೈ.ಜಿ.ಲಕ್ಷ್ಮಿನಾರಾಯಣ್ ಮಾತನಾಡಿ ಕಸಾಪದ ಈ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ಕಸಾಪದ ಸದಸ್ಯರು ಕನ್ನಡ ನಾಡುನುಡಿಯ ಬಗ್ಗೆ ಪ್ರತಿಯೊಂದು ಮನೆಯಲ್ಲಿ ಎಲ್ಲರಿಗೂ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.ಇವರ ಈ ಕಾರ್ಯ ನಿರಂತರವಾಗಿರಲಿ ಎಂದು ಆಶಿಸಿದರು. ಶಾಂತಲಾ ತಂಡದವರು ಪ್ರಾರ್ಥಿಸಿ, ಲೋಕೇಶಣ್ಣ ಸ್ವಾಗತಿಸಿ ,ಶಿಕ್ಷಕ ಯಲ್ಲಪ್ಪ ನಿರೂಪಿಸಿ, ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ