ಈ ಹಿಂದೆ ಕಳ್ಳತನ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಕೃತ್ಯಗಳಡಿಯಲ್ಲಿ ದೂರು ದಾಖಲಾಗಿ ಶಿಕ್ಷೆ ಅನುಭವಿಸಿ ಪೊಲೀಸ್ ಠಾಣೆಯ ಬ್ಲಾಕ್ ಲಿಸ್ಟ್ ನಲ್ಲಿದ್ದವರನ್ನು ಅಪರಾಧ ಮಾಸಾಚರಣೆಯ ಅಂಗವಾಗಿ ಗುರುವಾರದಂದು ಠಾಣೆಯಲ್ಲಿಗೆ ಕರೆಸಿ ಎಂಓಬಿ ಪಿರೇಡ್ ಅನ್ವಯ ಮನಪರಿವರ್ತನೆ ಹಾಗೂ ತಿಳುವಳಿಕೆ ಸಭೆ ನಡೆಸಲಾಯಿತು.
ಹುಳಿಯಾರು ಪೊಲೀಸ್ ಠಾಣೆಯ ಬ್ಲಾಕ್ ಲಿಸ್ಟ್ ನಲ್ಲಿದ್ದವರನ್ನು ಗುರುವಾರದಂದು ಠಾಣೆಗೆ ಕರೆಸಿ ಸಿಪಿಐ ಜಯಕುಮಾರ್ ಹಾಗೂ ಪಿಎಸೈ ಘೋರ್ಪಡೆ ಮನಪರಿವರ್ತನಾ ಸಭೆ ನಡೆಸಿದರು. |
ಪಿಎಸೈ ಘೋರ್ಪಡೆ ಮಾತನಾಡಿ ನಮ್ಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ, ರಾಬರಿ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ಮಾಡಿ ಸಿಕ್ಕಿಬಿದ್ದು ಅಪರಾಧಿಗಳಾಗಿ ಶಿಕ್ಷೆಗೊಳಪಟ್ಟವರ ಪಟ್ಟಿಯಿದ್ದು, ಅವರನ್ನು ಠಾಣೆಯಲ್ಲಿಗೆ ಕರೆಸಿ ಅವರ ಮನಪರಿವರ್ತನೆ ಹಾಗೂ ತಿಳುವಳಿಕೆ ಹೇಳುವ ದೃಷ್ಠಿಯಿಂದ ಈ ಸಭೆ ನಡೆಸಿರುವುದಾಗಿ ತಿಳಿಸಿದರು. ಶಿಕ್ಷೆ ಅನುಭವಿಸಿ ಬಂದವರ ಮೇಲೆ ತಾವು ಸದಾಗಮನ ಮಾಡುತ್ತಿರುತ್ತೇವೆ. ಇಂತಹ ಕೃತ್ಯಗಳನ್ನು ಮಾಡಿದವರು ಮುಂದೆಯೂ ಸಹ ಇಂತಹ ಕೆಲಸದಲ್ಲಿ ತೊಡಗಿಕೊಳ್ಳುವ ಸಾಧ್ಯತೆಗಳು ಹೆಚ್ಚಿದ್ದು, ಆ ನಿಟ್ಟಿನಲ್ಲಿ ಒಂದು ಪಟ್ಟಿಯನ್ನು ಸಿದ್ದ ಮಾಡಿ, ಎಲ್ಲಾದರೂ ಕಾನೂನು ಬಾಹಿರ ಕೃತ್ಯಗಳು ನಡೆದರೆ ಇಅವರನ್ನು ಕರೆಸಿ ವಿಚಾರಿಸುತ್ತೇವೆ ಎಂದರು. ತಮ್ಮ ಠಾಣಾ ವ್ಯಾಪ್ತಿಯಲ್ಲಿ ಈ ರೀತಿಯ ೫೯ ಜನರಿದ್ದು ಅವರನ್ನು ಕರೆಸಿ ಸಭೆ ನಡೆಸಿದ್ದು ಮುಂದೆ ಯಾವುದೇ ರೀತಿಯ ಅಪರಾಧ ಮಾಡದಂತೆ ಎಚ್ಚರಿಸಲು ಹಾಗೂ ಶಿಕ್ಷೆ ಮುಗಿದ ಬಳಿಕ ಇದುವರೆಗೂ ಯಾವುದೇ ಕೇಸುಗಳಲ್ಲಿ ಫಿಟ್ ಆಗದವರನ್ನು ಪಟ್ಟಿಯಿಂದ ತಾತ್ಕಾಲಿಕವಾಗಿ ತೆಗೆಯುತ್ತೇವೆ ಮುಂದೆ ಏನಾದರೂ ಪುನ: ತಪ್ಪೆಸಗಿದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಈ ಹಿಂದೆ ವಿವಿಧ ಕೇಸ್ ಗಳಲ್ಲಿ ಅಪರಾಧಿಗಳಾಗಿದ್ದವರ ಮಾಹಿತಿ ಪಡೆದ ಸಿಪಿಐ ಜಯಕುಮಾರ್ ಪಟ್ಟಿಯಲ್ಲಿ ನಮೋದಾಗಿದ್ದವರ ಹೆಸರನ್ನು ಹೇಳಿ ಅವರು ಮಾಡಿದ ತಪ್ಪು ಹಾಗೂ ಅದಕ್ಕೆ ಅನುಭವಿಸಿದ ಶಿಕ್ಷೆ, ಇದುವರೆಗೂ ಯಾವುದೇ ತಪ್ಪು ಮಾಡಿಲ್ಲ ಎಂಬುದನ್ನು ಖಾಚಿತ ಪಡಿಸಿಕೊಂಡು ಅವರ ಫೈಲನ್ನು ತಾತ್ಕಾಲಿಕವಾಗಿ ತೆಗೆದಿಡುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತಪ್ಪುಗಳನ್ನು ಎಸಗದೆ ಉತ್ತಮ ರೀತಿಯಲ್ಲಿ ನಡೆದುಕೊಂಡರೆ ಅಂತಹವರ ಫೈಲನ್ನು ಸಹ ತಮ್ಮ ಬ್ಲಾಕ್ ಲಿಸ್ಟ್ ನಿಂದ ತೆಗೆದಿಡುವುದಾಗಿ ತಿಳಿಸಿದರು. ಯಾವುದೇ ರೀತಿಯ ಅಪರಾಧ ಹಾಗೂ ಅರಪಾಧಿಗಳ ಬಗ್ಗೆ ತಮಗೆ ತಿಳಿದರೆ ಠಾಣೆಗೆ ತಕ್ಷಣ ತಿಳಿಸಬೇಕು ಹಾಗೂ ತಮ್ಮ ಗ್ರಾಮಗಳನ್ನು ಬಿಟ್ಟು ಬೇರೆಡೆ ಹೋಗುವುದಾದರೆ ಠಾಣೆಗೆ ಬಂದು ತಾವು ಎಲ್ಲಿಗೆ ಹೋಗುತ್ತಿದ್ದಿರಾ ಎಂಬುದರ ಮಾಹಿತಿ ನೀಡಿ ಹೋಗಬೇಕು ಎಂದರು.ಈ ವೇಳೆ ಎ.ಎಸ್.ಐ ರಾಜಣ್ಣ , ಸಿಬ್ಬಂದಿಗಳಾದ ಕುಮಾರ್,ಅನಿಲ್ ಹಾಗೂ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ