ಪ್ರಸ್ತುತ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು ಪೊಲೀಸ್ ಇಲಾಖೆ ಅಪರಾಧ ತಡೆಗಾಗಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಾ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದೆ. ಇದರ ಜೊತೆಗೆ ಅಪರಾಧಗಳನ್ನು ತಡೆಯುವಲ್ಲಿ ಸಾರ್ವಜನಿಕರ ಸಹಕಾರ ಪೊಲೀಸರಿಗೆ ಅತ್ಯಗತ್ಯವೆಂದು ಪೋಲಿಸ್ ಕಾನಸ್ಟೇಬಲ್ ರಂಗಸ್ವಾಮಿ ತಿಳಿಸಿದರು.
ಹುಳಿಯಾರು ಸಮೀಪದ ಲಿಂಗಪ್ಪನಪಾಳ್ಯದಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಪೊಲೀಸ್ ಕಾನಸ್ಟೇಬಲ್ ರಂಗಸ್ವಾಮಿ ಜನರಿಗೆ ಅರಿವು ಮೂಡಿಸಿದರು. |
ಹುಳಿಯಾರು ಹೋಬಳಿ ಲಿಂಗಪ್ಪನಪಾಳ್ಯದ ಶ್ರೀರಾಮದೇವರ ಆವರಣದಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಭಾನುವಾರ ನಡೆದ ಸಭೆಯಲ್ಲಿ ಅವರು ಸಾರ್ವಜನಿಕರಿಗೆ ಅಪರಾಧ ತಡೆ ಬಗ್ಗೆ ಕೆಲ ಮಾಹಿತಿಗಳನ್ನು ನೀಡಿದರು.
ನಗರ ಪ್ರದೇಶಗಳಲ್ಲದೆ ಗ್ರಾಮೀಣ ಪ್ರದೇಶದಲ್ಲೂ ಸಹ ಅನೇಕ ಅಪರಾಧ ಪ್ರಕರಣಗಳು ಘಟಿಸುತ್ತಿದ್ದು, ಹಳ್ಳಿಗಳ ಜನ ತಮಗೆ ತಿಳಿಯದೇ ಮೋಸಕ್ಕೆ ಬಲಿಯಾಗಿ ತಮ್ಮ ಒಡವೆ,ಹಣ ಸೇರಿದಂತೆ ಇನ್ನಿತ ವಸ್ತುಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂದರು. ಹಳ್ಳಿಯಲ್ಲಿ ಯಾರಾದರೂ ಅಪರಿಚಿತರು ಕಂಡುಬಂದರೆ ಕೂಡಲೇ ಠಾಣೆ ಸುದ್ದಿಮುಟ್ಟಿಸುವಂತೆ ಹಾಗೂ ಯಾರೋ ಅಪರಿಚಿತರು ತಮ್ಮ ಒಡವೆಗಳನ್ನು ಪಾಲಿಶ್ ಮಾಡಿಕೊಡುತ್ತೇವೆ ಎಂದು ತಮ್ಮನ್ನು ಮರುಳು ಮಾಡುತ್ತಾರೆ ಅಂತಹವರ ಮೇಲೋ ಸಹ ಎಚ್ಚರದಿಂದರಬೇಕು ಎಂದರು.
ಮನೆಯ ಯಜಮಾನರು ಇಲ್ಲದ ವೇಳೆ ತಮ್ಮ ಸಂಬಂಧಿಕರ ಹೆಸರು ಹೇಳಿಕೊಂಡು ಬಂದು ಮನೆಗೆ ನುಗ್ಗುವವರಿದ್ದಾರೆ ಈ ರೀತಿ ಯಾರೇ ಗುರುತು ಪರಿಚಯವಿಲ್ಲದವರು ಬಂದರೆ ಅಕ್ಕಪಕ್ಕದ ಮನೆಯವರನ್ನು ಕರೆದು ಸರಿಯಾಗಿ ವಿಚಾರಿಸಿ, ಇಲ್ಲವಾದರೆ ಠಾಣೆಗೆ ತಿಳಿಸಿ ಎಂದರು. ತಮ್ಮ ಹಳ್ಳಿಗಳಲ್ಲಿ ನಡೆಯುವ ಕಳ್ಳತನ ಸೇರಿದಂತೆ ಇನ್ನಿತರ ಪ್ರಕರಣಗಳ ಬಗ್ಗೆ ನಿಮಗೆ ತಿಳಿದ ವಿಷಯವನ್ನು ಭಯಪಡದೆ ಪೊಲೀಸ್ ನವರಿಗೆ ತಿಳಿಸುವುದರಿಂದ ಮುಂದೆ ನಡೆಯುವ ಹೆಚ್ಚಿನ ಅನಾಹುತವನ್ನು ತಪ್ಪಿಸಬಹುದಾಗಿದೆ ಎಂದರು. ಹಳ್ಳಿಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದರೆ ತಮ್ಮ ಮೊಬೈಲ್ ಸಂಖ್ಯೆ ೯೧೬೪೪೪೯೦೧೨ ಗೆ ಕರೆ ಮಾಡುವಂತೆ ತಿಳಿಸಿದರು. ಈ ವೇಳೆ ಗ್ರಾಮದ ಅನೇಕ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ