ಹುಳಿಯಾರು ಪಟ್ಟಣದ ರಾಂಗೋಪಾಲ್ ಸರ್ಕಲ್ ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ನೂತನ ಶಾಖೆಯನ್ನು ತೆರೆದಿದ್ದು ಪ್ರಾರಂಭೋತ್ಸವವನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿದೆ.
ಹುಳಿಯಾರಿನಲ್ಲಿ ಉದ್ಘಾಟನೆ ಸಿದ್ದವಾಗಿರುವ ಎಸ್.ಬಿ.ಎಂ. ನ ನೂತನ ಶಾಖೆ ಕಟ್ಟಡ. |
ನೂತನ ಶಾಖೆಯನ್ನು ಎಸ್.ಬಿ.ಎಂ.ನ ಜನರಲ್ ಮ್ಯಾನೇಜರ್ ಡಾ|| ಕೆ. ಲಕ್ಷ್ಮೀಶ ಉದ್ಘಾಟಿಸಲಿದ್ದು, ಬೆಂಗಳೂರು ನೆಟ್ ವರ್ಕ್ -೧ ನ ಜನರಲ್ ಮ್ಯಾನೇಜರ್ ಕೆ.ನಾಗೇಶ್ವರರಾವ್ , ಗ್ರಾ.ಪಂ.ಅಧ್ಯಕ್ಷ ಕಾಳಮ್ಮ, ಹುಳಿಯಾರು ಎಪಿಎಂಸಿ ಮಾರುಕಟ್ಟೆಯ ಅಧ್ಯಕ್ಷ ಸಣ್ಣಯ್ಯ, ತುಮಕೂರು ಪ್ರಾದೇಶಿಕ ಕಛೇರಿ-೪ರ ಸಹಾಯಕ ಪ್ರಧಾನ ವ್ಯವಸ್ಥಾಪಕ ಪಿ.ಶಂಕರ್ ರಾವ್ ಅತಿಥಿಗಳಾಗಿ ಆಗಮಿಸಲಿದ್ದಾರೆಂದು ಹುಳಿಯಾರು ಶಾಖೆಯ ವ್ಯವಸ್ಥಾಪಕರಾದ ಸಯ್ಯದ್ ಅಹಮದ್ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ