ಹುಳಿಯಾರು ಹೋಬಳಿ ದೊಡ್ಡಬಿದರೆ ಕರಿಯಮ್ಮ ದೇವಿ ದೇವಸ್ಥಾನದಲ್ಲಿ ಅಮವಾಸ್ಯೆ ಪೂಜೆಯ ಅಂಗವಾಗಿ ಮುಖ್ಯಪ್ರಾಣ ಭಜನಾ ಮಂಡಳಿಯವರು ಸೋಮವಾರ ರಾತ್ರಿಯಂದು ಭಜನಾಕಾರ್ಯ ನಡೆಸಿಕೊಟ್ಟರು.
ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮದ ಕರಿಯಮ್ಮ ದೇವಾಲಯದಲ್ಲಿ ಅಮವಾಸ್ಯೆ ಅಂಗವಾಗಿ ಮುಖ್ಯಪ್ರಾಣ ಭಜನಾ ತಂಡದವರು ಭಜನಾ ಕಾರ್ಯ ನಡೆಸಿಕೊಟ್ಟರು. |
ಅಮವಾಸ್ಯೆ ಅಂಗವಾಗಿ ಗ್ರಾಮದ ಯುವಕ ಸಂಘದಿಂದ ಅಮ್ಮನವರಿಗೆ ವಿಶೇಷ ಪೂಜೆ ನಡೆಯಿತು. ಡಿ.ಕೆ..ರಮೇಶ್ ಅವರ ಸೇವಾರ್ಥದಲ್ಲಿ ಮಂಗಳವಾರ ರಾತ್ರಿ ಭಜನಾಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಬಸ್ಟಾಂಡ್ ಹೋಟಲ್ ಗೋಪಾಲ್,ಸತೀಶ್,ನಾಗಣ್ಣ,ಬಟ್ಟೆಅಂಗಡಿ ಬಾಬು,ಭವಾನಿ ರಮೇಶ್,ಹಾರ್ಮೋನಿಯಂ ಮಾಸ್ಟರ್ ಹೊಸಳ್ಳಿ ಶ್ರೀನಿವಾಸ್,ತಬಲ ಕಾಟಪ್ಪನವರು ಸುಶ್ರಾವ್ಯವಾಗಿ ಹಾಡಿದ ಭಕ್ತಿಗೀತೆಗಳು,ದೇವರನಾಮ,ದಾಸರ ಪದಗಳ ಭಜನೆ ಭಕ್ತರ ಮನಸೂರೆಗೊಳಿಸಿತು. ದೇವಾಲಯ ಸಮಿತಿಯವರು ಆಗಮಿಸಿದ ಭಜನಪ್ರಿಯರಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ