ಮೈಸೂರು ಅರಸರ ಕಾಲದಲ್ಲಿ ಸ್ಥಾಪನೆಯಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಅಂದಿನಿಂದ ಇಂದಿನವರೆಗೂ ತನ್ನ ಗ್ರಾಹಕರಿಗೆ ಉತ್ತಮ ಸೇವೆ ಕೊಡುತ್ತಾ ಬಂದಿದ್ದು ಅದರಂತೆ ಹುಳಿಯಾರಿನಲ್ಲಿ ನೂತನವಾಗಿ ಪ್ರಾರಂಭವಾಗಿರುವ ನೂತನ ಶಾಖೆಯೂ ಸಹ ಗ್ರಾಹಕ ಸ್ನೇಹಿಯಾಗಿದ್ದು ಸಾರ್ವಜನಿಕರಿಗೆ ಉತ್ತಮ ಸೇವೆ ಕೊಡಲಿದೆ ಎಂದು ಜನರಲ್ ಮ್ಯಾನೇಜರ್ ಡಾ|| ಕೆ.ಲಕ್ಷ್ಮೀಶ್ ತಿಳಿಸಿದರು.
ಹುಳಿಯಾರಿನ ಮೈಸೂರ್ ಬ್ಯಾಂಕಿನ ನೂತನ ಶಾಖೆಗೆ ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ ಚಾಲನೆ ನೀಡಿದರು. |
ಹುಳಿಯಾರಿನ ಮೈಸೂರ್ ಬ್ಯಾಂಕಿನ ನೂತನ ಶಾಖೆಯನ್ನು ಜನರಲ್ ಮ್ಯಾನೇಜರ್ ಡಾ|| ಕೆ.ಲಕ್ಷ್ಮೀಶ್ ಉದ್ಘಾಟಿಸಿದರು. |
ಪಟ್ಟಣದ ರಾಮ್ ಗೋಪಾಲ್ ಸರ್ಕಲ್ ನಲ್ಲಿ ಶುಕ್ರವಾರ ಪ್ರಾರಂಭವಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್-ಹುಳಿಯಾರು ಶಾಖೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಎಸ್.ಬಿ.ಎಂ ತನ್ನ ಗ್ರಾಹಕರಿಗಾಗಿ ಅನೇಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಕೋಟ್ಯಾಂತರ ರೂಪಾಯಿ ವಹಿವಾಟು ನಡೆಸುತ್ತಾ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಕೃಷಿ ಚಟುವಟಿಕೆಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಹಾಗೂ ಇನ್ನಿತರ ವ್ಯವಹಾರಗಳಿಗೆ,ಕೈಗಾರಿಕೆಗಳಿಗೆ ಇತರೆ ಬ್ಯಾಂಕ್ ಗಳು ವಿಧಿಸುವ ಬಡ್ಡಿಗಿಂತ ಕಡಿಮೆಬಡ್ಡಿ ಹಾಗೂ ಸುಲಭ ರೀತಿಯಲ್ಲಿ ಸಾಲ ನೀಡುತ್ತಾ ಬಂದಿದೆ ಎಂದರು. ಚಿನ್ನಾಭರಣಗಳ ಮೇಲೆ ಶೇ.೪ ರಿಂದ ೧೦.೫ರವರೆಗೆ ವಾರ್ಷಿಕ ಬಡ್ಡಿದರವಿದೆ ಹಾಗೂ ವಾರದ ಎಲ್ಲಾ ದಿನವೂ ಲಭ್ಯವಿರುವುದಾಗಿ ತಿಳಿಸಿದರು.
ಹುಳಿಯಾರು ಪಟ್ಟಣದಲ್ಲಿ ನಡೆಯುವ ವ್ಯವಹಾರ ಹಾಗೂ ಇಲ್ಲಿನ ಪರಿಸರ ಹಾಗೂ ಇಲ್ಲಿನ ಅಭಿವೃದ್ದಿಯನ್ನು ನೋಡಿದರೆ ಇದು ಯಾವುದೇ ತಾಲ್ಲೂಕು ಕೇಂದ್ರಕ್ಕಿಂತ ಕಡಿಮೆಯಿಲ್ಲ ಇಂತಹ ಸ್ಥಳದಲ್ಲಿ ಎಸ್.ಬಿ.ಎಂ. ಶಾಖೆ ಕಳೆದ ಕೆಲ ವರ್ಷದ ಹಿಂದೆಯೇ ಸ್ಥಾಪನೆಯಾಗಬೇಕಿತ್ತು ತಡವಾಗಿಯಾದರೂ ಇದೀಗ ಪ್ರಾರಂಭವಾಗಿದ್ದು ಇದನ್ನು ನಿಮ್ಮೂರಿನ ಬ್ಯಾಂಕ್ ಎಂದೇ ತಿಳಿದು ಶಾಖೆಯಲ್ಲಿ ವ್ಯವಹರಿಸುವಂತೆ ತಿಳಿಸಿದರು.
ಬೆಂಗಳೂರು ನೆಟ್ ವರ್ಕ್ -೧ ಜನರಲ್ ಮ್ಯಾನೇಜರ್ ನಾಗೇಶ್ವರ ರಾವ್ ಮಾತನಾಡಿ , ಈ ಶಾಖೆ ಇದೀಗ ಜನಿಸಿದ ಮಗುವಿದ್ದಂತೆ ಇದನ್ನು ಬೆಳೆಸಿ ಉಳಿಸುವುದು ಗ್ರಾಹಕರಾದ ತಮ್ಮ ಕೈಲಿದೆ ಎಂದರು. ತಮ್ಮ ಬ್ಯಾಂಕ್ ವತಿಯಿಂದ ಗ್ರಾಹಕರಿಗೆ ಪಾಸ್ ಕಾರ್ಡ್ ಸೌಲಭ್ಯ, ಎಟಿಎಂ, ನೆಟ್ ಬ್ಯಾಂಕಿಂಕ್,ಮೊಬೈಲ್ ಬ್ಯಾಂಕಿಗೆ ಸೇರಿದಂತೆ ಇನ್ನಿತರ ಹೆಚ್ಚು ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಅದನ್ನು ಬಳಸಿಕೊಳ್ಳಿ ಹಾಗೂ ಯಾವುದೇ ರೀತಿಯ ಸಹಾಯಕ್ಕಾಗಿ ತಮ್ಮ ದೂರವಾಣಿ ಸಂಖ್ಯೆಗಳನ್ನು ಶಾಖೆಯ ಸೂಚನಫಲಕದಲ್ಲಿ ಹಾಕಲಾಗುತ್ತಿದ್ದು ಕರೆ ಮಾಡುವ ಮೂಲಕ ತಮ್ಮ ಸಮಸ್ಯೆ ತಿಳಿಸಿದಲ್ಲಿ , ಆ ಬಗ್ಗೆ ನಾವು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಗ್ರಾಹಕರ ಪರವಾಗಿ ಎಲ್.ಆರ್.ಚಂದ್ರಶೇಖರ್ ಮಾತನಾಡಿ, ಹುಳಿಯಾರು ಭಾಗದಲ್ಲಿ ಹೆಚ್ಚು ರೈತರಿದ್ದಾರೆ ಹಾಗೂ ಹೆಚ್ಚು ಮಹಿಳಾ ಸ್ವಹಾಯ ಸಂಘಗಳಿವೆ ಅವುಗಳಿಗೆ ಸಾಲ ಸೌಲಭ್ಯ ನೀಡಿ ಸಹಕರಿಸುವಂತೆ ಕೇಳಿಕೊಂಡರು.ಅಲ್ಲದೆ ಬ್ಯಾಂಕ್ ಸಿಬ್ಬಂದಿ ಗ್ರಾಹಕರೊಂದಿಗೆ ಉತ್ತಮವಾಗಿ ವರ್ತಿಸಿದಲ್ಲಿ ಮಾತ್ರವೇ ಬ್ಯಾಂಕ್ ಅಭಿವೃದ್ಧಿ ಸಾಧ್ಯ ಎಂದರು.
ಈ ವೇಳೆ ಎಪಿಎಂಸಿ ಅಧ್ಯಕ್ಷ ಸಣ್ಣಯ್ಯ, ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ,, ಸಹಾಯಕ ಪ್ರಧಾನ ವ್ಯವಸ್ಥಾಪಕ ಪಿ.ಶಂಕರ್ ರಾವ್ , ಹುಳಿಯಾರು ಶಾಖೆಯ ಮ್ಯಾನೇಜರ್ ಸಯ್ಯದ್ ಅಹಮದ್, ಕ್ಯಾಷಿಯರ್ ಮಾರುತಿ, ಹಂದನಕೆರೆ ಶಾಖೆಯ ಉಡುಪಿಕೃಷ್ಣ ಸೇರಿದಂತೆ ಸಿಬ್ಬಂದಿವರ್ಗ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ