ಕಂದಾಯ ಇಲಾಖೆಯಿಂದ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಪಟ್ಟಣದಲ್ಲಿ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಶನಿವಾರ ಹುಳಿಯಾರು ಅಮಾನಿಕೆರೆಯ ಮತ್ತೊಂದು ಭಾಗವಾದ ವಳಗೆರೆಹಳ್ಳಿ ಭಾಗದಲ್ಲಿ ಕೆರೆ ಒತ್ತುವರಿ ತೆರವು ಕಾರ್ಯ ನಡೆಯಿತು.
ಹುಳಿಯಾರಿನ ವಳಗೆರೆಹಳ್ಳಿಯ ತೆಂಗಿನ ತೋಟವೊಂದರಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿರುವುದು. |
ಶುಕ್ರವಾರದಂದು ಕೇಶವಾಪುರ ಭಾಗದಿಂದ ಕೆರೆ ಒತ್ತುವರಿ ತೆರವು ಕಾರ್ಯ ಪ್ರಾರಂಭವಾಗಿದ್ದು , ಶನಿವಾರ ವಳಗೆರೆಹಳ್ಳಿಯ ಸುತ್ತಮುತ್ತಲ ಕೆರೆ ಅಂಗಳದಲ್ಲಿದ್ದ ತೆಂಗಿನ ತೋಟಗಳಲ್ಲಿನ ಫಸಲು ಭರಿತ ತೆಂಗಿನ ಮರಗಳನ್ನು ಉರುಳಿಸುವ ಮೂಲಕ ಲಕ್ಷಾಂತರ ರೂ ಬೆಲೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ನರಸಿಂಹರಾವ್ ಹನುಂತರಾವ್ ಅವರಿಗೆ ಸೇರಿದ ೨೫ ತೆಂಗಿನ ಗಿಡ,ಲಿಂಗರಾಜ್ ಅವರ ೪ ತೆಂಗಿನಗಿಡ, ನರಸಣ್ಣ ೧೮,ಉಪ್ಪಿರಗಯ್ಯ ಅವರ ೬೦ ತೆಂಗಿನ ಮರಗಳನ್ನು ಧರೆಗುರುಳಿಸಲಾಯಿತು.೪೮೦ ಎಕರೆ ವಿಸ್ತೀರ್ಣವಿರುವ ಕೆರೆಯಲ್ಲಿ ೩ ಜೆಸಿಬಿ ಯಂತ್ರಗಳನ್ನು ಬಳಸಿ ಒತ್ತುವರಿ ತೆರವು ಮಾಡಲಾಗುತ್ತಿದೆ. ತಾಲ್ಲೂಕು ಸರ್ವೆಯರ್ ಬಸವರಾಜು,ಲಕ್ಷ್ಮಿನರಸಿಂಹಯ್ಯ, ಗ್ರಾಮ ಲೆಖ್ಖಿಗರಾದ ಸುಬ್ಬರಾಯಪ್ಪ, ಶ್ರೀನಿವಾಸ್ , ಕುಲಕರ್ಣಿ, ಜಕಣಾಚಾರಿ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿಯವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ