ರೈತರ ಕೃಷಿ ಚಟುವಟಿಕೆಗಳಲ್ಲಿ ನೆರವಾಗುವ ದೃಷ್ಠಿಯಿಂದ ಸರ್ಕಾರ ರೈತರಿಗೆ ಸಾಲ ವಿತರಿಸುತ್ತಿದೆ. ಕೃಷಿಗಾಗಿ ಪಡೆದ ಸಾಲವನ್ನು ಇನ್ನಿತರ ಉದ್ದೇಶಕ್ಕೆ ಬಳಸಿ ವೆಚ್ಚಮಾಡುವ ಬದಲು ಕೃಷಿಕಾರ್ಯಕ್ಕೆ ಮಾತ್ರವೇ ಬಳಸಿಕೊಳ್ಳಿ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜ್ ಕುಮಾರ್ ಸಲಹೆ ನೀಡಿದರು.
ಹುಳಿಯಾರು ಹೋಬಳಿ ಯಳನಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನಡೆದ ಸಾಲವಿತರಣಾ ಕಾರ್ಯಕ್ರಮದಲ್ಲಿ ಸಿಂಗದಹಳ್ಳಿ ರಾಜ್ ಕುಮಾರ್ ರೈತರಿಗೆ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಿಗೆ ಸಾಲವಿತರಿಸಿದರು |
ಹುಳಿಯಾರು ಹೋಬಳಿ ಯಳನಡು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದವತಿಯಿಂದ ಭಾನುವಾರ ಆಯೋಜಿಸಿದ್ದ ಸಾಲವಿತರಣಾ ಕಾರ್ಯಕ್ರಮದಲ್ಲಿ ರೈತರಿಗೆ ಹಾಗೂ ಸ್ವಸಹಾಯ ಗುಂಪುಗಳಿಗೆ ಸಾಲವಿತರಣೆ ಮಾಡಿ ಅವರು ಮಾತನಾಡಿದರು.
ರೈತರು ತಾವು ಪಡೆದ ಸಾಲವನ್ನು ಕೃಷಿಗೆ ಪೂರಕವಾಗಿ ಬಳಸಿದಾಗ ನಂತರ ಬರುವ ಆದಾಯದಲ್ಲಿ ಸಾಲವನ್ನು ಮರುಪಾವತಿ ಮಾಡಲು ಸಹಕಾರಿಯಾಗುತ್ತದೆ ಎಂದರು. ಸಾಲದಹಣವನ್ನು ದುಂದುವೆಚ್ಚ ಮಾಡಿದರೆ ಇದರಿಂದ ರೈತರೇ ತೊಂದರೆಗೆ ಸಿಲುಕಿಕೊಳ್ಳಬೇಕಾಗುತ್ತದೆ ಹಾಗೂ ಯಾರು ನಿಗದಿತ ಸಮಯದಲ್ಲಿ ಮರುಪಾವತಿ ಮಾಡುವುದಿಲ್ಲವೋ ಅಂತಹವರಿಗೆ ಪುನ: ಸಾಲವನ್ನು ವಿತರಿಸಲಾಗುವುದಿಲ್ಲ ಎಂದು ಎಚ್ಚರಿಸಿದರು. ಕೃಷಿ ಅಲ್ಲದೆ ಕೃಷಿಯೇತರ ಚಟುವಟಿಕೆಗಳಿಗೂ ಸಹ ಜಿಲ್ಲಾ ಬ್ಯಾಂಕ್ ವತಿಯಿಂದ ಸಾಲವಿತರಿಸುತ್ತಿದ್ದು ಗ್ರಾಮದ ೫ ಜನ ತಮ್ಮದೇ ಆದ ಒಂದು ಸಂಘಮಾಡಿಕೊಂಡು ಬಂದರೆ ಅವರಿಗೂ ಸಹ ಆರ್ಥಿಕ ನೆರವು ನೀಡುವ ಭರವಸೆ ನೀಡಿದರು.
ಸೊಸೈಟಿಯ ಅಧ್ಯಕ್ಷ ವಿಶ್ವೇಶ್ವರಯ್ಯ ಅಧ್ಯಕ್ಷತೆವಹಿಸಿದ್ದು ನಿರ್ದೇಶಕರಾದ ವೈ.ಆರ್.ಮಲ್ಲಿಕಣ್ಣ,ಸಿದ್ದು,ಶಿವಕುಮಾರ್, ಸುರೇಶ್,ಗಾರೆಸಿದ್ರಾಮಯ್ಯ,ದಯಾನಂದ್, ಜಯರಾಂ,ಭಾರತಮ್ಮ, ಜಗದೀಶ್ ಕಾರ್ಯದರ್ಶಿ ನಾಗರಾಜು,ಸಿಬ್ಬಂದಿವರ್ಗದ ಚಂದ್ರಶೇಖರ್,ವಿಜಯ್ ಕುಮಾರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ