ಉದ್ಯೋಗಖಾತ್ರಿಯಡಿ ಪ್ರಾರಂಭಿಸಲಾಗಿದ್ದ ಕಾಮಗಾರಿಗಳಿಗೆ ಪೂರಹಣ ಬಿಡುಗಡೆ ಮಾಡುವವರೆಗು ಸ್ಥಳದಿಂದ ಕಾಲ್ತೆಗೆಯುವುದಿಲ್ಲ ಎಂದು ಪಟ್ಟುಹಿಡಿದಿರುವ ಫಲಾನುಭವಿಗಳು ಕಾರ್ಯದರ್ಶಿ ಹಾಗೂ ಪಿಡಿಓ ಅವರನ್ನು ಊರಿಗೆ ತೆರಳು ಬಿಡದೆ ತಮ್ಮೊಂದಿಗೆ ಕೂರಿಸಿಕೊಂಡಿದ್ದಾರೆ.
ಹೋಬಳಿ ಯಳನಡು ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಹಣ ಪಾವತಿ ಮಾಡುವಂತೆ ಒತ್ತಾಯಿಸಿ ಗ್ರಾ.ಪಂ.ಸದಸ್ಯರು ಹಾಗೂ ರೈತರು ಆರಂಭಿಸಿದ ಆಹೋರಾತ್ರಿ ಧರಣಿ ಎರಡನೇ ದಿನವೂ ಮುಂದುವರಿದಿದ್ದು ಸದ್ಯ ಮುಗಿಯುವ ಲಕ್ಷಣ ಗೋಚರಿಸುತ್ತಿಲ್ಲ.ಹುಳಿಯಾರು ಹೋಬಳಿ ಯಳನಡುವಿನಲ್ಲಿ ಶನಿವಾರ ರಾತ್ರಿಯೂ ಮುಂದುವರಿದ ಆಹೋರಾತ್ರಿ ಧರಣಿ. |
ಏನಿದು ಸಮಸ್ಯೆ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಮಂಜೂರಾಗಿದ್ದ ಶೌಚಾಲಯ, ಇಂಗುಗುಂಡಿ, ದನದಕೊಟ್ಟಿಗೆ, ಪಿಕಪ್ ಸೇರಿದಂತೆ ಇನ್ನಿತರ ಕಾಮಗಾರಿಗಳು ಸಂಪೂರ್ಣವಾಗಿ ಮುಗಿದಿದ್ದರೂ ಸಹ ಅದಕ್ಕೆ ಮಾಡಿದ ಹಣ ನೀಡುವಲ್ಲಿ ಇಲಾಖೆ ಮೀನಾಮೇಷ ಎಣಿಸುತ್ತಿದೆ. ಇದರಿಂದ ಕಾಮಗಾರಿಗಾಗಿ ಸಾಲಸೋಲ ಮಾಡಿದ್ದ ಫಲಾನುಭವಿಗಳು ಪರಿತಪಿಸುವಂತಾಗಿದ್ದು, ಇದುವರೆಗೂ ನಡೆದಿರುವ ಕಾಮಗಾರಿಗಳ ಸಂಪೂರ್ಣ ಹಣವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಿ ಶುಕ್ರವಾರದಿಂದ ಗ್ರಾ.ಪಂ.ಎದುರು ಧರಣಿ ಆರಂಬಿಸಿದ್ದರು.
ಶುಕ್ರವಾರ ಬೆಳಿಗ್ಗೆ ಧರಣಿ ಪ್ರಾರಂಭವಾಗಿ ಶನಿವಾರ ಕಳೆದರೂ ಸಹ ಸಂಬಂಧಪಟ್ಟ ಯಾವ ಅಧಿಕಾರಿಯೂ ಇತ್ತ ಸುಳಿಯಲಿಲ್ಲ. ಇದರಿಂದ ರೊಚ್ಚಿಗೆದ್ದಿರುವ ಧರಣಿನಿರತರು ಕಾರ್ಯದರ್ಶಿ ಹಾಗೂ ಪಿಡಿಓ ಅವರಿಗೆ ದಿಗ್ಬಂಧನ ವಿಧಿಸಿ ಅವರನ್ನು ಸ್ಥಳದಿಂದ ಕದಲಲು ಅವಕಾಶ ಕೊಡದೆ ತಮ್ಮೊಂದಿಗೆ ಕೂರಿಸಿಕೊಂಡಿದ್ದಾರೆ.
ಸದ್ಯ ಶೌಚಾಲಯದ ಹಣ ಬಿಡುಗಡೆ ಮಾಡಿರುವುದಾಗಿ ಸಂಜೆ ಇಓ ಮಾಹಿತಿ ನೀಡಿದ್ದರೂ ಒಪ್ಪದೆ ನೀವೂ ಖುದ್ದು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವವರೆಗೆ ಧರಣಿ ಮುಂದುವರಿಯಲಿದೆ ಎಂದು ಎಚ್ಚರಿಸಿರುವ ಗ್ರಾಮಸ್ಥರು ಭಾನುವಾರ ಸಂಜೆ ಒಳಗೆ ಸಮಸ್ಯೆ ಬಗೆಹರಿಸುವಂತೆ ಗಡುವು ನೀಡಿದ್ದಾರೆ. ಧರಣಿಯಲ್ಲಿ ರೈತಸಂಘದ ಕೆಂಕೆರೆ ಸತೀಶ್,ಮಲ್ಲಿಕಣ್ಣ, ಗ್ರಾಮಸ್ಥರಾದ ಗುರುಪ್ರಸಾದ್, ಸದಸ್ಯರಾದ ಸಿದ್ದು,ಶಿವಣ್ಣ,ಉಮೇಶ್,ಗುರುಪ್ರಸಾದ್, ರಾಮಚಂದ್ರಯ್ಯ,ಬಂಡಿಸಿದ್ರಾಮಯ್ಯ,ಸಿದ್ದರಾಮಯ್ಯ,ಲೋಕೇಶ್ ಇತರರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ