ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಡ್ಧಿಯೋಜನೆಯು ಯಾವುದೇ ಜಾತಿ,ಮತ ಬೇಧವಿಲ್ಲದೆ ಸಮಾಜದ ಎಲ್ಲರೂ ಸಮಾನರೆಂದು ಭಾವಿಸಿ ಸಂಘಗಳನ್ನು ಸ್ಥಾಪಿಸುತ್ತಾ ಎಲ್ಲಾ ಜನಾಂಗದವರನ್ನು ಒಂದೆಡೆ ಕ್ರೋಡೀಕರಿಸಿ ಸಮಾಜದ ಒಗ್ಗೂಡಿಕೆಯ ಕಾರ್ಯ ಮಾಡುವಲ್ಲಿ ಮುಂದಾಗಿದೆ ಎಂದು ಕುಪ್ಪೂರು ಗದ್ದಿಗೆಮಠದ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಮತವ್ಯಕ್ತಪಡಿಸಿದರು.
ಹುಳಿಯಾರಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಡ್ಧಿಯೋಜನೆಯಡಿ ನಡೆದ ಸಾಧನ ಸಮಾವೇಶವನ್ನು ಕುಪ್ಪೂರು ಗದ್ದಿಗೆಮಠದ ಯತೀಶ್ವರ ಶಿವಾಚಾರ್ಯ ಮಹಾಸ್ವಾಮಿಜಿ ಉದ್ಘಾಟಿಸಿದರು. |
ಹುಳಿಯಾರಿನ ಎಂಪಿಎಸ್ ಶಾಲಾವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಡ್ಧಿಯೋಜನೆಯಡಿ ಭಾನುವಾರ ನಡೆದ ಹುಳಿಯಾರು ವಲಯದಲ್ಲಿ ನೂತನ ೫೧ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಉದ್ಘಾಟನೆ ಹಾಗೂ ಸಾಧನ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹುಳಿಯಾರಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಡ್ಧಿಯೋಜನೆಯಡಿ ನಡೆದ ಸಾಧನ ಸಮಾವೇಶವದಲ್ಲಿ ಭಾಗವಹಿಸಿದ್ದ ಪ್ರಗತಿಬಂಧು ಸ್ವಸಹಾಯಸಂಘದ ಅಪಾರ ಸಂಖ್ಯೆಯ ಮಹಿಳೆಯರು. |
ಶ್ರೀಕ್ಷೇತ್ರದ ಡಾ.ವೀರೇಂದ್ರ ಹೆಗ್ಗಡೆಯವರ ಈ ವಿನೂತ ಯೋಜನೆ ಅನೇಕ ಬಡವರಿಗೆ ದಾರಿದೀಪವಾಗಿದ್ದು , ಸಮಾಜದಲ್ಲಿ ಹಿಂದುಳಿದವರ ಅಭಿವೃಧ್ದಿಗೆ ಸಹಕಾರಿಗಾಗಿದೆ ಎಂದರು. ಈ ಯೋಜನೆಯಡಿ ಕೇವಲ ಸಾಲ ಕೊಟ್ಟು ವಸೂಲಿ ಮಾಡುವುದರ ಜೊತೆಗೆ ಜನರ ಶ್ರಯೋಭಿವೃದ್ಧಿಯಿಂದ ಅನೇಕ ಗುಡಿಕೈಗಾರಿಕೆಗಳಿಗೆ ಪ್ರೋತ್ಸಾಹ, ಮದ್ಯವರ್ಜನ ಶಿಬಿರಗಳು,ಮಹಿಳೆಯರ ಸಮಾವೇಶ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಾಜದ ಜನರಲ್ಲಿ ಭಾವನಾತ್ಮಕ ಮನೋಭಾವವನ್ನು ಬೆಳೆಸುತ್ತಿದ್ದಾರೆ ಎಂದು ತಿಳಿಸಿದರು.
ಧರ್ಮಸ್ಥಳ ಸಂಘದ ತಾಲ್ಲೂಕು ಯೋಜನಾಧಿಕಾರಿ ರೋಹಿತಾಕ್ಷ ಮಾತನಾಡಿ, ಧರ್ಮಸ್ಥಳ ಸಂಘ ಕೋಟ್ಯಾಂತರ ರೂಪಾಯಿ ಸಾಲಸೌಲಭ್ಯ ನೀಡುತ್ತಾ ಜನಸಮುದಾಯದ ಆರ್ಥಿಕ ಪ್ರಗತಿಗೆ ನೆರವಾಗುತ್ತಿದೆ ಇದರ ಪ್ರೇರಣಶಕ್ತಿಯಾಗಿ ವೀರೇಂದ್ರ ಹೆಗ್ಗಡೆಯವರಿದ್ದಾರೆ ಎಂದರು. ಪ್ರತಿ ಗ್ರಾಮದಲ್ಲೂ ಸಹ ಹೆಚ್ಚು ಜನ ತಮ್ಮ ಸಂಘ ಸೇರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಗ್ರಾ.ಪಂ.ಅಧ್ಯಕ್ಷೆ ಕಾಳಮ್ಮ ಅಧ್ಯಕ್ಷತೆವಹಿಸಿದ್ದು, ಬ್ರಹ್ಮಕುಮಾರಿ ಈಶ್ವರಿವಿದ್ಯಾಲಯದ ಗೀತಕ್ಕ,ರೋಟರಿ ಸಂಸ್ಥೆಯ ರವೀಶ್,ಮುಖ್ಯಶಿಕ್ಷಕ ನಂದವಾಡಗಿ, ತಾ.ಪಂ.ಸದಸ್ಯೆ ಬೀಬೀಫಾತೀಮಾ,ಮುಖಂಡರಾದ ನಂದಿಹಳ್ಳಿ ಶಿವಣ್ಣ,ಜಲಾಲ್ ಸಾಬ್,ಸಂಘಾದ ಮೇಲ್ವಿಚಾರಕ ಕಮಲಾಕರ್, ಕೆಂಕೆರೆ ಒಕ್ಕೂಟದ ಅಧ್ಯಕ್ಷ ದೊರೆಚನ್ನಬಸವಯ್ಯ,,ಗಿರಿಜಮ್ಮ,ಮಂಜುನಾಥ್ ಸೇರಿದಂತೆ ಸ್ವಸಹಾಯ ಸಂಘಗಳ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಮಾವೇಶಕ್ಕೆ ಆಗಮಿಸಿದ್ದವರಿಗೆ ಅಂಜನಾದ್ರಿ ಟ್ರೇಡರ್ಸ್ ನವರು ಮಜ್ಜಿಗೆ ವಿತರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ