ಹುಳಿಯಾರು ಪಟ್ಟಣದ ಇತಿಹಾಸಪ್ರಸಿದ್ಧ ಅನಂತಶಯನ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಇಂದು ಗುರುವಾರ ವೈಕುಂಠ ಏಕಾದಶಿ ಆಚರಣೆಗೆ ಸಿದ್ದತೆ ಭರದಿಂದ ಸಾಗಿದೆ.
ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದ ವೈಕುಂಠ ಏಕಾದಶಿ ಸಮಿತಿಯ ಅಧ್ಯಕ್ಷ ಧನುಷ್ ರಂಗನಾಥ್ ಗುರುವಾರ ಸಂಜೆಯಿಂದ ಸಪ್ತದ್ವಾರದ ಮೂಲಕ ವೈಕುಂಠ ನಾರಾಯಣ ದರ್ಶನಕ್ಕೆ ಭಕ್ತಾಧಿಗಳಿಗೆ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.
ಗುರುವಾರದಂದು ವೈಕುಂಠ ಏಕಾದಶಿ ಅಂಗವಾಗಿ ರಂಗನಾಥಸ್ವಾಮಿಗೆ ಅಭಿಷೇಕ,ಅರ್ಚನೆ,ಅಲಂಕಾರ ಸೇರಿದಂತೆ ವಿವಿಧ ಪೂಜಾಕೈಂಕರ್ಯಗಳನ್ನು ನಡೆಯಲಿದ್ದು, ಗ್ರಾಮದೇವತೆ ಹುಳಿಯಾರಮ್ಮ ಹಾಗೂ ದುರ್ಗಮ್ಮನವರ ಆಗಮನ ದೊಂದಿಗೆ ಮಹಾಲಕ್ಷ್ಮಿ-ಮಾಹಾವಿಷ್ಟು ಹೋಮ ಹಮ್ಮಿಕೊಳ್ಳಲಾಗಿದೆ. ಸಂಜೆ ಸ್ವಾಮಿಯನ್ನು ವಿಶೇಷವಾಗಿ ಅಲಂಕರಿಸಿ ಸಪ್ತದ್ವಾರದದ ಮೂಲಕ ಸ್ವಾಮಿಯ ದರ್ಶನ ನಡೆಯಲಿದ್ದು ಭಕ್ತಾಧಿಗಳಿಗಾಗಿ ಲಾಡು,ಗೊಜ್ಜವಲಕ್ಕಿ ವ್ಯವಸ್ಥೆ ಸೇವಾಕರ್ಥರಿಂದ ಮಾಡಿದ್ದು, ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ಸ್ವಾಮಿಯ ದರ್ಶನ ಪಡೆಯುವಂತೆ ಅವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ