ಹುಳಿಯಾರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಸಹಕಾರ್ಯದರ್ಶಿ ಸೇರಿದಂತೆ ಒಟ್ಟು ೧೭ ಮಂದಿ ತಂಡ ಭಾರತ ದರ್ಶನ ಯೋಜನೆಯಡಿ ಉತ್ತರ ಭಾರತದ ವಿವಿಧ ಭಾಗಗಳಿಗೆ ಇದೇ ೨೨ರಂದು ಪ್ರವಾಸ ತೆರಳಿದ್ದಾರೆ.
ಹುಳಿಯಾರು ಎಪಿಎಂಸಿ ಅಧ್ಯಕ್ಷ ಹಾಗೂ ಸದಸ್ಯರ ತಂಡ ಕೃಷಿ ಅಧ್ಯಯ ಪ್ರವಾಸದಲ್ಲಿ ದೆಹಲಿಯಲ್ಲಿ ಸಂಸದ ಮುದ್ದಹನುಮೇ ಗೌಡ.ಅವರನ್ನು ಭೇಟಿ ಮಾಡಿರುವುದು. |
ವಿವಿಧ ರಾಜ್ಯಗಳ ಕೃಷಿ ಉತ್ಪನ್ನಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ೧೫ ದಿನಗಳ ಪ್ರವಾಸ ಕೈಗೊಂಡಿದ್ದು,ತಮ್ಮ ಅಧ್ಯಯನಪ್ರವಾಸದಲ್ಲಿ ಉತ್ತರ ಭಾರತದ ವಿವಿಧ ರಾಜ್ಯದಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗಳಿಗೆ ಖುದ್ದು ಭೇಟಿ ನೀಡಿ ಅಲ್ಲಿ ನಡೆಯುವ ವ್ಯಾಪಾರ ವಹಿವಾಟು ಹಾಗೂ ಅಲ್ಲಿ ಕೈಗೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಎಪಿಎಂಸಿ ಅಧ್ಯಕ್ಷ ಸಣ್ಣಪ್ಪ ನೇತೃತ್ವದ ತಂಡ ದೆಹಲಿ,ಚಂಡೀಗಡ, ಮನಾಲಿ,ಧರ್ಮಶಾಲಾ,ಅಮೃತಸರ, ಆಗ್ರಾ ,ಜೈಪುರ,ರೂರ್ಕಿ,ಜಮ್ಮು,ಬಿಲ್ಲಾಸ್ ಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಲಿದ್ದಾರೆ. ಉಪಾಧ್ಯಕ್ಷೆ ದ್ರಾಕ್ಷಾಯಣಮ್ಮ, ನಿರ್ದೇಶಕರಾದ ಸಿದ್ರಾಮಯ್ಯ,ಶಿವರಾಜ್,ಸಿಂಗದಳ್ಳಿ ರಾಜ್ ಕುಮಾರ್,ಶಾಂತಕುಮಾರ್, ಸೋಮಶೇಖರಯ್ಯ, ಶಿವಕುಮಾರ್,ರುದ್ರೇಶ್, ಭವ್ಯ ಸೇರಿದಂತೆ ಇತರರು ಪ್ರವಾಸದಲ್ಲಿ ಪಾಲ್ಗೊಂಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ