ಸಹೋದರ ಗ್ರೂಪ್ ವತಿಯಿಂದ ಬೆಂಗಳೂರಿನಲ್ಲಿ ನಡೆದ ಚೆಸ್ ಕ್ರೀಡಾಕೂಟದಲ್ಲಿ ಪಟ್ಟಣದ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಶಾಲಾ ಮಕ್ಕಳು ಸ್ಪರ್ಧಿಸಿ, ಪ್ರಥಮ ,ದ್ವಿತೀಯ ಹಾಗೂ ತೃತೀಯ ಸ್ಥಾನಪಡೆಯುವ ಮೂಲಕ ಶಾಲೆಗೆ ಕೀರ್ತಿತಂದಿದ್ದಾರೆ.
ಚೆಸ್ ಹಾಗೂ ಪ್ರತಿಭಾಕಾರಂಜಿಯಲ್ಲಿ ವಿಜೇತರಾದ ಹುಳಿಯಾರಿನ ವಿದ್ಯಾವಾರಿಧಿಶಾಲ ಮಕ್ಕಳನ್ನು ಕಾರ್ಯದರ್ಶಿ ಕವಿತಾಕಿರಣ್ ಸನ್ಮಾನಿಸಿದರು. ಪ್ರಾಂಶುಪಾಲ ರವಿ ಹಾಗೂ ಶಿಕ್ಷಕರು, ಪೋಷಕರಿದ್ದಾರೆ. |
ಭಾವನ ಪ್ರಥಮ, ಸುಭಾಷ್ ದ್ವಿತೀಯ ಹಾಗೂ ಸ್ನೇಹ ತೃತೀಯ ಸ್ಥಾನಪಡೆದರೆ, ಜಿಲ್ಲಾಮಟ್ಟಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಆಂಗ್ಲಭಾಷೆ ಭಾಷಣದಲ್ಲಿ ರಂಜಿತ್ ಹಾಗೂ ಲಘು ಸಂಗೀತ ಗಾಯನದಲ್ಲಿ ರಮೇಶ್ ದ್ವಿತೀಯ ಸ್ಥಾನಪಡೆದಿದ್ದಾರೆ.
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳನ್ನು ಅಭಿನಂದಿಸಿದ ಶಾಲೆಯ ಕಾರ್ಯದರ್ಶಿ ಕವಿತಾಕಿರಣ್ ಮಾತನಾಡಿ, ನಮ್ಮ ಶಾಲೆಯ ಮಕ್ಕಳು ನಗರ ಪ್ರದೇಶ ಮಕ್ಕಳಿಗಿಂತ ಉತ್ತಮ ಪ್ರದರ್ಶನ ನೀಡಿ ಕ್ರೀಡಾಕೂಟದಲ್ಲಿ ವಿಜೇತರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಗ್ರಾಮೀಣ ಪ್ರದೇಶದಲ್ಲಿದ್ದರೂ ಸಹ ಸಹಪಠ್ಯಚಟುವಟಿಕೆಗಳಲ್ಲಿ ಉತ್ತಮ ಪ್ರತಿಭೆ ತೊರಿದ್ದಾರೆಂದು ಶ್ಲಾಘಿಸಿದರಲ್ಲದೆ ಮಕ್ಕಳು ತಮ್ಮ ಪ್ರತಿಭೆಯಿಂದ ಶಾಲೆ ಹಾಗೂ ಪೋಷಕರಿಗೆ ಕೀರ್ತಿ ತಂದಿದ್ದಾರೆ ಎಂದರು.
ಪ್ರಾಂಶುಪಾಲ ರವಿ ಮಾತನಾಡಿ , ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆ ಹಾಗೂ ಕ್ರೀಡಾಕೂಟಗಳಲ್ಲಿ ಹೆಚ್ಚು ಆಸಕ್ತಿ ತೋರಿಸಿದಲ್ಲಿ ಸರ್ವಾಂಗೀಣ ಪ್ರಗತಿ ಸಾಧ್ಯ ಎಂದರು. ವಿಜೇತ ಮಕ್ಕಳೊಂದಿಗೆ ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ