ಅಡುಗೆ ತಯಾರಿಸಲು ಬಳಸುವ ಇಂಧನವನ್ನು ಉಪಯೋಗಿಸದೆ ಬಗೆಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುವ ಪ್ರದರ್ಶನ ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಮಕ್ಕಳಿಂದ ನಡೆಯಿತು.ಉತ್ತಮ ಆರೋಗ್ಯ ರಕ್ಷಣೆಗಾಗಿ ಪೌಷ್ಟಿಕಾಂಶವುಳ್ಳ ಹಸಿ ಪದಾರ್ಥಗಳ ಬಳಕೆ ಹಾಗೂ ಇಂಧನದ ಉಳಿತಾಯದ ಬಗ್ಗೆ ಜಾಗೃತಿ ಉಂಟುಮಾಡುವ ನಿಟ್ಟಿನಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಸ್ವತ: ತಾವೇ ಹಸಿ ಪಸಿದಾರ್ಥಗಗಳನ್ನು ತಂದು ಸಿದ್ದ ಆಹಾರ ತಯಾರಿಸಿ ಶಿಕ್ಷಕರನ್ನು ನಿಬ್ಬೆರಗಾಗುವಂತೆ ಮಾಡಿದರು.
ಹುಳಿಯಾರಿನ ವಿದ್ಯಾವಾರಿಧಿ ಶಾಲೆಯ ಮಕ್ಕಳು ಹಸಿ ಪದಾರ್ಥಗಳನ್ನು ತಯಾರಿಸಿ ಪ್ರದರ್ಶಿಸಿದರು. |
ಪಟ್ಟಣದ ವಿದ್ಯಾವಾರಿಧಿ ಶಾಲೆಯ ಕಾರ್ಯದರ್ಶಿ ಕವಿತಾ ಕಿರಣ್ ಕುಮಾರ್ ತಮ್ಮ ಶಾಲೆಯಲ್ಲಿ ಮಕ್ಕಳಿಗಾಗಿ ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಈ ಬಾರಿ ಫುಡ್ ವಿತೌಟ್ ಫೈರ್ ಎಂಬ ಕಾರ್ಯಕ್ರಮದ ಮೂಲಕ ಇಂಧನ ಬಳಸದೆ ಹಸಿ ಪದಾರ್ಥದಿಂದ ಏನೆಲ್ಲಾ ಆಹಾರ ಪದಾರ್ಥಗಳನ್ನು ತಯಾರಿಸಬಹುದೆಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದರು.
ತಯಾರಿಸಿದ್ದೇನು: ಕ್ಯಾರೆಟ್ ,ಸೌತೇಕಾಯಿ,ಮೂಲಂಗಿ, ಹೆಸರುಕಾಳು,ಕಡ್ಲೆಕಾಳು ಮುಂತಾದ ಹಸಿ ತರಕಾರಿ-ಕಾಳುಗಳಿಂದ ಬಗೆಬಗೆಯ ಕೋಸಂಬರಿ ಹಾಗೂ ಇನ್ನಿತರ ಖಾದ್ಯಗಳನ್ನು ತಯಾರಿಸಿದರೆ, ಡ್ರೈಪ್ರೂಟ್ಸ್ ಹಾಗೂ ಬಾಳೆಹಣ್ಣಿನಿಂದ ರಸಾಯನ, ಸೇಬು,ಮೊಸಂಬಿ,ಸಪೋಟ,ಅನಾನಸ್ ಸೇರಿದಂತೆ ಇನ್ನಿತರ ಹಣ್ಣುಗಳಿಂದ ತಂಪು ಪಾನೀಯ ಸಿದ್ದಪಡಿಸಿದ್ದರು. ಅಲ್ಲದೆ ಟಮೋಟೊ ಸ್ಲೈಸ್,ಚುರುಮುರಿ , ಬೇಲ್ ಪುರಿ ಸೇರಿದಂತೆ ಮುಂತಾದ ಚಾಟ್ಸ್ ತಯಾರಿಸಿದ್ದರು.
ಪ್ರದರ್ಶನ ಉದ್ದೇಶಿಸಿ ಮಾತನಾಡಿದ ಕವಿತಾಕಿರಣ್ ಬೇಯಿಸದೆ ಬಳಸಲಾದ ಹಸಿತರಕಾರಿಗಳು ಆರೋಗ್ಯಕ್ಕೆ ಹೇಗೆ ಪೂರಕ ಹಾಗೂ ಜಂಕ್ ಫುಡ್ ಗಳು ಆರೋಗ್ಯಕ್ಕೆ ಹೇಗೆ ಮಾರಕ ಎಂಬ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮನೆಯಲ್ಲಿ ಪೋಷಕರು ಹೊರ ಹೋಗಿದ್ದ ಸಂದರ್ಭದಲ್ಲಿ ಮಕ್ಕಳೇ ಹೇಗೆ ಸುಲಭವಾಗಿ ಆಹಾರ ಪದಾರ್ಥಗಳನ್ನು ತಯಾರಿಸಿಕೊಳ್ಳಲು ಸಾಧ್ಯ ಎಂಬುದರ ಬಗ್ಗೆ ತಿಳಿಸಿದರು.
ಮಕ್ಕಳು ನುರಿತ ಅಡುಗೆಯವರಿಗಿಂತ ಹೆಚ್ಚಾಗಿ ಬಾಯಿಚಪ್ಪರಿಸುವಂತೆ ಮಾಡಿದ್ದ ಆಹಾರ ಪದಾರ್ಥಗಳನ್ನು ಸವಿದ ಶಿಕ್ಷಕರುಗಳು ರುಚಿಕರವಾಗಿ ತಯಾರು ಮಾಡಿದ ಮಕ್ಕಳಿಗೆ ಬಹುಮಾನ ವಿತರಿಸಿದರು.ಪ್ರಾಂಶುಪಾಲ ರವಿ ಸೇರಿದಂತೆ ಶಾಲಾ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಹಾಜರಿದ್ದು ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ