ವಿಷಯಕ್ಕೆ ಹೋಗಿ

ಹೊಸ ವರ್ಷಕ್ಕೆ ತರಹೇವಾರಿ ಕೇಕ್ ರೆಡಿ

ಹೊಸ ವರ್ಷದ ಆಗಮನದ ಹಿನ್ನಲೆಯಲ್ಲಿ ಪಟ್ಟಣದ ವಿವಿಧ ಬೇಕರಿಗಳಲ್ಲಿ ಬಗೆಬಗೆಯ ಕೇಕ್ ಗಳ ತಯಾರಿ ಹಾಗೂ ಮಾರಾಟ ಭರದಿಂದ ಸಾಗಿದ್ದು ಗ್ರಾಹಕರ ಗಮನ ಸೆಳೆಯುತ್ತಿವೆ.
ಹುಳಿಯಾರಿನ್ ಬಸ್ ನಿಲ್ದಾಣದ ನಂಜುಂಡೇಶ್ವರ ಬೇಕರಿಯಲ್ಲಿ ಹೊಸವರ್ಷದ ಅಂಗವಾಗಿ ತಹರೇವಾರಿ ಕೇಕ್ ಗಳನ್ನು ಪ್ರದರ್ಶಿಸಿರುವುದು.
ನೂತನ ವರ್ಷದ ಸಂಭ್ರಮಾಚರಣೆಯನ್ನು ಕೇಕ್ ಕತ್ತರಿಸಿ ಸಿಹಿ ಹಂಚಿ ಆಚರಿಸುವ ಪರಿಪಾಟವಿದ್ದು ಆ ನಿಟ್ಟಿನಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಜನರನ್ನು ತೃಪ್ತಿಪಡಿಸುವಲ್ಲಿ ಪಟ್ಟಣದ ಬಸ್ ನಿಲ್ದಾಣದ ನಂಜುಂಡೇಶ್ವರ ಬೇಕರಿ, ಎಸ್.ಎಲ್.ಆರ್.ಬೇಕರಿ, ಬೆಂಗಳೂರು ಬೇಕರಿ,ಲಕ್ಷ್ಮಿಬೇಕರಿ, ವೆಂಕಟೇಶ್ವರ ಬೇಕರಿ, ಲಕ್ಷ್ಮಿನರಸಿಂಹಸ್ವಾಮಿ ಬೇಕರಿ,ಸಿದ್ದಲಿಂಗೇಶ್ವರ ಬೇಕರಿ,ಗಣೇಶ್ ಬೇಕರಿಗಳಲ್ಲಿ ಮಂಗಳವಾರದಿಂದ ವಿವಿಧ ಕೇಕ್ ಗಳ ತಯಾರಿ,ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ.
ಕಳೆದ ಹತ್ತದೈನಿದು ವರ್ಷದಿಂದ ಬೇಕರಿ ನಡೆಸುತ್ತಿದ್ದು ಮಾಮೂಲಿ ದಿನಕ್ಕಿಂತ ಹೊಸವರ್ಷದ ಆಚರಣೆಯ ವೇಳೆ ಹೆಚ್ಚಿನ ಕೇಕ್ ಬಿಕರಿಯಾಗುತ್ತದೆ. ಅದಕ್ಕಾಗಿ ಗ್ರಾಹಕರ ಬಯಕೆಗೆ ತಕ್ಕಂತೆ ಕೇಕ್ ಗಳನ್ನು ಸಿದ್ದಪಡಿಸಿ ಮಾರುತ್ತಿದ್ದೇವೆ. ಗ್ರಾಹಕರಿಂದ ಅರ್ಡರ್ ತೆಗೆದುಕೊಂಡು ಕೆಲ ಕೇಕ್ ತಯಾರಿಸಿದರೆ , ಮತ್ತೆ ಕೆಲ ಕೇಕ್ ಗಳನ್ನು ವಿವಿಧ ಮಾದರಿಗಳಲ್ಲಿ ತಾವೇ ತಯಾರಿಸುತ್ತೇವೆ ಎನ್ನುತ್ತಾರೆ ನಂಜುಂಡೇಶ್ವರ ಬೇಕರಿಯ ರವಿ ತಿಳಿಸುತ್ತಾರೆ.
ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಕೇಕ್ ಗೆ ೧೬೦ ರಿಂದ ೨೦೦ ರೂ ಇದೆ. ಕೆಲ ಡಿಸೈನ್ ನ ಕೇಕ್ ಬೇರೇಬೇರೇ ಬೆಲೆಯಲ್ಲಿ ಮಾರಾಟವಾಗುತ್ತಿವೆ. ತಮ್ಮ ಅಂಗಡಿಯಲ್ಲಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಅಂದರೆ ೫೦ ರೂ ನಿಂದ ೫೦೦ ರೂವರೆಗೆ ಕೇಕ್ ಗಳನ್ನು ಸಿದ್ದ ಮಾಡಿದ್ದು ಕೊಳ್ಳುವವರು ತಮಗಿಷ್ಟವಾದ ಕೇಕ್ ಕೊಂಡೊಯ್ಯಬಹುದಾಗಿದೆ. ಅಲ್ಲದೆ ಹೊಸವರ್ಷದ ಅಫರ್ ಆಗಿ ೪ ಕೆಜಿ ಮೇಲ್ಪಟ್ಟು ಕೇಕ್ ಕೊಂಡರ್ ಅದರ ಜೊತೆಯಲ್ಲಿ ಉಚಿತವಾಗಿ ತಂಪುಪಾನಿಯ ಕೊಡುತ್ತಿರುವುದಾಗಿ ಅವರು ತಿಳಿಸುತ್ತಾರೆ.


ಫೈನಾಫಲ್, ಅರೇಂಜ್, ಐಸ್ ಕ್ರೀಂ ಕೇಕ್, ಮಿಲ್ಕ್ ಲೇಟ್, ಚಾಕ್ ಲೇಟ್ ಕೇಕ್,ಅನಿಕೇಕ್ ಸೇರಿದಂತೆ ಏಳೆಂಟು ಮಾದರಿ ಕೇಕ್ ಗಳನ್ನು ಸಿದ್ದಪಡಿಸಿದ್ದು, ಹೃದಯ, ಸರ್ಕಲ್, ಗಿಟಾರ್,ಫ್ಲವರ್, ಸೇರಿದಂತೆ ವಿವಿಧ ಆಕೃತಿ ಹಾಗೂ ಬಣ್ಣದಲ್ಲಿ ಜನರು ಹೇಳುವ ಆಕೃತಿಯಲ್ಲಿ ತಾವು ಕೇಕ್ ಸಿದ್ದಪಡಿಸಿಕೊಡುತ್ತಿರುವುದಾಗಿ ತಿಳಿಸುತ್ತಾರೆ.
ಬೆಂಗಳೂರು ಬೇಕರಿಯ ಧರ್ಮರಾಜ್ ಅವರು ಕಳದ ಹತ್ತಾರು ವರ್ಷದಿಂದ ಹೊಸವರ್ಷದ ಆಚರಣೆ ಅಂಗವಾಗಿ ಆಕರ್ಷಕ ಕೇಕ್ ಗಳ ತಯಾರಿ ಮಾಡುತ್ತಿದ್ದಾರೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ಕೃಷ್ಟ ಕೇಕ್ ತಯಾರಿಸುವ ಇವರಿಗೆ ಹೆಚ್ಚಿನ ಬೇಡಿಕೆಯಿದೆ.

ಒಟ್ಟಾರೆ ಹೊಸವರ್ಷ ಆಚರಣೆಯಲ್ಲಿ ಕೇಕ್ ವ್ಯಾಪಾರ ಭರಾಟೆಯಿಂದ ಕೂಡಿದ್ದು ಪಟ್ಟಣದ ಪ್ರತಿ ಬೇಕರಿಗಳಲ್ಲಿ ಗ್ರಾಹಕರಿಗಾಗಿ ಕೇಕ್ ಗಳು ಸಿದ್ದಗೊಂಡು ಕಾಯುತ್ತಿವೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ...

ಹುಳಿಯಾರು: ಸಂಕಷ್ಟದಲ್ಲಿದ್ದ ಬುದ್ಧಿಮಾನ್ಯ ಯುವಕನಿಗೆ ಇಮ್ರಾಜ್ ಬಳಗದಿಂದ ಆಸರೆ; ಮಾನವೀಯತೆ ಮೆರೆದ ಯುವಕರು

ಹುಳಿಯಾರು : " ಮಾನವೀಯತೆ ಎಲ್ಲಕ್ಕಿಂತ ದೊಡ್ಡದು " ಎಂಬ ಮಾತನ್ನು ಹುಳಿಯಾರಿನ ಯುವಕರ ತಂಡವೊಂದು ನಿಜ ಮಾಡಿ ತೋರಿಸಿದೆ.               ಇಲ್ಲಿನ ಎಪಿಎಂಸಿ ಆವರಣದಲ್ಲಿ ದಿಕ್ಕುತೋಚದೆ, ಅಸಹಾಯಕ ಸ್ಥಿತಿಯಲ್ಲಿದ್ದ ಬುದ್ಧಿಮಾನ್ಯ ಯುವಕನೊಬ್ಬನಿಗೆ ಆಸರೆಯಾಗುವ ಮೂಲಕ ಸ್ಥಳೀಯ ಯುವಕರು ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ. ಘಟನೆಯ ಹಿನ್ನೆಲೆ :ಹುಳಿಯಾರಿನ ಎಪಿಎಂಸಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಬುದ್ಧಿಮಾನ್ಯ ಯುವಕನೊಬ್ಬ ಒಂಟಿಯಾಗಿ ಅಲೆಯುತ್ತಿದ್ದನು. ಸರಿಯಾದ ಆಹಾರ, ನೀರು ಮತ್ತು ಆಶ್ರಯವಿಲ್ಲದೆ ಆತ ತೀವ್ರ ಸಂಕಷ್ಟದಲ್ಲಿದ್ದನು. ಇದನ್ನು ಗಮನಿಸಿದ ಸ್ಥಳೀಯ ಯುವಕ ಇಮ್ರಾಜ್ ಮತ್ತು ಅವರ ಸ್ನೇಹಿತರ ಬಳಗವು ತಕ್ಷಣವೇ ಆತನ ನೆರವಿಗೆ ಧಾವಿಸಿತು. ಸಕಾಲಿಕ ಸ್ಪಂದನೆ :ಯುವಕನ ಸ್ಥಿತಿಯನ್ನು ಕಂಡು ಮನನೊಂದ ಸ್ನೇಹಿತರಾದ ಇಮ್ರಾಜ್, ಜಬಿ ಉಲ್ಲಾಖಾನ್ ಫರ್ಮಾನ್, ಅಬ್ದುಲ್ಲಾ, ನವಾ ಶರೀಫ್, ಜಿಶನ್ ಹಾಗೂ ಫಯಾಜ್ ಅವರು ಮೊದಲು ಆತನಿಗೆ ಆಹಾರದ ವ್ಯವಸ್ಥೆ ಮಾಡಿದರು. ನಂತರ ಆತನ ಸುರಕ್ಷತೆಗಾಗಿ ಕ್ರಮ ಕೈಗೊಂಡರು. ಇಲಾಖೆಯ ಸುಪರ್ದಿಗೆ: ಯುವಕರ ಮನವಿಗೆ ಸ್ಪಂದಿಸಿದ ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಧಿಕಾರಿಗಳು, "ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಪರಿಹಾರ ಕೇಂದ್ರದಿಂದ ನಾವು ಇಲ್ಲಿಗೆ ಬಂದಿದ್ದು, ...

​ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ

ಹುಳಿಯಾರು ಕಸ ವಿಲೇವಾರಿ ಬಿಕ್ಕಟ್ಟು: ನಾಡಕಚೇರಿ ಮುಂದೆ ಕಸ ಸುರಿಯುವ ಯತ್ನ, ಅಧಿಕಾರಿಗಳಿಂದ 15 ದಿನಗಳಲ್ಲಿ ಶಾಶ್ವತ ಪರಿಹಾರದ ಭರವಸೆ ವರದಿ : ಡಿ.ಆರ್‌.ನರೇಂದ್ರಬಾಬು-ಹುಳಿಯಾರು ​ ಹುಳಿಯಾರು : ದೀರ್ಘಕಾಲದಿಂದ ಬಗೆಹರಿಯದ ಕಸ ವಿಲೇವಾರಿ ಘಟಕದ ಸಮಸ್ಯೆ ಹಾಗೂ ಪಟ್ಟಣದ ಮೂಲಸೌಕರ್ಯಗಳ ಕೊರತೆ ಖಂಡಿಸಿ, ಹುಳಿಯಾರಿನ ರೈತ ಸಂಘ ಕಳೆದ 19 ದಿನಗಳಿಂದ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ನಡೆಯುತ್ತಿರುವ ಅಹೋರಾತ್ರ ಧರಣಿಗೆ ಬೆಂಬಲಿಸಿ ಇಂದು ವಿವಿಧ ಸಂಘ-ಸಂಸ್ಥೆಗಳು ಮತ್ತು ನಾಗರಿಕರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಬಂದು ನಾಡಕಚೇರಿ ಮುಂದೆ ಸುರಿಯಲು ಯತ್ನಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು . ​ಕರ್ನಾಟಕ ರಾಷ್ಟ್ರ ಸಮಿತಿ (ಕೆ.ಆರ್.ಎಸ್.) ಪಕ್ಷ ಸೇರಿದಂತೆ ಹಲವು ಸಂಘಟನೆಗಳ ಬೆಂಬಲದೊಂದಿಗೆ ನಡೆದ ಈ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪಟ್ಟಣ ಪಂಚಾಯಿತಿ ಮುಂದೆ ತಹಸಿಲ್ದಾರ್ ,ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ಸೇರಿಕೊಂಡು ಪ್ರತಿಭಟನಾಕಾರದೊಂದಿಗೆ ಗಂಟಗಟ್ಟಲೆ ಸಮಾಲೋಚಿಸಿದರು. ಮೂರು ಬೇಡಿಕೆಗಳಲ್ಲಿ ಎರಡು ಬೇಡಿಕೆ ಈಡೇರಿಸುವ ಭರವಸೆ ನೀಡಿದರೂ ಸಹ ಪ್ರತಿಭಟನಾಕಾರರು ಒಪ್ಪದೇ ನಾಡಕಚೇರಿ ಮುಂದೆ ಕಸ ಸುರಿಯುವ ಪ್ರಯತ್ನಕ್ಕೆ ಮುಂದಾದರು. ​ ಪ್ರತಿಭಟನೆ ಹಾದಿ ಮತ್ತು ಪೊಲೀಸ್ ಸರ್ಪಗಾವಲು :  ​ಪ್ರತಿಭಟನಾಕಾರರು ಟ್ರ್ಯಾಕ್ಟರ್‌ನಲ್ಲಿ ಕಸ ತುಂಬಿಕೊಂಡು ಮೊದಲು ದ...