ಮಾನವ ಮೃತಪಟ್ಟಾಗ ತಿಥಿ ಮೂಲಕ ಉತ್ತರ ಕ್ರಿಯೆ ಕಾರ್ಯ ನಡೆಸುವುದು ಪದ್ದತಿ.ಆದರೆ ಮೃತಪಟ್ಟ ವಾನರನಿಗೂ ಭಕ್ತಾಧಿಗಳಲ್ಲಾ ಸೇರಿ ಮಣ್ಣುಮಾಡಿ ಸಮಾಧಿ ನಿರ್ಮಿಸಿದ್ದಲ್ಲದೆ ೯ನೇ ದಿನದ ತಿಥಿಮಾಡಿಅದ ಅಪರೂಪದ ಘಟನೆ ಪಟ್ಟಣದ ಆಂಜನೇಯ ದೇವಾಲಯದ ಆವರಣದಲ್ಲಿ ನಡೆದಿದೆ.
![]() |
ಹುಳಿಯಾರಿನ ಆಂಜನೇಯಸ್ವಾಮಿ ದೇವಾಲಯದ ಎದುರು ಕೋತಿಯ ಪುಣ್ಯತಿಥಿ ಅಂಗವಾಗಿ ದೇವಾಲಯಸಮಿತಿಯವರು ಸಾರ್ವಜನಿಕರಿಗೆ ಪಾನಕ,ಪನಿವಾರ ವಿತರಿಸಿದರು |
ಇಲ್ಲಿನ ಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿ ಓಡಾಡಿಕೊಂಡಿದ್ದ ಕೋತಿ ದೇವಾಲಯದ ಭಕ್ತಾಧಿಗಳೊಂದಿಗೆ ಓಡನಾಟಹೊಂದಿತ್ತು. ಅನಾರೋಗ್ಯದ ಕಾರಣ ಕಳೆದ ಒಂಭತ್ತು ದಿನದ ಮೃತಪಟ್ಟಿದ್ದ ಕೋತಿಯನ್ನು ಆಂಜನೇಯಸ್ವಾಮಿ ದೇವಾಲಯದ ಎದುರು ಅಂತ್ಯಸಂಸ್ಕಾರ ಮಾಡಿ ಆಂಜನೇಯನ ಅಪರಾವತಾರ ಎಂದು ಸಣ್ಣ ಸಮಾಧಿಯನ್ನು ಸಹ ಕಟ್ಟಿ ನಿತ್ಯ ಪೂಜಿಸುತ್ತಿದ್ದರು.
ಮೃತಪಟ್ಟು ಒಂಬತ್ತು ದಿನಗಳಾದ ಹಿನ್ನಲೆಯಲ್ಲಿ ಶ್ರೀ ಆಂಜನೇಯಸೇವಾ ಛಾರಿಟಬಲ್ ಟ್ರಸ್ಟ್ ಹಾಗೂ ದೇವಾಲಯ ಸಮಿತಿವತಿಯಿಂದ ಕೋತಿಯ ಪುಣ್ಯತಿಥಿ ಆಚರಣೆಯನ್ನು ಗುರುವಾರದಂದು ಹಮ್ಮಿಕೊಳ್ಳಲಾಗಿತ್ತು.ಸಮಾಧಿಗೆ ಎಡೆಯಿಟ್ಟು ಪೂಜಾವಿಧಿವಿಧಾನಗಳನ್ನು ನೆರವೇರಿಸಲಾಯಿತು ದೇವಾಲಯದ ಮುಂಭಾಗ ಸಾರ್ವಜನಿಕರಿಗೆ ಪ್ರಸಾದವಾಗಿ ಪಾನಕ ಹಾಗೂ ಕಡ್ಲೆಬೇಳೆ ಹುಸ್ಲಿಯನ್ನು ವಿತರಿಸಿದರು.ಪಾನಕ ,ಪನಿವಾರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯ ಸಮಿತಿಯ ನರಸಿಂಹಮೂರ್ತಿ,ಮೀಸೆರಂಗಪ್ಪ,ಬಡಗಿರಾಮಣ್ಣ,ದನಂಜಯ್, ಎಸ್.ಆರ್.ಎಸ್.ದಯಾನಂದ್, ಮಾರುತಿ ಯುವಛಾರಿಟಬಲ್ ಟ್ರಸ್ಟ್ ನ ಮೆಡಿಕಲ್ ಚನ್ನಬಸವಯ್ಯ,ಮನು,ಸತೀಶ್ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ