ಹುಳಿಯಾರು ಪಟ್ಟಣದ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿವತಿಯಿಂದ ಅಯ್ಯಪ್ಪನ ಸನ್ನಿದಾನದಲ್ಲಿ ಶುಕ್ರವಾರ ಸಂಜೆ ೮ ನೇ ವರ್ಷದ ಪಡಿಪೂಜೆ ಹಾಗೂ ಸ್ವಾಮಿಯ ಉಯ್ಯಾಲೋತ್ಸವ ಅಪಾರ ಸಂಖ್ಯೆಯ ಮಾಲಾಧಾರಿಸ್ವಾಮಿಗಳು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಹುಳಿಯಾರಿನ ಅಯ್ಯಪ್ಪನ ಸನ್ನಿಧಿಯಲ್ಲಿ ಪಡಿಪೂಜೆ ಅಂಗವಾಗಿ ಸ್ವಾಮಿಯನ್ನು ಕದಳಿ ಮಂಟಪದಲ್ಲಿ ಕುಳ್ಳಿರಿಸಿ ಹೂವಿನ ಅಲಂಕಾರ ಮಾಡಿರುವುದು. |
ಹುಳಿಯಾರಿನ ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿವತಿಯಿಂದ ಪಡಿಪೂಜೆ ಅಂಗವಾಗಿ ದೇವಾಲಯದಲ್ಲಿನ ೧೮ ಮೆಟ್ಟಿಲುಗಳನ್ನು ವಿಶೇಷವಾಗಿ ಅಲಂಕರಿಸಿ ಪೂಜಿಸಿರುವುದು. |
ಪಡಿಪೂಜೆಯ ಅಂಗವಾಗಿ ಅಯ್ಯಪ್ಪಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದಲ್ಲದೆ, ಸನ್ನಿದಾನದಲ್ಲಿರುವ ೧೮ ಮೆಟ್ಟಿಲುಗಳ ಮೇಲೆ ೧೮ ಕಳಸಗಳನ್ನು ಪ್ರತಿಷ್ಠಾಪಿಸಿ ಹೂಗಳಿಂದ ಅಲಂಕರಿಸಿ ಪೂಜೆ ನಡೆಸಲಾಯಿತು. ನಂತರ ಆ ಕಳಸಗಳಿಂದ ಸ್ವಾಮಿಗೆ ಅಭಿಷೇಕ ನಡೆದು, ಬಾಳೆದಿಂಡಿನಿಂದ ಮಾಡಿದ್ದ ಕದಳಿ ಅಕಂಕಾರ ಮಾಡಿಲಾಗಿತ್ತು. ದೀಪಾರಾಧನೆ , ಈಡುಗಾಯಿ ಹೊಡೆದು, ಕರ್ಪೂರ ಹಚ್ಚಿ ಮಹಾಮಂಗಳಾರತಿ ನಡೆಸಿದರು. ಮುಖ್ಯಪ್ರಾಣ ಭಜನಾಮಂಡಳಿಯವರು ಭಜನೆ ನಡೆಸಿಕೊಟ್ಟರು.
ಪಡಿಪೂಜೆ ಹಾಗೂ ಮಂಡಲ ಪೂಜೆ ವಿಶೇಷವೆಂದರೆ ಮಾಲಾಧಾರಣೆ ಪ್ರಾರಂಭವಾಗಿ ಅಂದಿನಿಂದ ತಾ.೨೬ರ ಶುಕ್ರವಾರಕ್ಕೆ ಒಟ್ಟು ೪೮ ದಿನಗಳಾಗಿದ್ದು ಒಂದು ಮಂಡಲವಾಗಿದೆ. ಅಯ್ಯಪ್ಪನ ಮೂಲಸ್ಥಾನ ಶಬರಿಮಲೆಯಲ್ಲೂ ಸಹ ವಿಶೇಷ ಪೂಜೆ ನಡೆಯುತ್ತದೆ ಅಂತೆಯೇ ತಾವು ಪಟ್ಟಣದ ಸ್ವಾಮಿಯ ಸನ್ನಿಧಾನದಲ್ಲಿ ವಿಶೇಷ ಪೂಜೆ ನಡೆಸುತ್ತಿರುವುದಾಗಿ ಕಳೆದ ೪೦ವರ್ಷದಿಂದ ಅಯ್ಯಪ್ಪನ ಮಾಲೆ ಹಾಕಿಕೊಂಡು ಬರುತ್ತಿರುವ ಗೋಪಾಲಸ್ವಾಮಿಯವರು ತಿಳಿಸುತ್ತಾರೆ.
ಈ ವೇಳೆ ಗುರುಸ್ವಾಮಿಗಳಾದ ಭವಾನಿ ರಮೇಶ್,ದಾನಿಸ್ವಾಮಿ ಸೇರಿದಂತೆ ,ಜಯಣ್ಣಸ್ವಾಮಿ,ಸುರೇಶ್ ಬಾಬು ಸ್ವಾಮಿ, ಮಣಿಸ್ವಾಮಿ, ಮಂಜುನಾಥ, ಷಣ್ಮುಖ,ದೇವರಾಜ್,ರಂಗಸ್ವಾಮಿ, ಸತೀಶ್,ಮುಕುಂದಸ್ವಾಮಿ ಸೆರಿದಂತೆ ೮೦ಕ್ಕೂ ಹೆಚ್ಚು ಮಂದಿ ಅಯ್ಯಪ್ಪನ ಮಾಲಾದಾರಿಗಳು ಸೇರಿದಂತೆ ಮುಖ್ಯಪ್ರಾಣ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.ಅಗಮಿಸಿದವರಿಗಾಗಿ ಅನ್ನ ಸಂತರ್ಪಣೆ ಸಹ ಏರ್ಪಡಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ