ಪ್ರಸ್ತುತ ಎಲ್ಲಾ ಕ್ಷೇತ್ರದಲ್ಲೂ ಸ್ಪರ್ಧೆ ಹೆಚ್ಚಾಗಿದ್ದು ಒಂದು ಹುದ್ದೆ ಪಡೆಯಲು ಹರಸಾಹಸ ಪಡೆಯುವಂತಾಗಿದೆ, ಅದರಲ್ಲೂ ಐಎಎಸ್ ಹಾಗೂ ಕೆಎಎಸ್ ನಂತಹ ಆಡಳಿತಾತ್ಮಕ ಹುದ್ದೆಗಳನ್ನು ಪಡೆಯಬೇಕಾದರೆ ಪರೀಕ್ಷಾರ್ಥಿಗಳು ಹೆಚ್ಚಿನ ಸಿದ್ದತೆ ಮಾಡಿಕೊಳ್ಳುವುದು ಅತ್ಯಗತ್ಯವೆಂದು ಗದಗ ಡಯಟ್ ಕಾಲೇಜಿನ ಪ್ರಾಂಶುಪಾಲ ರವೀಂದ್ರಪಾಟೀಲ್ ತಿಳಿಸಿದರು.
ಹುಳಿಯಾರಿನ ಬಸವಭವನದಲ್ಲಿ ವೀರಶೈವ ಸಮಾಜದ ವತಿಯಿಂದ ನಡೆದ ಮಾರ್ಗದರ್ಶಿ ಶಿಬಿರವನ್ನು ಡಾ|| ಕೆ.ಪಿ.ರಾಜಶೇಖರ್ ಉದ್ಘಾಟಿಸಿದರು. |
ಹುಳಿಯಾರಿನಲ್ಲಿ ನಡೆದ ಮಾರ್ಗದರ್ಶನ ಶಿಬಿರದಲ್ಲಿ ಬೆಂಗಳೂರಿನ ಸಹಾಯಕ ಆಯುಕ್ತರಾದ ಎಸ್.ಈ.ರಾಜೀವ್ ಅವರನ್ನು ವೀರಶೈವ ಸಮಾಜದವತಿಯಿಂದ ಸನ್ಮಾನಿಸಲಾಯಿತು. |
ಹೋಬಳಿ ವೀರಶೈವ ಸಮಾಜ , ತಾಲ್ಲೂಕು ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘ , ಬಸವೇಶ್ವರ ಪತ್ತಿನ ಸಹಕಾರ ಸಂಘ, ಶಿವ ವಿವಿದೋದ್ದೇಶ ಸಹಕಾರಸಂಘ ಹಾಗೂ ಬಸವ ಸಮಿತಿವಯಿಂದ ಪಟ್ಟಣದ ಬಸವಭವನದಲ್ಲಿ ಗುರುವಾರ ಆಯೋಜಿಸಿದ್ದ ಉಚಿತ ಮಾರ್ಗದರ್ಶನ ಶಿಬಿರದಲ್ಲಿ ಅವರು ಮಾತನಾಡಿದರು.
ಸರ್ಕಾರದ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳಿಸಿ ಉತ್ತೀರ್ಣರಾದರೆ ಮಾತ್ರ ಕೆಲಸ ಸಿಗಲಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಅಭ್ಯರ್ಥಿಗಳು ಪರೀಕ್ಷೆ ಬರೆಯಲೆಂದು ಅರ್ಜಿ ಹಾಕುತ್ತಾರೇ ಹೊರತು ಅದಕ್ಕೆ ತಕ್ಕಂತೆ ಅಭ್ಯಾಸ ಮಾಡದೆ ಪರೀಕ್ಷೆಯಲ್ಲಿ ವಿಫಲರಾಗುತ್ತಿದ್ದಾರೆ ಎಂದರು. ಪ್ರತಿಯೊಬ್ಬ ಪರೀಕ್ಷಾರ್ಥಿಯೂ ಧನಾತ್ಮಕ ಮನೋಭಾವ ಹೊಂದಿ ಅಭ್ಯಾಸಿಸಿದ್ದೇ ಆದಲ್ಲಿ ಎಂತಹ ಪರೀಕ್ಷೆಯನ್ನಾದರೂ ಸುಲಭವಾಗಿ ಪಾಸ್ ಮಾಡಬಹುದಾಗಿದೆ ಎಂದು ಕಿವಿಮಾತು ಹೇಳಿದರು.ಯಾರು ಏಕಾಗ್ರತೆ,ಸಮಯನಿಷ್ಠೆಗೆ ಬದ್ದರಾಗಿ ನಡೆಯುತ್ತಾರೋ ಅವರು ಜೀವನದಲ್ಲಿ ಸಾಧನೆ ಮಾಡುತ್ತಾರೆ ಎಂದು ತಿಳಿಸಿದರು.
ಬಳ್ಳಾರಿಯಲ್ಲಿ ಡಿಡಿ ಆಗಿರುವ ಹಾಗೂ ಕೆಂಕೆರೆ ಗ್ರಾಮದ ಹೆಚ್.ಸಿ.ಬಸವರಾಜು ಮಾತನಾಡಿ, ತಮ್ಮ ಅಧ್ಯಯನದ ಸಮಯದಲ್ಲಿ ಉತ್ತಮ ಸೌಲಭ್ಯಗಳು ಇರಲಿಲ್ಲ ಆದರೆ ಈಗ ಬೆರಳತುದಿಯಲ್ಲೇ ಸಾಕಷ್ಟು ಸೌಲಭ್ಯಗಳಿವೆ ಅದನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜದಲ್ಲಿ ಉತ್ತಮ ಸ್ಥಾನಗಳಿಸಿ ಎಂದು ಆಶಿಸಿದರು.
ಬೆಂಗಳೂರಿನ ಸಹಾಯಕ ಆಯುಕ್ತರಾದ ಎಸ್.ಈ.ರಾಜೀವ್, ಗುಬ್ಬಿ ಸಿಐಟಿಯ ವಿಜಯಪ್ರಕಾಶ್, ಧಾರವಾಡ ಉಪನಿರ್ದೇಶಕಾರದ ರಂಗಸ್ವಾಮಿ ಪರೀಕ್ಷಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿದರು. ವೀರಶೈವ ಸಮಾಜದ ಡಾ||ಕೆ.ಪಿ.ರಾಜಶೇಖರ್ ಅಧ್ಯಕ್ಷತೆವಹಿಸಿದ್ದರು. ಬಸವೇಶ್ವರ ಪತ್ತಿನ ಸಹಕಾರ ಸಂಗ ಅಧ್ಯಕ್ಷ ಜಿ.ಎಂ.ನೀಲಕಂಠಯ್ಯ, ಶಿಕ್ಷಕ ಕೆ.ಎಂಗಂಗಾಧರಯ್ಯ, ನಿವೃತ್ತ ಶಿಕ್ಷಕ ಚನ್ನಬಸವಯ್ಯ, ಕೆಂಕೆರೆ ರುದ್ರಯ್ಯ, ಕಾರ್ಯದರ್ಶಿ ಉಮೇಶ್ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ