ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯಪರಿಷತ್ ವತಿಯಿಂದ ನೆಡೆಸಿಕೊಂಡು ಬರುತ್ತಿರುವ ಮನೆಮನೆಗಳಲ್ಲಿ ಕನ್ನಡ ಕವಿಕಾವ್ಯಗೋಷ್ಠಿ ಪಾಕ್ಷಿಕ ಕಾರ್ಯಕ್ರಮ ಪಟ್ಟಣದ ಕಾರ್ಗಿಲ್ ಹೋಟೆಲ್ ನ ಈಶ್ವರಪ್ಪ ಅವರ ಮನೆಯಲ್ಲಿ ನಡೆಯಿತು.
ಶಿವಶರಣರ ಸಂದೇಶ ಎಂಬ ವಿಷಯದ ಬಗ್ಗೆ ಪ್ರವಚನ ನೀಡಿದ ಪಂಡಿತ್ ತ.ಶಿ.ಬಸವಮೂರ್ತಿ ಆದ್ಯ ವಚನಕಾರ ಜೇಡರ ದಾಸಿಮಯ್ಯ,ಬಸವಣ್ಣ, ಅಕ್ಕಮಹಾದೇವಿ ಪ್ರಭುದೇವರು , ಅಂಬಿಗರ ಚೌಡಯ್ಯ ಮುಂತಾದವರ ವಚನಗಳನ್ನು ಉಲ್ಲೇಖಿಸಿ ಮಾತನಾಡಿ, ಶಿವಶರಣರ ಕಾಯಕ ಮಹತ್ವ , ದಾಸೋಹ ತತ್ವ, ಸರ್ವಸಮಾನತೆ ಮುಂತಾದ ಅಂಶಗಳನ್ನು ನಮ್ಮ ಜೀವನದಲ್ಲಿಯೂ ಮೈಗೂಡಿಸಿಕೊಳ್ಳುವುದರ ಮೂಲಕ ನಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಬಾಲಕಿಯರ ಪದವಿಪೂರ್ವಕಾಲೇಜಿನ ಉಪನ್ಯಾಸಕ ರಾಜಣ್ಣ ಮಾತನಾಡಿ, ಹುಳಿಯಾರು ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನವರು ನಿರಂತರವಾಗಿ ಮನೆಮನೆಗಳಲ್ಲಿ ಕನ್ನಡಮ್ಮನ ಸ್ಮರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರಲ್ಲದೆ, ಕನ್ನಡದ ಹಿರಿಯ ಚೇತನಗಳನ್ನು ಕುರಿತು ಮಾತನಾಡಿದರು.
ಶಿಕ್ಷಕರಾದ ಯಲ್ಲಪ್ಪ ಮಂಕುತಿಮ್ಮನ ಕಗ್ಗದ ಕವನ ವಾಚಿಸಿದರು. ಬಾಲಕ ಚಿರಂತ್ ಹಚ್ಚೇವು ಕನ್ನಡದೀಪ ಹಾಗೂ ನಿತ್ಯೋತ್ಸವ ಕವಿತೆ ಹಾಡುವುದರ ಮೂಲಕ ಗೋಷ್ಠಿಗೆ ಚಾಲನೆ ನೀಡಿದನು.ಶಿಕ್ಷಕ ಎನ್.ಬಿ.ಚಂದ್ರಪ್ಪ ಸ್ವಾಗತಿಸಿ , ದೇವರಾಜು ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ