ದೇಶದೆಲ್ಲೆಡೆ ಪ್ರಧಾನಿ ನರೇಂದ್ರಮೋದಿ ಅವರು ೨೦೧೪-೧೫ನೇ ಸಾಲಿನ ಬಿಜೆಪಿ ಸದಸ್ಯತಾ ಅಭಿಯಾನ ಪ್ರಾರಂಭಿಸಿರುವ ಹಿನ್ನಲೆಯಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಹುಳಿಯಾರು ಪಟ್ಟಣದ ರಾಂಗೋಪಾಲ್ ಸರ್ಕಲ್ ನಲ್ಲಿ ಗುರುವಾರದಂದು " ಮೊಬೈಲ್ ಕರೆ ಮಾಡಿ ಬಿಜೆಪಿ ಸದಸ್ಯರಾಗಿರಿ " ಎಂಬ ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿದರು.
ಹುಳಿಯಾರಿನ ರಾಂಗೋಪಾಲ್ ಸರ್ಕಲ್ ನಲ್ಲಿ ಮಾಜಿಶಾಸಕ ಕೆ.ಎಸ್.ಕಿರಣ್ ಕುಮಾರ್ ನಾಗರೀಕರ ಮೊಬೈಲ್ ನಲ್ಲಿ ಕರೆ ಮಾಡುವ ಮೂಲಕ ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಚಾಲನೆ ನೀಡಿದರು. |
ನಂತರ ಮಾತನಾಡಿದ ಅವರು, ಈಗಾಗಲೇ ದೇಶಾದ್ಯಂತ ಬಿಜೆಪಿ ಸದಸ್ಯತಾ ಅಭಿಯಾನ ನಡೆಯುತ್ತಿದ್ದು ಬಿಜೆಪಿಯನ್ನು ಮತ್ತಷ್ಟು ಬಲ ಬಡಿಸಲು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಮೋದಿ ಅವರು ಸಶಕ್ತ ಬಿಜೆಪಿ-ಸಶಕ್ತ ಭಾರತ ಕಲ್ಪನೆಯಿಂದ ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿ ರೂಪಿಸಲು ಶ್ರಮಿಸುತ್ತಿದ್ದು ಅವರಿಗೆ ಭಾರತದ ನಾಗರೀಕರ ಬಲ ಬೇಕಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಮತದಾರರು ಸಹ ಬಿಜೆಪಿ ಸದಸ್ಯತ್ವವನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಗದೀಶ್ ಮಾತನಾಡಿ, ಸದಸ್ಯರ ನೊಂದಣಿ ಅಭಿಯಾನಕ್ಕೆ ಬಿಜೆಪಿ ಕಾರ್ಯಕರ್ತರು ಹೆಚ್ಚಿನದಾಗಿ ಶ್ರಮಿಸಿ ಪ್ರತಿ ಮನೆಗಳಿಗೆ ತೆರಳಿ ಮತದಾರರಿಗೆ ಬಿಜೆಪಿ ಪಕ್ಷದ ಬಗ್ಗೆ ತಿಳಿಸುತ್ತಾ ಸದಸ್ಯತ್ವ ನೊಂದಣಿ ಮಾಡಿಸಬೇಕು ಎಂದರು. ತಾಲ್ಲೂಕಿನ ಪ್ರತಿ ಹೋಬಳಿ ಹಾಗೂ ಗ್ರಾಮಪಂಚಾಯ್ತಿಗಳಲ್ಲಿಗೆ ತೆರಳಿ ಎಲ್ಲೆಡೆ ಸದಸ್ಯತಾ ನೊಂದಣಿ ಮಾಡಿಕೊಳ್ಳುವುದಾಗಿ ತಿಳಿಸಿದರು.
ನೀವು ಮಾಡಬೇಕಾದ್ದೇನು : ಬಿಜೆಪಿ ಸದಸ್ಯತ್ವವನ್ನು ಪಡೆಯಬೇಕಾದಲ್ಲಿ ನಾಗರೀಕರು ತಮ್ಮ ಮೊಬೈಲ್ ನಿಂದ ಟೋಲ್ ಫ್ರೀ ನಂ ೧೮೦೦ ೨೬೬ ೨೦೨೦ ಸಂಖ್ಯೆಗೆ ಉಚಿತಕರೆ ಮಾಡಿ ನಂತರ ಸದಸ್ಯತ್ವ ನಂಬರ್ ನ ಸಂದೇಶ ಬರಲಿದ್ದು, ಆ ಬಳಿಕ ನಿಮ್ಮ ಹೆಸರು,ಪೂರ್ಣವಿಳಾಸ , ಪಿನ್ ಕೋಡ್ ಹಾಗೂ ಮತದಾರ್ರ ಗುರುತಿನ ಚೀಟಿ ಸಂಖ್ಯೆಯನ್ನು ನೀಡಿದಲ್ಲಿ ಸುಲಭವಾಗಿ ಸದಸ್ಯರಾಗಬಹುದು.
ಈ ವೇಳೆ ತಾ.ಪಂ.ಸದಸ್ಯರಾದ ಕೆಂಕೆರೆ ನವೀನ್, ವಸಂತಯ್ಯ,ಸೀತಾರಾಮ್,ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಮುಖಂಡರಾದ ಬಸವರಾಜು, ರಾಮಯ್ಯ ಟಿ.ಎಸ್.ಹಳ್ಳಿ ಪ್ರಕಾಶ್, ಬಳ್ಳೆಕಟ್ಟೆರಾಮಣ್ಣ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ