ದೇಶದ ಗಡಿಕಾಯುವುದರ ಮುಖಾಂತರ ದೇಶಸೇವೆಯಲ್ಲಿ ತೊಡಗಿಕೊಂಡಿರುವುದು ನನ್ನ ಜೀವನದ ಅತ್ಯಂತ ಹೆಮ್ಮೆಯ ವಿಚಾರವಾಗಿದೆ. ಆದರೆ ಪ್ರಸುತದಲ್ಲಿ ಸೈನ್ಯಕ್ಕೆ ಸೇರಲು ಯುವಪೀಳಿಗೆ ಮುಂದಾಗದಿರುವುದು ಹಾಗೂ ಕೋಟ್ಯಾಂತರ ಜನಸಂಖ್ಯೆಯಲ್ಲಿ ಬೆರಳೆಣಿಕೆಯಷ್ಟು ಮಾತ್ರ ಸೈನ್ಯಕ್ಕೆ ಸೇರ್ಪಡೆಯಾಗುತ್ತಿರುವುದು ಖೇದದ ಸಂಗತಿಯೆಂದು ಇಂಡಿಯನ್ ಆರ್ಮಿಯಲ್ಲಿ ಕಳೆದ ೧೫ ವರ್ಷದಿಂದ ಯೋಧರಾಗಿ ಸೇವೆಯಲ್ಲಿರುವ ಹುಳಿಯಾರಿನ ಬಿ.ಆರ್.ಗೋಪಿನಾಯಕ್ ವಿಷಾದಿಸಿದರು.
ಹುಳಿಯಾರಿನ ಕೆಪಿಟಿಸಿಎಲ್ ಕಛೇರಿಯಲ್ಲಿ ಅಯೋಜಿಸಿದ್ದ ಸಮಾರಂಭದಲ್ಲಿ ಇಂಡಿಯನ್ ಆರ್ಮಿಯ ಯೋಧ ಹುಳಿಯಾರಿನ ಗೋಪಿಅವರು ಮಾತನಾಡಿದರು. |
ಹುಳಿಯಾರಿನ ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ವತಿಯಿಂದ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಹುಳಿಯಾರಿನ ಕೆಪಿಟಿಸಿಎಲ್ ಹಾಗೂ ಬೆಸ್ಕಾಂ ವತಿಯಿಂದ ಇಂಡಿಯನ್ ಆರ್ಮಿಯ ಯೋಧ ಹುಳಿಯಾರಿನ ಎಂ.ಆರ್.ಗೋಪಿ ಅವರನ್ನು ಸನ್ಮಾನಿಸಲಾಯಿತು. ಎಇಇ ರಾಜಶೇಖರ್, ಎಸ್.ಒ ಉಮೇಶ್ ನಾಯಕ್ ಹಾಗೂ ಮೂರ್ತಿ, ಸಹಾಯಕ ಇಂಜಿನಿಯರ್ ವಿಶ್ವನಾಥ್ ಹಾಗೂ ಇತರರಿದ್ದಾರೆ. |
ಸೈನ್ಯವೆಂದರೆ ಯಾರು ಭಯಪಡುವ ಅಗತ್ಯವಿಲ್ಲ ನಗರಪ್ರದೇಶದಲ್ಲಿ ಪೊಲೀಸರು ಯಾವರೀತಿ ಜನರನ್ನು ಕಾಯುತ್ತಾರೋ ಅದೇರೀತಿ ನಾವು ದೇಶದ ಗಡಿಯಲ್ಲಿ ದೇಶದೊಳಗೆ ಯಾರೊಬ್ಬರು ನುಸುಳದಂತೆ ಕಾಯುತ್ತಿರುತ್ತೇವೆ . ಪಿಯುಸಿ ತೇರ್ಗಡೆಯಾಗಿ ೨೨ ವಯಸ್ಸಿನ ಒಳಪಟ್ಟವರು, ಉತ್ತಮ ಆರೋಗ್ಯವಂತರು ಸೇನೆಯವರು ನಡೆಸುವ ಕ್ಯಾಂಪ್ ನಲ್ಲಿ ಪಾಲ್ಗೊಳ್ಳುವ ಮುಖಾಂತರ ಸೈನ್ಯಕ್ಕೆ ಸೇರಬಹುದಾಗಿದೆ ಎಂದರು. ನಮ್ಮನ್ನು ಸನ್ಮಾನ ಮಾಡುತ್ತಿರುವುದು ಸಂತಸತಂದಿದ್ದು ಇದರ ಕೀರ್ತಿ ನನ್ನ ಪೋಷಕರಿಗೆ ಸಲ್ಲಬೇಕು ಎಂದರು.
ಸಹಾಯಕ ಇಂಜಿನಿಯರ್ ಕೆಂಕೆರೆ ವಿಶ್ವನಾಥ್ ಮಾತನಾಡಿ, ಪ್ರಸುತದಲ್ಲಿ ವಿವಿಧ ಕ್ಷೇತ್ರಗಳ ಅನೇಕ ಜನರನ್ನು ಸನ್ಮಾನಿಸುತ್ತಾರೆ ಆದರೆ ದೇಶದ ರಕ್ಷಣೆಗೆನಿಂತು, ದೇಶದೊಳಗೆ ಯಾರು ನುಸುಳದಂತೆ ಸದಾ ಎಚ್ಚರದಿಂದಿದ್ದು, ದೇಶದೊಳಗಿನ ಜನರನ್ನು ಕಾಯುವ ಯೋಧರನ್ನು ಪುರಸ್ಕರಿಸುತ್ತಿಲ್ಲ ಎಂದು ವಿಷಾದಿಸಿದರು. ತಮ್ಮ ಸುತ್ತಮುತ್ತಲ್ಲಿ ಯಾರಾದರೂ ಸೈನ್ಯದಲ್ಲಿದ್ದರೆ ಅವರನ್ನು ಸನ್ಮಾನಿಸಿ ಗೌರವಿಸುವುದರಿಂದ ಅವರನ್ನು ಉತ್ತೇಜಿಸಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಎಇಇ ರಾಜಶೇಖರ್, ನೊಡೆಲ್ ಅಧಿಕಾರಿ ಸೀತಾರಾಮಶೆಟ್ಟಿ, ಬೆಸ್ಕಾಂನ ಸೆಕ್ಷನ್ ಅಫಿಸರ್ ಗಳಾದ ಉಮೇಶ್ ನಾಯಕ್ ಹಾಗೂ ಮೂರ್ತಿ, ಅಮೀರ್ ಜಾನ್, ಸಿಬ್ಬಂದಿವರ್ಗದ ಸಂಗಮೇಶ್,ರಮೇಶ್,ಶಿವರಾಜ್,ತಮ್ಮಡಿಹಳ್ಳಿಶಿವಣ್ಣ,ಸಿದ್ದು ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ