ಕೊಲೆ ದೂರಿನ ಮೇರೆಗೆ ಹೂತಿದ್ದ ಶವವನ್ನು ಹೊರತೆಗೆದು ಪರೀಕ್ಷೆಗೆ ಒಳಪಡಿಸಿದ ಘಟನೆ ಸಮೀಪದ ಬರಗೀಹಳ್ಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಗ್ರಾಮದ ಅಲ್ಲಾಭಕ್ಷಿ (೩೫) ಕಳೆದ ೧೯ ರಂದು ಮೃತ ಪಟ್ಟಿದ್ದು, ಬಂಧುಬಳಗ ಹಾಗೂ ಸಂಬಂಧಿಕರ ಭಾಗವಹಿಸುವಿಕೆಯೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಆದರೆ ಮೃತನ ತಂದೆ ಅಮೀರ್ ಜಾನ್ ಗೆ ಸಾವಿನ ಬಗ್ಗೆ ಕೆಲವು ಅನುಮಾನಗಳು ಹುಟ್ಟಿಕೊಂಡಾಗ ಶವದ ಪರೀಕ್ಷೆ ನಡೆಸುವಂತೆ ಹಂದನಕೆರೆ ಪೋಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ತಿಪಟೂರು ಉಪವಿಭಾಗಾಧಿಕಾರಿ ಸಿಂಧು ಅವರ ಸಮ್ಮುಖದಲ್ಲಿ ವಿಧಿವಿಜ್ಞಾನ ಕೇಂದ್ರದ ವೈದ್ಯ ರುದ್ರಮುನಿ ಶವ ಹೊರತೆಗೆದು ಪರೀಕ್ಷೆ ಬೇಕಾದ ವಸ್ತುಗಳನ್ನು ಕೊಂಡೈದಿದ್ದಾರೆ. ಸ್ಥಳದಲ್ಲಿ ಸಿಪಿಐ ಜಯಕುಮಾರ್,ಹಂದನಕೆರೆ ಪಿಎಸೈ ಸುನಿಲ್ , ಹಂದನಕೆರೆ ಹೋಬಳಿ ಕಂದಾಯ ತನಿಖಾಧಿಕಾರಿ ಪಾಪಣ್ಣ ಹಾಗೂ ಇತರರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ