ಹುಳಿಯಾರು: ಸಮೀಪದ ಕಂದಿಕೆರೆ ಹೋಬಳಿಯ ತಿಮ್ಮನಹಳ್ಳಿಯ ಶ್ರೀ ಕಾಲಭೈರವೇಶ್ವರಸ್ವಾಮಿ ದೇವಾಲಯದಲ್ಲಿ ತಾ.೨೦ರ ಶನಿವಾರ ಹಾಗೂ ತಾ.೨೧ರ ಭಾನುವಾರ ದಂದು ಎರಡು ದಿನಗಳ ಕಾಲ ಉತ್ಸವಮೂರ್ತಿಯ ಮಂಡಲಪೂಜೆ,ನಾಗಪ್ರತಿಷ್ಠೆ ಸೇರಿದಂತೆ ವಿವಿಧ ಪೂಜಾಕೈಂಕರ್ಯಗಳು ನಡೆಯಲಿವೆ.
ತಾ.೨೦ರ ಶನಿವಾರ ಸಂಜೆ ಗಂಗಾಪೂಜೆ,ಪುಣ್ಯಾಹ,ನಾಂದಿ,ಅಂಕುರಾರ್ಪಣೆ,ಪಂಚಕಳಸ ಸ್ಥಾಪನೆ ಹಾಗೂ ಹೋಮ ನಡೆಯಲಿದೆ. ತಾ.೨೧ರ ಭಾನುವಾರ ಬೆಳಿಗ್ಗೆ ನಾಗಪ್ರತಿಷ್ಠೆ, ದೀಕ್ಷಾ ವಿವಾಹ ಕರ್ಯ ನಡೆದು ನಂತರ ಹೋಮಕ್ಕೆ ಪೂರ್ಣಾಹುತಿ ಅರ್ಪಣೆ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಇದೇದಿನ ಸ್ವಾಮಿಪೆ ವಿಶೇಷ ಅಲಂಕಾರ ಸಹ ಮಾಡಲಿದ್ದು ,ಆಗಮಿಸಿದ ಭಕ್ತರಿಗಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವಂತೆ ಶ್ರೀಕಾಲಭೈರವೇಶ್ವರ ಸೇವಾಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ