ಹುಳಿಯಾರು ಪಟ್ಟಣದ ರಾಂಗೋಪಾಲ್ ಸರ್ಕಲ್ ನಲ್ಲಿ ಕಳೆದ ಶುಕ್ರವಾರಷ್ಟೇ ಪ್ರಾರಂಭವಾದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯಲ್ಲಿ ಗ್ರಾಹಕರು ಖಾತೆ ತೆರೆಯಲು ಅರ್ಜಿ ದೊರೆಯದೆ ವಾಪಸ್ಸಾಗುವಂತಾಗಿದೆ.
ಹುಳಿಯಾರಿನಲ್ಲಿರುವ ನೂತನ ಎಸ್.ಬಿ.ಎಂ ಶಾಖೆ . |
ನೂತನ ಬ್ಯಾಂಕ್ ಪ್ರಾರಂಭವಾದ ಮೊದಲ ದಿನವೇ ತಂದಿದ್ದ ಅರ್ಜಿಯಲ್ಲಾ ಖಾಲಿಯಾದ್ದರಿಂದ ಗ್ರಾಹಕರು ಅರ್ಜಿಗಾಗಿ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಪಟ್ಟಣದಲ್ಲಿ ಈಗಾಗಲೇ ಮೂರ್ನಾಲ್ಕು ಬ್ಯಾಂಕ್ ಗಳಿದ್ದರೂ ಸಹ ಅಲ್ಲಿನ ಅನೇಕ ಸಮಸ್ಯೆಗಳಿಂದಾಗಿ ಗ್ರಾಹಕರು ನೂತನ ಬ್ಯಾಂಕಿನತ್ತ ಮುಖಮಾಡಿದ್ದರು. ಜನಧನ್ ಖಾತೆ ಸೇರಿದಂತೆ ಹತ್ತು ಹಲವಾರು ಸೌಲಭ್ಯವನ್ನು ಪಡೆಯಲು ಮೈಸೂರು ಬ್ಯಾಂಕ್ ಸೂಕ್ತವೆಂದು ಪಟ್ಟಣ ಸೇರಿದಂತೆ ಸುತ್ತಮುತ್ತಲ ಹಳ್ಳಿಯವರು ಬಂದಿದ್ದು ಉದ್ಘಾಟನೆ ಕ್ಷಣವೇ ಅರ್ಜಿಗೆ ನೂಕು ನುಗ್ಗಲು ಉಂಟಾಗಿ ಅಂದೇ ಅರ್ಜಿ ದೊರೆಯದಂತಾಯಿತು.
ಅಲ್ಲದೆ ಈ ಶಾಖೆಯಲ್ಲಿ ಈಗ ಸದ್ಯ ಮ್ಯಾನೇಜರ್ ಸೇರಿದಂತೆ ಒಟ್ಟು ಮೂರು ಜನ ಮಾತ್ರ ಸಿಬ್ಬಂದಿಯಿದ್ದು ವಹಿವಾಟು ನಡೆಸಲು ಬರುವರಿಗೆ ತೊಂದರೆಯಾಗುತ್ತದೆ ಎಂಬ ಮಾತು ಪಟ್ಟಣದ ಗ್ರಾಹಕರಲ್ಲಿ ಕೇಳಿಬರುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಖೆಯ ವ್ಯವಸ್ಥಾಪಕ ಸಯ್ಯದ್ ಅಹಮದ್ ಶಾಖೆಯ ಪ್ರಾರಂಭದದಿನ ಸಾಕಷ್ಟು ಪಾರಂಗಳನ್ನು ನೀಡಿದ್ದೇವೆ, ಅದರಲ್ಲಿ ಕೆಲವರು ಮಾತ್ರವೇ ಖಾತೆ ತೆರೆದಿದ್ದು, ಇನ್ನುಳಿದವರು ಮತ್ತೆ ಬಂದಿಲ್ಲ. ಈಗ ಹೊಸಬರರು ಬಂದು ಕೇಳಿದಾಗ ಕೊಡಲು ತಮ್ಮಲ್ಲಿ ಫಾರಂ ಇಲ್ಲ. ನಮ್ಮ ಮೇಲಾಧಿಕಾರಿಗಳಿಗೆ ಅಕೌಂಟ್ ಓಪನಿಂಗ್ ಫಾರಂ ಕಳುಹಿಸುವಂತೆ ಈಗಾಗಲೇ ತಿಳಿಸಿದ್ದು ಅಲ್ಲೂ ಫಾರಂ ಇಲ್ಲದ ಕಾರಣ ತೊಂದರೆ ಉಂಟಾಗಿದೆ ಅಲ್ಲದೆ ಇಲ್ಲಿನ ಗ್ರಾಹಕರಿಗೆ ಸ್ಪಂದಿಸಲು ಇನ್ನೂ ಹೆಚ್ಚಿನ ಹೆಚ್ಚಿನ ಸಿಬ್ಬಂದಿ ಅವಶ್ಯಕತೆಯಿದೆ ಎನ್ನುತ್ತಾರೆ.
ಒಟ್ಟಾರೆ ನೂತನ ಬ್ಯಾಂಕಿನಲ್ಲಿ ಸುಲಭವಾಗಿ ಖಾತೆ ತೆರೆಯಬಹುದೆಂದು ಶಾಖೆಗೆ ಆಗಮಿಸಿದ ಗ್ರಾಹಕರು ಖಾತೆತೆರೆಯಲು ಬೇಕಾದ ಅಕೌಂಟ್ ಫಾರಂ ಸಿಗದೆ ಹಿಂತಿರುಗುವಂತಾಗಿದೆ. ತಲೆನೋವಿಲ್ಲದೆ ಖಾತೆ ತೆರೆಬಹುದೆಂದು ಹೋಗುತ್ತಿದ್ದ ಗ್ರಾಹಕರಿಗೆ ಫಾರಂ ಸಿಗದಿರುವುದೆ ತಲೆನೋವಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ