ಹುಳಿಯಾರು ಹೋಬಳಿ ದೊಡ್ಡಬಿದರೆ ಗ್ರಾಮದಲ್ಲಿ ಕೆ,ಎಸ್,ಆರ್,ಟಿ ಬಸ್ ಗಳು ಸ್ಟಾಪ್ ನೀಡುವಂತೆ ಸಾರ್ವಜನಿಕರ ಒತ್ತಾಯದ ಮೇರೆಗೆ ಬಸ್ ನಿಲ್ಲಿಸುವಂತೆ ನಾಮಫಲಕವನ್ನು ಶುಕ್ರವಾರ ಹಾಕಲಾಯಿತು.
ಹುಳಿಯಾರು ಹೋಬಳಿ ದೊಡ್ಡಬಿದರೆಯಲ್ಲಿ ಕೆಎಸ್.ಆರ್.ಟಿ ಬಸ್ ನಿಲುಗಡೆಯ ನಾಮಫಲಕವನ್ನು ಸಾರ್ವಜನಿಕರು ಪ್ರದರ್ಶಿಸುತ್ತಿರುವುದು. |
ದೊಡ್ಡಬಿದರೆ ಗ್ರಾಮದಲ್ಲಿ ನಿತ್ಯ ಅನೇಕ ವಿದ್ಯಾರ್ಥಿಗಳು ಹುಳಿಯಾರು, ಚಿ.ನಾಹಳ್ಳಿ, ತಿಪಟೂರಿನ ಕಾಲೇಜುಗಳಿಗೆ ಹೋಗುತ್ತಿದ್ದು ಬಸ್ ಪಾಸ್ ಸಹ ಮಾಡಿಸಿದ್ದರು. ಆದರೆ ಬಸ್ ಹತ್ತಲು ಮಾತ್ರ ತಮ್ಮ ಗ್ರಾಮದಿಂದ ಒಂದೂವರೆ ಕಿ.ಮೀ ದೂರದ ಚಿಕ್ಕಬಿದರೆಗೆ ಹೋಗಬೇಕಿತ್ತು ಇದರಿಂದ ಇಲ್ಲಿನ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚಿನ ತೊಂದರೆಯಾಗಿತ್ತು. ತಮ್ಮ ಗ್ರಾಮದ ಮೂಲಕ ಬಸ್ ಹೋದರು ಸಹ ನಿಲುಗಡೆಗೆ ಅವಕಾಶವಿರಲಿಲ್ಲ ಈ ಬಗ್ಗೆ ಬಸ್ ನವರನ್ನು ಕೇಳಿದರೆ ಇಲ್ಲಿ ಸ್ಟಾಪ್ ಇಲ್ಲ ಎಂದು ಹೇಳುತ್ತಿದ್ದರು. ಇದರಿಂದ ಬೇಸರಗೊಂಡಿದ್ದ ಸಾರ್ವಜನಿಕರು ಖುದ್ದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ತಮ್ಮ ಗ್ರಾಮದಲ್ಲಿ ಬಸ್ ನಿಲುಗಡೆ ಮಾಡಿಸಿಕೊಡುವಂತೆ ಪಟ್ಟುಹಿಡಿದಿದ್ದರ ಫಲವಾಗಿ ಬಸ್ ನಿಲ್ಲಿಸುವಂತೆ ನಾಮಫಲಕ ಹಾಕಿಸುವಂತೆ ತಿಳಿಸಿದ್ದರು. ಅದರಂತೆ ಶುಕ್ರವಾರದಂದು ನಾಮಫಲಕ ಹಾಕಿದ್ದು ಇದೀಗ ಇಲ್ಲಿ ಸಂಚರಿಸುವ ಸರ್ಕಾರಿ ಬಸ್ ಗಳು ಸ್ಟಾಪ್ ಕೊಡುತ್ತಿದ್ದು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವನ್ನುಂಟು ಮಾಡಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ