ಹುಳಿಯಾರು ಪಟ್ಟಣದ ಎಂಟಿಎಸ್ ಟೆಲಿಕಾಮ್ ವತಿಯಿಂದ ಎಂಪಿಎಸ್ ಶಾಲಾವರಣದಲ್ಲಿ ಭಾನುವಾರ ಸಾರ್ವಜನಿಕರಿಗೆ ಉಚಿತ ಲಕ್ಕಿಡಿಪ್ ಕಾರ್ಯಕ್ರಮ ಆಯೋಜಿಸಿದ್ದು ಸ್ಥಳದಲ್ಲೇ ಉಡುಗೊರೆಗಳನ್ನು ವಿತರಿಸಲಾಯಿತು.
ಹುಳಿಯಾರಿನ ಎಂಟಿಎಸ್ ಕೆಲಿಕಾಮ್ ವತಿಯಿಂದ ಭಾನುವಾರ ಎಂಪಿಎಸ್ ಶಾಲಾವರಣದಲ್ಲಿ ಸಾರ್ವಜನಿಕರಿಗಾಗಿ ಉಚಿತ ಲಕ್ಕಿಡಿಪ್ ಕಾರ್ಯಕ್ರಮ ನಡೆಸಲಾಯಿತು |
ಸಾರ್ವಜನಿಕರು ತಮ್ಮ ಮೊಬೆಲ್ ಸಂಖ್ಯೆಯನ್ನು ಒಂದು ಚೀಟಿಯಲ್ಲಿ ಬರೆದು ಬಾಕ್ಸ್ ನಲ್ಲಿ ಹಾಕಬೇಕು ನಂತರ ೩೦ ನಿಮಿಷಗಳಿಗೊಮ್ಮೆ ಸಾರ್ವಜನಿಕರಿಂದ ಬಾಕ್ಸ್ ನಲ್ಲಿದ್ದ ಚೀಟಿಯೊಂದನ್ನು ತೆಗೆಸಿ ಅದರಲ್ಲಿನ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಅವರನ್ನು ತಮ್ಮ ಸ್ಟಾಲ್ ಹತ್ತಿರ ಕರೆಸಿಕೊಂಡು ಮತ್ತೊಂದು ಚೀಟಿ ತೆಗೆಸುವ ಮೂಲಕ ಬಗೆಬಗೆಯ ಉಡುಗೊರೆಗಳನ್ನು ವಿತರಿಸಿದರು. ಬೆಳಿಗ್ಗೆಯಿಂದ ನಡೆದ ಲಕ್ಕಿ ಡಿಪ್ ನಲ್ಲಿ ಮಕ್ಕಳು,ದೊಡ್ಡವರು ಸೇರಿದಂತೆ ಅಪಾರ ಮಂದಿ ಪಾಲ್ಗೊಂಡಿದ್ದು ವಾಚ್, ಬ್ಯಾಟರಿ,ವ್ಯಾನಿಟಿಬ್ಯಾಗ್, ಪ್ಲೇಟ್ ಸೇರಿದಂತೆ ಇನ್ನಿತ ಉಡುಗರೆಗಳನ್ನು ತಮ್ಮದಾಗಿಸಿಕೊಂಡರು. ಮೊಬೈಲ್ ನಂ ಮೂಲಕ ಅದೃಷ್ಟ ಪರೀಕ್ಷೆ ಹಾಗೂ ಉಡುಗೊರೆ ಎಂಬ ನಿಟ್ಟಿನಲ್ಲಿ ಈ ವಿನೂತ ಕಾರ್ಯಕ್ರಮ ಅಯೋಜಿಸಿದ್ದು , ಸಾರ್ವಜನಿಕರ ಖುಷಿಗಾಗಿ ನಡೆಸಿರುವುದಾಗಿ ಎಂಟಿಎಸ್ ಡಿಸ್ಟ್ರಿಬ್ಯೂಟರ್ ಹೆಚ್.ಬಿ.ಕಿರಣ್ ತಿಳಿಸುತ್ತಾರೆ. ಗಿಫ್ಟ್ ಪಡೆದ ಅನೇಕ ಮಂದಿ ಅಶ್ಚರ್ಯದಿಂದ ಇದೇನಪ್ಪಾ ನಮ್ಮ ಮೊಬೈಲ್ ನಂ ಮೂಲಕ ನಮಗೆ ಬಹುಮಾನ ಬಂತಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ