ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನೇಕ ಮಹಾನ್ ಕವಿಗಳು,ಕಥೆಗಾರರು, ವಿಮರ್ಶಕರು ಹಾಗೂ ಸಾಹಿತ್ಯ ರಚನೆಕಾರರಿದ್ದು ತಮ್ಮದೇ ಆದ ದಾಟಿಯಲ್ಲಿ ಸಾಹಿತ್ಯ ರಚಿಸಿದ್ದಾರೆ.ಅಂತಹವರಲ್ಲಿ ಡಿ.ವಿ.ಗುಂಡಪ್ಪನವರು ಸಹ ಒಬ್ಬರಾಗಿದ್ದು ತಮ್ಮ ವಿಶಿಷ್ಟ ಬರಹದ ಶೈಲಿಯಿಂದ ಕನ್ನಡಸಾಹಿತ್ಯ ಅಪಾರ ಕೊಡುಗೆ ಕೊಟ್ಟಿದ್ದಾರೆ ಎಂದು ಡಾ.ಗೊಪಾಲಕೃಷ್ಣ ತಿಳಿಸಿದರು.
ಹುಳಿಯಾರಿನ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿಯಲ್ಲಿ ನಡೆದ ಉಪನ್ಯಾಸಕ ಕಾರ್ಯಕ್ರಮದಲ್ಲಿ ಡಾ.ಗೊಪಾಲಕೃಷ್ಣ ಉಪನ್ಯಾಸ ನೀಡಿದರು. |
ಪಟ್ಟಣದ ಸನ್ಮಾರ್ಗ ಥಿಯಸಾಫಿಕಲ್ ಸೊಸೈಟಿವತಿಯಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು "ಡಿವಿಜಿಯವರ ಕಗ್ಗದ ಬೆಳಕಲ್ಲಿ ಥಿಯಾಸಫಿ" ವಿಷಯ ಕುರಿತು ಉಪನ್ಯಾಸ ನೀಡಿದರು.
ಡಿವಿಜಿ ರಚಿಸಿದ ಪದ್ಯಗಳ ಸಾಲನ್ನು ಮೆಲುಕುಹಾಕುತ್ತಾ ಲೋಕದ ಉಗ್ರಾಣದಲ್ಲಿ ನೂರು ಮತಗಳಿದ್ದು ಇಂತಹದ ನಡುವೆ ನಮ್ಮ ಜೀವನ ಪಯಣ ಸಾಗುತ್ತಿದೆ ಎಂದರು. ಆಧುನಿಕತೆ ಬೆಳೆದಂತೆ ಜೀವನದ ಮಾನವೀಯ ಮೌಲ್ಯಗಳು ಕಣ್ಮರೆಯಾತ್ತಾ, ನಮ್ಮನ್ನು ನಾವು ತಿಳಿಯದೇ ಹೋಗುತ್ತಿದ್ದೇ ಎಂದು ವಿಷಾದಿಸಿದರು. ಮಂಕುತಿಮ್ಮನ ಕಗ್ಗದಲ್ಲಿ ಜಗತ್ತಿನ ಪ್ರಸ್ತಾಪ ಮಾಡುತ್ತಾ ಮಾನವನ ಜೀವನದ ಚಟುವಟಿಕೆಗಳ ಬಗ್ಗೆ ತಿಳಿಸುತ್ತಾ ತನ್ನ ಹೊಟ್ಟೆಪಾಡಿಗಾಗಿ ಮಾನವ ಏನೆಲ್ಲಾ ಮಾಡುತ್ತಾನೆ ಎಂಬುದರ ಬಗ್ಗೆ ತಿಳಿಸಿದ್ದಾರೆಂದರು. ಪ್ರಕೃತಿಯ ವಿಷಯದಲ್ಲಿ ನಾವುಗಳು ನಮ್ಮ ಪರಿಸರದ ಅನೇಕ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿದ್ದೇವೆ ಅದರಿಂದ ಮುಂದಿನ ದಿನಗಳಲ್ಲಿ ದೊಡ್ಡಪರಿಣಾಮ ಉಂಟಾಗಲಿದೆ ಎಂದರು. ನಾವೆಲ್ಲಾ ದೇವರ ಮಕ್ಕಳೆಂದು ಹೇಳಿರುವ ಡಿವಿಜಿ ಅವರು ನಮಗೆ ಸದಾಕಾಲ ಒಳಿತಾಗುತ್ತದೆ ಆ ಸಮಯಕ್ಕಾಗಿ ನಾವುಕಾಯಬೇಕಿದೆ ಎಂದಿದ್ದಾರೆಂದು ತಿಳಿಸಿದರು.
ಸೊಸೈಟಿಯ ಅಧ್ಯಕ್ಷ ಗೋಪಾಲ್ ಅಧ್ಯಕ್ಷತೆವಹಿಸಿದ್ದು, ಎಂ.ಆರ್.ಗೊಪಾಲ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಹೇಶ್ ಸ್ವಾಗತಿಸಿ, ಶಿಕ್ಷಕ ಜಗದೀಶ್ ನಿರೂಪಿಸಿ ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ