ಚಿಕ್ಕನಾಯಕನಹಳ್ಳಿ ಉಪ ವಿಭಾಗದ ಹುಳಿಯಾರು ಶಾಖೆಯ ಘಟಕ ೧ ರಲ್ಲಿ ನಿರಂತರ ಜ್ಯೋತಿ ಕಾಮಗಾರಿ ನಡೆಯಲಿದ್ದು, ಪ್ರಯುಕ್ತ ತಾ.೧೩ರ ಶನಿವಾರದಿಂದ ತಾ.೨೧ರ ಭಾನುವಾರದ ವರೆಗೆ ಪಟ್ಟಣದಲ್ಲಿ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೪ ಗಂಟೆವರೆಗೆ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ.
ನಿರಂತರ ಜ್ಯೋತಿ ಕಾಮಗಾರಿ ಕ್ಷಿಪ್ರಗತಿಯಲ್ಲಿ ನಡೆಸುವ ನಿಟ್ಟಿನಲ್ಲಿ ತಾ.೧೩ ರಿಂದ ತಾ.೨೧ರರಲ್ಲಿ ತಾ.೧೬ ರಿಂದ ತಾ.೧೮ರ ವರೆಗೆ ಹೊರತು ಪಡಿಸಿ ಇನ್ನುಳಿದ ಆರು ದಿನಗಳ ಕಾಲ ನಿತ್ಯ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೪ರ ವರೆಗೆ ಹುಳಿಯಾರು ಟೌನ್ ೧೧ ಕೆವಿ ಮಾರ್ಗದಲ್ಲಿ ಅನಿಮಿಯತ ವಿದ್ಯುತ್ ಅಡಚಣೆ ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂನ ಎಸ್. ಓ. ಉಮೇಶ್ ನಾಯಕ್ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ