ಹುಳಿಯಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆಸಿಕೊಂಡು ಬರುತ್ತಿರುವ ಮನೆಮನೆಗಳಲ್ಲಿ ಪಾಕ್ಷಿಕ ಕನ್ನಡ ಕವಿಕಾವ್ಯಗೋಷ್ಠಿ ಕಾರ್ಯಕ್ರಮದಲ್ಲಿ ರಂಗಗೀತೆಗಳ ಗಾಯನ ಹಾಗೂ ಅವುಗಳ ಮಹತ್ವದ ಬಗ್ಗೆ ಉಪನ್ಯಾಸ ನಡೆಯಿತು.
ಹೋಬಳಿಯ ಚಿಕ್ಕಬಿದರೆಯ ಸಿ.ಎನ್.ನಾಗರಾಜು ಅವರ ಮನೆಯಲ್ಲಿ ಗೋಷ್ಠಿ ಆಯೋಜಿಸಿದ್ದು, ಹಾಗಲವಾಡಿಯ ಖ್ಯಾತ ರಂಗಕಲಾವಿದ ಹನುಮಪ್ಪ ಅವರು ತಮ್ಮ ಕಲಾಕ್ಷೇತ್ರದ ಅನುಭವ ಹಾಗೂ ರಂಗಗೀತೆಗಳು ಹಾಗೂ ಅದರ ಸಾಹಿತ್ಯದ ಮಹತ್ವ ತಿಳಿಸಿದರಲ್ಲದೆ, ರಂಗಗೀತೆಗಳನ್ನು ಹಾಡುವ ಮೂಲಕ ಮನರಂಜಿಸಿದರು.
ನಿವೃತ್ತ ಶಿಕ್ಷಕ ತ.ಶಿ.ಬಸವಮೂರ್ತಿಯವರು ಕನ್ನಡ ನಾಡುನುಡಿ ಕುರಿತು ಮಾತನಾಡುತ್ತಾ, ಜನಪದರ ಜೀವನ ಶೈಲಿ ಹಾಗೂ ಅಂದಿನ ಜನ ಜೀವನದ ಮೌಲ್ಯಗಳ ಬಗ್ಗೆ ತಿಳಿಸಿ, ತಮ್ಮ ಸ್ವರಚಿತ ಕವಿತೆಗಳನ್ನು ಗಾಯನ ಮಾಡಿದರು.
ಗ್ರಾ.ಪಂ.ಮಾಜಿ ಅಧ್ಯಕ್ಷ ಸಿ.ಎನ್.ಕೃಷ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕೋಡಿಹಳ್ಳಿಯ ಲಿಂಗದೇವರು, ಶಿಕ್ಷಕ ಯಲ್ಲಪ್ಪ ತೆಲುಗಿನ ರಂಗಗೀತೆಗಳನ್ನು ಹಾಡಿದರು. ನಯನ ಪ್ರಾರ್ಥಿಸಿ, ಶಿಕ್ಷಕ ದೇವರಾಜು ನಿರೂಪಿಸಿ,ವಂದಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ