ಪಟ್ಟಣದ ಶ್ರೀಪ್ರಸನ್ನ ಗಣಪತಿ ದೇವಾಲಯದಲ್ಲಿ ಮಂಗಳವಾರದಂದು ಅಂಗಾರಕ ಸಂಕಷ್ಟಹರದ ಚತುರ್ಥಿ ಅಂಗವಾಗಿ ವಿಶೇಷ ಪೂಜೆ ಹಾಗೂ ಹೋಮ ನಡೆಯಿತು.
ಸಂಕಷ್ಟಹರ ಚತುರ್ಥಿ ಮಂಗಳವಾರದಂದು ಬರುವುದು ವಿಶೇಷವಾಗಿದ್ದು ಈ ನಿಮಿತ್ತ ಸತ್ಯನಾರಾಯಣ ಮೇಸ್ಟ್ರು ಹಾಗೂ ರವಿಕುಮಾರ್ ಅವರ ಪೌರೋಹಿತ್ಯದಲ್ಲಿ ಹೋಮ ಹಮ್ಮಿಕೊಳ್ಳಲಾಗಿತ್ತು. ಮುಂಜಾನೆ ಪುಣ್ಯಾಹ, ದೇವನಾಂದಿ, ಪಂಚಾಮೃತಾಭಿಷೇಕ, ನವಗ್ರಹ ಹೋಮ, ಸಂಕಷ್ಟಹರ ಗಣಪತಿ ಹೋಮ ನಡೆದು ಪುರ್ಣಾಹುತಿ ಹಾಗೂ ಮಹಾಮಂಗಳಾರತಿ ಸಮರ್ಪಿಸಿದ ನಂತರ ಪಾನಕ ಪನಿವಾರ ವಿತರಿಸಲಾಯಿತು.
ನಾಗಣ್ಣ, ವೆಂಕಟರಾಯರು,ಮುರುಗೇಶ್,ದಯಾನಂದ್,ಪುಟ್ಟನಿಂಗೇಗೌಡ್ರು ದಂಪತಿಗಳು ಹೋಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಸಂಕಷ್ಟಹರದ ಉಪವಾಸ ವೃತ ಕೈಗೊಂಡ ಮಹಿಳೆಯರು ಪಾಲ್ಗೊಂಡು ಗಣೇಶನಿಗೆ ಪೂಜೆ ಸಲ್ಲಿಸಿದರು.
ಮಂಗಳವಾರದ ದಿನ ಸಂಕಷ್ಟಹರ ಬರುವುದು ವಿಶೇಷವಾಗಿದ್ದು ವರ್ಷದಲ್ಲಿ ಕೆಲವೊಂದು ದಿನ ಮಾತ್ರ ಬರುತ್ತದೆ. ಇಂದು ಸಂಕಷ್ಟಹರ ವೃತ ಪ್ರಾರಂಭಿಸಬಹುದಾಗಿದ್ದು , ಕುಟುಂಬದವರಿಗೆ ಆಯುಷ್ಯಾರೋಗ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಇದೇ ದಿನ ಸಂಜೆ ಗಣೇಶನಿಗೆ ಅಭಿಷೇಕ,ಅರ್ಚನೆ ಹಾಗೂ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು.
ದೇವಾಲಯ ಸಮಿತಿಯವರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತಾಧಿಗಳು ಉಪಸ್ಥಿತರಿದ್ದು ಸ್ವಾಮಿಯ ದರ್ಶನ ಪಡೆದು ಕೃತಾರ್ಥರಾದರು.
ಗಣಪತಿದೇವಾಲಯದಲ್ಲಿ ಅಂಗಾರಕ ಸಂಕಷ್ಟದ ಅಂಗವಾಗಿ ನಡೆದ ಹೋಮ |

ಹೋಮಕ್ಕೆ ಪೂರ್ಣಾಹುತಿ ಸಮರ್ಪಿಸುತ್ತಿರುವುದು. |
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ