ಹುಳಿಯಾರು ಸಮೀಪದ ಹಂದನಕೆರೆಯ ಬೇವಿನಹಳ್ಳಿ ಬಳಿಯ ಮಲ್ಲೇನಹಳ್ಳಿ ಕೆರೆಯಲ್ಲಿ ಪರಿಚಿತ ಮಹಿಳೆಯ ಶವವೊಂದು ಭಾನುವಾರ ಪತ್ತೆಯಾಗಿದೆ.
ಸುಮಾರು ೨೫ ರಿಂದ ೩೦ವರ್ಷ ವಯಸ್ಸಿನ ,ಅಹಿಳೆಯಾಗಿದ್ದು, ಮೈಮೇಲೆ ಯಾವುದೇ ಬಟ್ಟೆ ಇರುವುದಿಲ್ಲ.ಕಾಲಲ್ಲಿ ಬೆಳ್ಳಿ ಕಾಲುಂಗುರ,ಕಾಲುಚೈನ್ ಹಾಗೂ ಕಿವಿಯಲ್ಲಿ ಚಿನ್ನದ ಸಣ್ಣ ಓಲೆಗಳಿದ್ದು ಸುಮಾರು ೫ ಅಡಿ ಎತ್ತರದ ಕಡುಗೆಂಪು ಮೈಬಣ್ಣದಿಂದ ಕೂಡಿದೆ. ಈ ಮಹಿಳೆ ಯಾರು, ಈಕೆಯ ಸಂಬಂಧಿಕರು ಯಾರೆಂಬುದು ತಿಳಿಯದ ಕಾರಣ ಶವವನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ಕಳುಹಿಸಿ ಶವಾಗಾರದಲ್ಲಿರಿಸಿರುವುದಾಗಿ ಹಂದನಕೆರೆ ಪೋಲಿಸರು ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ