ಹುಳಿಯಾರು ಸಮೀಪದ ಹೊಸದುರ್ಗ ತಾಲ್ಲೂಕಿನ ಗವಿರಂಗಾಪುರದ ಪುರಾಣಪ್ರಸಿದ್ಧ ಶ್ರೀಗವಿರಂಗನಾಥಸ್ವಾಮಿಯ ವೈಕುಂಠ ಏಕಾದಶಿ ಗುರುವಾರದಂದು ವೈಭವಯುತವಾಗಿ ನಡೆಯಲಿದೆ.
ವೈಕುಂಠ ಏಕಾದಶಿ ಆಚರಣೆ ಅಂಗವಾಗಿ ಗುರುವಾರ ಮುಂಜಾನೆ ಮೂಲದೇವರಿಗೆ ಹಾಗೂ ಅನಂತಪದ್ಮನಾಭಸ್ವಾಮಿಗೆ ಅಭಿಷೇಕ,ನೈವೇದ್ಯ ಮಂಗಳಾರತಿ ಹಾಗೂ ಸತ್ಯನಾರಾಯಣ ವ್ರತಪೂಜೆ, ಅಶ್ವವಾಹನೋತ್ಸವ ನಡೆಯಲಿದೆ. ಬ್ರಾಹ್ಮಣ ಸುಹಾಸಿನಿಯರಿಗೆ ವಸಂತಸೇವೆ ಹಾಗೂ ಫಲಹಾರ ಸೇವೆ ನಡೆಯಲಿದೆ. ಇದೇ ದಿನ ಸಂಜೆ ಉಯ್ಯಾಲೋತ್ಸವ , ಶನಿಮಹಾತ್ಮೆ ಕಥೆ ಪಾರಾಯಣ,ಗವಿರಂಗಾಪುರ ಹಾಗೂ ಹೆಗ್ಗರೆಯ ಭಜನಾಮಂಡಳಿಯವರಿಂದ ಅಖಂಡ ಭಜನೆ ನಡೆಯಲಿದೆ. ರಾತ್ರಿ ೯ ಗಂಟೆಯಿಂದ ವೈಕುಂಠ ನಾರಾಯಣ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಆಗಮಿಸಿದ ಭಕ್ತಾಧಿಗಳಿಗಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ.
ತಾ.೦೨ರ ಶುಕ್ರವಾರ ಮುಕ್ಕೋಟಿ ದ್ವಾದಶಿ ಪ್ರಯುಕ್ತ ಹುಳಿಯಾರಿನ ಗವಿರಂಗನಾಥ ಲಾರಿ ಮಾಲೀಕರಾದ ಅನಂತಸುಬ್ಬರಾವ್ ಮಕ್ಕಳು ಸೇರಿದಂತೆ ಭಕ್ತಾಧಿಗಳ ಸೇವಾರ್ಥದಲ್ಲಿ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಗಜವಾಹನೋತ್ಸವ, ಉಯ್ಯಾಲೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ತಾ.೦೩ರ ಶನಿವಾರ ತೋಟದ ಅಂಗಡಿ ನಂಜಪ್ಪನವರ ಸೇವಾರ್ಥದಲ್ಲಿ ಧೂಪದ ಸೇವೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯ ಭಕ್ತಾಧಿಗಳು ಆಗಮಿಸುವಂತೆ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ