ಪಂಚಾಯ್ತಿ ದಾಖಲೆಗಳನ್ನು ಗಣಕೀಕೃತ ದಾಖಾಲೆ ಮೂಲಕ ನೀಡುವ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಈ ಸ್ವತ್ತು ಜಾರಿ ಮಾಡುವ ನಿಟ್ಟಿನಲ್ಲಿ ಹೋಬಳಿಯ ಎಲ್ಲಾ ಗ್ರಾ.ಪಂ.ಗಳಿಗೂ ಇಂಟರ್ ನೆಟ್ ಸೌಲಭ್ಯ ಕಲ್ಪಿಸಲು ಭರದಿಂದ ಕಾಮಗಾರಿಗಳು ಹೋಬಳಿ ವ್ಯಾಪ್ತಿಯಲ್ಲಿ ನಡೆಯುತ್ತಿದೆ.
ಈಗಾಗಲೇ ಹುಳಿಯಾರು ದೂರವಾಣಿ ಕೇಂದ್ರದ ಮೂಲಕ ಬರಕನಹಾಲ್ ಪಂಚಾಯ್ತಿಗೆ ಈಗಾಗಲೇ ಕೇಬಲ್ ಲೈನ್ ಕಾಮಗಾರಿ ಮುಗಿದಿದ್ದು, ದೊಡ್ಡಬಿದರೆ ಹಾಗೂ ಕೆಂಕೆರೆ ಪಂಚಾಯ್ತಿಗಳಿಗೆ ಸಂಪರ್ಕ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ.
ಹುಳಿಯಾರು ಹೋಬಳಿ ದೊಡ್ಡಬಿದರೆಯ ಬಸ್ ನಿಲ್ದಾಣದ ಸಮೀಪ ಹೆದ್ದಾರಿ ಪಕ್ಕದಲ್ಲಿ ಮುಚ್ಚದೆ ಹಾಗೇ ಬಿಟ್ಟಿರುವ ಓಎಫ್.ಸಿ ಕೇಬಲ್ ಲೈನ್. |
ಹೋಬಳಿಯಿಂದ ದೊಡ್ಡಬಿದರೆ ಗ್ರಾ.ಪಂ.ಗೆ ಸಂಪರ್ಕ ಕಲ್ಪಿಸಲು ಕೇಬಲ್ ಲೈನನ್ನು ತೆಗೆದು ಪೈಪ್ ಹಾಕಿ ಮೂರ್ನಾಲ್ಕು ದಿನವಾಗಿದ್ದು ಕೆಲ ಕಡೆ ಮಾತ್ರ ಗುಂಡಿ ಮುಚ್ಚಿದ್ದಾರೆ ಹೊರತು ಗ್ರಾಮದ ಬಸ್ ನಿಲ್ದಾಣದ ಹೆದ್ದಾರಿ ರಸ್ತೆಯ ಬದಿಯಲ್ಲಿ ತೆಗೆದಿರುವ ಗುಂಡಿಯನ್ನು ಮುಚ್ಚಿಲ್ಲ. ಈ ಗುಂಡಿ ಸುಮಾರು ಒಂದೂವರೆಯಿಂದ ಎರಡು ಮೀ ಆಳ ಹಾಗೂ ಒಂದೂವರೆ ಅಡಿಯಷ್ಟು ಆಗಲವಿದ್ದು ಅದನ್ನು ದಾಟಿ ಓಡಾಡುವಂತ ಪರಿಸ್ಥಿತಿ ಇಲ್ಲಿನ ನಿವಾಸಿಗಳದ್ದಾಗಿದೆ. ಅಲ್ಲದೆ ಮನೆ ಮುಂದೆಯೇ ಈ ಗುಂಡಿ ತೆಗೆದಿರುವುದರಿಂದ ಬೈಕ್,ಟ್ರ್ಯಾಕ್ಟರ್ ಇನ್ನಿತರ ವಾಹನಗಳನ್ನು ಹೊರತೆಗೆದುಕೊಂಡು ಹೋಗಲು ಆಗುತ್ತಿಲ್ಲ. ಈ ಬಗ್ಗೆ ಕೆಲಸ ಮಾಡಿದವರಿಗೆ ಹೇಳೋಣವೆಂದರೆ ಯಾರು ಇತ್ತ ಬಂದಿಲ್ಲ ಇದರಿಂದ ಹೆಚ್ಚಿನ ತೊಂದರೆಯಾಗಿ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ದೊಡ್ಡಬಿದರೆ ಮೂಲಕ ಹಾದುಹೋಗಿರುವ ಹೆದ್ದಾರಿಯಿಂದ ಸುಮಾರು ಐದಾರು ಅಡಿ ಅಂತರದಲ್ಲಿ ಈ ಗುಂಡಿಯಿದೆ. ರಸ್ತೆಯಲ್ಲಿ ಚಲಿಸುವ ವಾಹನಗಳೇನಾದರೂ ಅಕಸ್ಮಾತಾಗಿ ರಸ್ತೆ ಬದಿಗೆ ಬಂದರೆ ಮಣ್ಣು ಕುಸಿಯುತ್ತದೆ ಅಲ್ಲದೆ ವಾಹನವೂ ಬಿದ್ದುಬಿಡುವ ಸಂಭವ ಹೆಚ್ಚಿದೆ. ಈ ಬಗ್ಗೆ ಸಂಬಂಧ ಪಟ್ಟ ಇಲಾಖೆಯವರಾಗಲಿ ಅಥವಾ ಕಾಮಗಾರಿಗೆ ಟೆಂಡರ್ ತೆಗೆದುಕೊಂಡವರಾಗಲಿ ಶೀಘ್ರವೇ ಈ ಗುಂಡಿಯನ್ನು ಮುಚ್ಚಿದಲಿ ಸಾರ್ವಜನಿಕರಿಗೆ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ