ಹುಳಿಯಾರು ಪಟ್ಟಣದ ಬಸ್ ನಿಲ್ದಾಣದ ಕೆರೆ ಅಂಗಳದಲ್ಲಿದ್ದ ಅನಧೀಕೃತ ಅಂಗಡಿಗಳ ತೆರವಿಗೆ ಜನವರಿ ೩೦ ರವರೆಗೆ ಜಿಲ್ಲಾಧಿಕಾರಿಗಳು ಕಾಲಾವಾಕಾಶ ನೀಡಿದ್ದು ಅಂಗಡಿದಾರರನ್ನು ಸ್ವಲ್ಪ ನಿರಾಳಮಾಡಿದೆ.
ಅಂಗಡಿ ತೆರವಿಗೆ ಡಿಸೆಂಬರ್ ೨೪ ಕ್ಕೆ ಕಡೆ ದಿನವೆಂದು ಕಂದಾಯ ಇಲಾಖೆಯಿಂದ ನೋಟಿಸ್ ನೀಡಿದ್ದರ ಪರಿಣಾಮವಾಗಿ ಅಂಗಡಿದಾರರು ಆತಂಕಕ್ಕೊಳಗಾಗಿ ಕೆಲ ಅಂಗಡಿಯವರು ಅಂಗಡಿ ತೆರವು ಮಾಡಲು ಮುಂದಾಗಿದ್ದರೆ, ಮೆತ್ತೆ ಕೆಲ ಅಂಗಡಿಯವರು ಬುಧವಾರದಂದು ಸಂಸದ ಮುದ್ದಹನುಮೇಗೌಡರನ್ನು ಭೇಟಿ ಮಾಡಿ ಅವರೊಂದಿಗೆ ಮಾತನಾಡಿ ಸಂಸದ ಜೊತೆಯೇ ಜಿಲ್ಲಾಧಿಕಾರಿ ಕಛೇರಿಗೆ ತೆರಳಿ ತಮಗೆ ಆರು ತಿಂಗಳ ಕಾಲಾವಾಕಾಶ ಕೋರಿ ಮನವಿ ಸಲ್ಲಿಸಿದ್ದರು. ಮನವಿ ಸ್ವೀಕರಿಸಿದ ಡಿಸಿಯವರು ಜನವರಿ ೩೦ರವರೆ ಗಡುವು ನೀಡಿ, ಆದೇಶಪತ್ರವನ್ನು ತಾಲ್ಲೂಕು ಕಛೇರಿಗೆ ರವಾನಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ