ಹುಳಿಯಾರು:ಹೋಬಳಿಯ ವಿವಿಧೆಡೆ ಗುರುವಾರದಂದು ಹನುಮಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.ಶಂಕರಪುರದ ಗೋಪಾಲ್ ರಾವ್ ನಿವಾಸದಲ್ಲಿ,ಲಿಂಗಪ್ಪನಪಾಳ್ಯದ ಶ್ರೀರಾಮದೇವಸ್ಥಾನದಲ್ಲಿ,ಕುರಿಹಟ್ಟಿಯ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ,ಸೀಗೆಬಾಗಿಯ ವರದರಾಜ ಸ್ವಾಮಿ ದೇವಾಲಯ ಸೇರಿದಂತೆ ತಿರುಮಲಾಪುರ ,ಗೋಪಾಲಪುರ,ಹೊಸಹಳ್ಳಿ,ಗೂಬೆಹಳ್ಳಿ ದೊಡ್ಡಎಣ್ಣೆಗೆರೆಯ ಆಂಜನೇಯಸ್ವಾಮಿ ದೇವಸ್ಥಾನಗಳಲ್ಲಿ ಅತ್ಯಂತ ಭಕ್ತಿ ಭಾವದಿಂದ ಆಚರಿಸಲಾಯಿತು.ಇದರ ಅಂಗವಾಗಿ ವಿಶೇಷ ಪೂಜೆ ಪುನಸ್ಕಾರ ನಡೆಯಿತು.ಹನುಮಂತ ದೇವರನ್ನು ಬಗೆಬಗೆಯ ಹೂವು ಹಣ್ಣುಗಳಿಂದ ಮಾಡಿದ್ದ ಅಲಂಕಾರ ಕಣ್ಣುತುಂಬುವಂತಿತ್ತು.ಬೆಳಿಗ್ಗೆ ಆಂಜನೇಯಸ್ವಾಮಿಗೆ ಪವಮಾನ ಹೋಮ, ಪಂಚಾಮೃತ ಅಭಿಷೇಕ,ಮಹಾಭಿಷೇಕ,ಕುಂಕುಮಾರ್ಚನೆ ಸೇರಿದಂತೆ ಮುಖ್ಯಪ್ರಾಣನಿಗೆ ಬಗೆಬಗೆಯ ಪೂಜೆ ನಡೆಯಿತು. ಪೂರ್ಣಾಹುತಿ, ಮಹಾಮಂಗಳಾರತಿ ನಂತರ ಪ್ರಸಾದ,ಪಾನಕ ಪನಿವಾರ ವಿತರಿಸಲಾಯಿತು.
ಹುಳಿಯಾರು ಹೋಬಳಿ ಜೋಡಿ ತಿರುಮಲಾಪುರದಲ್ಲಿ ಹನುಮಜಯಂತಿ ಅಂಗವಾಗಿ ರಥೋತ್ಸವ ನಡೆಸಲಾಯಿತು. |
ಶಂಕರಪುರದಲ್ಲಿ ಗೋಪಾಲ್ ರಾವ್ ಅವರ ನಿವಾಸದಲ್ಲಿ ಮುಂಜಾನೆ ಪವಮಾನ ಹೋಮ ಹಾಗೂ ಮುಖ್ಯಪ್ರಾಣ ಭಜನಾಮಂಡಲಿಯಿಂದ ಭಜನೆ ನಡೆದು ನೂರಾರು ಜನರಿಗೆ ಅನ್ನಸಂತರ್ಪಣೆ ಮಾಡಲಾಯಿತು.
ತಿರುಮಲಾಪುರದಲ್ಲಿ ಅರುಣ,ಕೃಷ್ಣ,ರಾಘವೇಂದ್ರ ಸಂಗಡಗರಿಂದ ಆಂಜನೇಯಸ್ವಾಮಿಗೆ ಅಭಿಷೇಕ ನಡೆದು ಕೊಲ್ಲಾಪುರಿ ಮಹಾಲಕ್ಷ್ಮಿ ಅಮ್ಮನವರ ಸಮ್ಮುಖದಲ್ಲಿ ರಥೋತ್ಸವವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.ವಿಪ್ರರಿಗೆ ವಸಂತ ನಡೆದು ಪಾನಕ ಪನಿವಾರ ವಿತರಿಸಲಾಯಿತು.ಲಕ್ಷ್ಮಿನರಸಿಂಹಮೂರ್ತಿ,ಮಂಜುನಾಥಶರ್ಮ,ಮಂಜುನಾಥ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
ಹೊಸಹಳ್ಳಿ ಪಾಳ್ಯದ ಆಂಜನೇಯಸ್ವಾಮಿಗೆ ರಾಮಚಂದ್ರಭಟ್ ಅವರ ಪೌರೋಹಿತ್ಯದಲ್ಲಿ ಪವಮಾನ ಹೋಮ ಹಾಗೂ ಭಜನೆ ನಡೆಯಿತು.
ಒಟ್ಟಾರೆ ಎಲ್ಲಾ ಅಂಜನೇಯಮಂದಿರಗಳಲ್ಲಿ ನಡೆದ ಹನುಮಜಯಂತಿ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಗ್ರಾಮಸ್ಥರು ಪಾಲ್ಗೊಂಡು ಸ್ವಾಮಿಯನ್ನು ಕಣ್ತುಂಬಿಕೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ