ತಾಲ್ಲೂಕಿನ ಗಡಿ ಗ್ರಾಮಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ಗಮನ ಮಾಡಿದ್ದು ಅವುಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ರಸ್ತೆ ಸೇರಿದಂತೆ ಇನ್ನಿತರ ಸವಲತ್ತುಗಳನ್ನು ನೀಡುವುದಾಗಿ ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಹುಳಿಯಾರು ಹೋಬಳಿ ದಬ್ಬಗುಂಟೆಯಲ್ಲಿ ನಡೆದ ಪ್ರಾಥಮಿಕ ಕಿರುಆರೋಗ್ಯಕೇಂದ್ರದ ಉದ್ಘಾಟನಾ ಸಮಾರಂಭವನ್ನು ಶಾಸಕ ಸಿ.ಬಿ.ಸುರೇಶ್ ಬಾಬು ನೆರವೇರಿಸಿದರು. |
ಹುಳಿಯಾರು ಹೋಬಳಿಯ ದಬ್ಬಗುಂಟೆಯಲ್ಲಿ ಶನಿವಾರ ನಡೆದ ಪ್ರಾಥಮಿಕ ಕಿರುಆರೋಗ್ಯಕೇಂದ್ರದ ಉದ್ಘಾಟನೆ ಹಾಗೂ ಕಲ್ಲೇನಹಳ್ಳಿ ಕ್ರಾಸ್ ನಿಂದ ಪಿಲಾಲಿವರೆಗಿನ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.
ಸುವರ್ಣಗ್ರಾಮಯೋಜನೆಯಡಿ ಹೊಯ್ಸಳಕಟ್ಟೆ,ದಸೂಡಿ,ದಬ್ಬಗುಂಟೆ ಗ್ರಾಮಗಳಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಮುಂದೆಯೂ ಸಹ ಗಡಿಗ್ರಾಮಗಳನ್ನು ಗುರ್ತಿಸಿ ಹೆಚ್ಚಿನ ಅಭುವೃದ್ಧಿ ಪಡಿಸುವುದಾಗಿ ತಿಳಿಸಿದರು. ಕಲ್ಲೇನಹಳ್ಳಿ ಕ್ರಾಸ್ ನಿಂದ ರಾಮನಗರ, ಮರೆನಡು ಗ್ರಾಮಗಳ ಮಾರ್ಗವಾಗಿ ಹಿರಿಯೂರು ಗಡಿ ರಸ್ತೆಯ ಸುಮಾರು ೧೦. ೫ ಕಿ.ಮೀ ದೂರದ ರಸ್ತೆಗೆ ಡಾಂಬರೀಕರಣ ಯೋಜನೆಗೆ ಚಾಲನೆ ನೀಡಲಾಗಿದೆ ಶೀಘ್ರದಲ್ಲೇ ಕಾಮಗಾರಿ ನಡೆಯಲಿದೆ ಎಂದರು.
ತಹಸೀಲ್ದಾರ್ ಕಾಮಾಕ್ಷಮ್ಮ, ಇಓ ಕೃಷ್ಣಮೂರ್ತಿ,ತಾಲ್ಲೂಕು ವೈದ್ಯಾಧಿಕಾರಿ ಶಿವಕುಮಾರ್,ತಾ.ಪಂ.ಸದಸ್ಯೆ ಕವಿತಾಪ್ರಕಾಶ್, ದಸೂಡಿ ಗ್ರಾ.ಪಂ.ಅಧ್ಯಕ್ಷ ಶಿವಣ್ಣ ಸದಸ್ಯರಾದ ರಮೇಶ್ ,ರಾಮಯ್ಯ,ಹೆಂಜಪ್ಪ, ಕಾಂತರಾಜು,ಯಶೋಧಮ್ಮ , ಹೊಯ್ಸಳಕಟ್ಟೆ ಆಸ್ಪತ್ರೆಯ ವೈದ್ಯ ರಜನೀಶ್ ಬಾಬು ಇತರರಿದ್ದರು. ಇದೇವೇಳೆ ಪ್ರಾಥಮಿಕ ಕಿರು ಆರೋಗ್ಯಕೇಂದ್ರ ಕಟ್ಟಡದ ಸ್ಥಳದಾನಿಗಳಾದ ಮಾಜಿ ಗ್ರಾ.ಪಂಅಧ್ಯಕ್ಷ ಹಾಗೂ ಹಾಲಿ ಸದಸ್ಯ ಡಿ.ಬಿ.ರವಿಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ