ವರದಿ : ಡಿ.ಆರ್.ನರೇಂದ್ರಬಾಬು ಹುಳಿಯಾರು : ಅಕ್ರಮ ಕೃಷಿ ಪಂಪ್ ಸೆಟ್ ಸಕ್ರಮ ಮಾಡಿಕೊಳ್ಳಲು ಇದೇ ತಿಂಗಳ ೩೧ ಅಂತಿಮ ಗಡುವು ನೀಡಿದ್ದು, ಅರ್ಜಿಸಲ್ಲಿಸಿ ಹಣ ಪಾವತಿಸಿ ಸಕ್ರಮಗೊಳಿಸಿಕೊಳ್ಳದವರ ಆಕ್ರಮ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ಇಲಾಖೆ ಮುಂದಾಗುವುದೆ ಎಂಬ ಪ್ರಶ್ನೆ ಪಂಪ್ ಸೆಟ್ ದಾರರಲ್ಲಿ ಮೂಡಿದೆ. ಹುಳಿಯಾರಿನ ಬೆಸ್ಕಾಂ ಕಛೇರಿ ಮುಂದೆ ಆಕ್ರಮ-ಸಕ್ರಮದ ಬಗ್ಗೆ ಪ್ರಚಾರ ಕಾಣದಿರುವುದು. ಅಕ್ರಮ-ಸಕ್ರಮ ಯೋಜನೆಯಡಿ ಇಂದು ಅರ್ಜಿಸಲ್ಲಿಸಲು ಕಡೆಯ ದಿನವಾಗಿದ್ದು ಕೃಷಿ ಬಳಕೆಯ ಅಕ್ರಮ ಕೃಷಿ ಪಂಪ್ ಸೆಟ್‌ಗಳನ್ನು ಸಕ್ರಮ ಮಾಡಿಕೊಳ್ಳದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಹೇಳುತ್ತಾ ಬಂದಿದ್ದರೂ ಸಹ ಅಕ್ರಮ ಕೃಷಿ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಿಕೊಳ್ಳಲು ರೈತರಲ್ಲಿ ನಿರಾಸಕ್ತಿ ಕಂಡುಬರುತ್ತಿದೆ. ಅಲ್ಲದೆ ಈ ಬಗ್ಗೆ ರೈತರಿಗೆ ಅರಿವುಂಟು ಮಾಡಬೇಕಿದ್ದ ಬೆಸ್ಕಾಂ ಕೂಡ ರೈತರಿಗೆ ಯಾವುದೇ ಸೂಚನೆಯನ್ನೂ ನೀಡದೆ ಕೇವಲ ಕಚೇರಿಯ ಫಲಕದಲ್ಲಿ ಪ್ರಕಟಣೆಗಷ್ಟೆ ಸೀಮಿತಗೊಳಿಸಿಕೊಂಡಿದ್ದು ಹಿನ್ನಡೆಗೆ ಕಾರಣವಾಗಿದೆ. ಅಂತಿಮ ದಿನ ಸಮೀಪಿಸುತ್ತಿದ್ದರೂ ಸಹ ಹೋಬಳಿಯ ಬೆಸ್ಕಾಂ ಇಲಾಖೆಯಿಂದ ಯಾವುದೇ ಪ್ರಚಾರ ಕಂಡುಬರದೆಯಿದ್ದು ರೈತರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯದಂತಾಗಿದೆ. ಸದ್ಯ ಕೃಷಿ ಚಟುವಟಿಕೆ ಕೂಡ ವಾಣಿಜ್ಯಕರಣವಾಗಿದ್ದು ಪ್ರತಿಯೊಬ್ಬ ರೈತರು ತಮ್ಮ ಜಮೀನಿನಲ್ಲಿ ಬೋರ್ ವೆಲ್ ಹಾಕಿಸಿಕೊಳ...
📰 ಹುಳಿಯಾರು ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಸ್ಥಳಿಯ ಸುದ್ದಿ ಸಮಾಚಾರದ ಬ್ಲಾಗ್........ ✍️ನರೇಂದ್ರಬಾಬು ಹುಳಿಯಾರು-📞9448760070