ಹುಳಿಯಾರು ಹೋಬಳಿ ಶ್ರೀಪಾತಲಿಂಗೇಶ್ವರಸ್ವಾಮಿ, ಶ್ರೀಕರಿಯಮ್ಮದೇವಿ ಹಾಗೂ ಶ್ರೀಬೇವಿನಹಳ್ಳಿ ಅಮ್ಮನವರ ಜಾತ್ರಾಮಹೋತ್ಸವದ ಅಂಗವಾಗಿ ಗ್ರಾಮದ ಏಳುಕೋಟಿ ಮೈಲಾರಲಿಂಗೇಶ್ವರ ಸ್ವಾಮಿಯ ಒಕ್ಕಲಿನವರಿಂದ ಭಾನುವಾರ ಬೆಳಿಗ್ಗೆ ೧೦ರ ವೇಳೆಗೆ ಗೊರಪ್ಪಗಳ ದೋಣಿ ತುಂಬುವ ಸೇವೆ ನಡೆಯಲಿದೆ.
ಭಾನುವಾರ ಬೆಳಿಗ್ಗೆ ಧ್ವಜಾರೋಹಣ , ಸ್ವಾಮಿಗೆ ರುದ್ರಾಭಿಷೇಕ ನಡೆದು ನಂತರ ಬೆಲುಗೂರಿನ ಬಿಂದುಮಾಧವ ಸ್ವಾಮೀಜಿ ಅವರಿಂದ ಗ್ರಾಮದ ಆಂಜನೇಯಸ್ವಾಮಿಗೆ ಕವಚ ಸಮರ್ಪಡೆ ನಡೆಯಲಿದೆ. ನಂತರ ದೇವಾಲಯದ ಆವರಣದಲ್ಲಿ ಮೈಲಾರಲಿಂಗನ ಸ್ವರೂಪ ಎನ್ನಲಾಗುವ ಗೊರಪ್ಪಗಳ ದೋಣಿ ತುಂಬುವ ಸೇವೆ ನಡೆದು ನಂತರ ಸ್ವಾಮಿಯನ್ನು ಮಜ್ಜನಬಾವಿಯಲ್ಲಿಗೆ ಕರೆದೊಯ್ದು ಗಂಗಾಪೂಜೆ ಹಾಗೂ ಆಗಮಿಸಿದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ. ಇದೇ ದಿನ ರಾತ್ರಿ ಸ್ವಾಮಿಯ ಉತ್ಸವ ಸಹ ನಡೆಯಲಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸಮಿತಿಯವರು ಕೋರಿದ್ದಾರೆ,
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ