ಇಲ್ಲಿನ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆ ಉದ್ಘಾಟಿಸಿದರು.
ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟವನ್ನು ಪ್ರಾಚಾರ್ಯ ಕೃಷ್ಣಮೂರ್ತಿ ಬಿಳಿಗೆರೆ ಉದ್ಘಾಟಿಸಿದರು. |
ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಒಂದಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸಲಿ ಎಂಬ ದೃಷ್ಠಿಯಿಂದ ವಾಲಿಬಾಲ್,ಕಬಡ್ಡಿ, ಥ್ರೋಬಾಲ್, ಷಟಲ್ ಕಾಕ್, ಬಾಲ್ ಬ್ಯಾಡ್ಮಿಂಟನ್ , ಕೇರಂ ಚೆಸ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಅಯೋಜಿಸಿದ್ದು , ವಿದ್ಯಾರ್ಥಿಗಳ ತಂಡಗಳನ್ನು ರಚಿಸಿ ಆಟೋಟಗಳನ್ನು ನಡೆಸಿದರು. ಈ ವೇಳೆ ತೀರ್ಪುಗಾರರಾದ ಮಂಜುನಾಥ್ ಹಾಗೂ ರಾಮಸ್ವಾಮಿ, ದೈಹಿಕ ಶಿಕ್ಷಣ ನಿರ್ದೇಶಕ ಶಿವಯ್ಯ, ಉಪನ್ಯಾಸಕರಾದ ಸೈಯ್ಯದ್ ಇಬ್ರಾಹಿಂ, ಶ್ರೀನಿವಾಸಪ್ಪ, ಅಶೋಕ್,ಶಂಕರಲಿಂಗಯ್ಯ,ಉಮೇಶ್,ಹನುಮಂತಪ್ಪ ಸೇರಿದಂತೆ ಇತರರಿದ್ದರು. ಈ ಕ್ರೀಡೆಗಳಲ್ಲಿ ವಿಜೇತರಾದವರಿಗೆ ವಾರ್ಷಿಕೋತ್ಸವದಲ್ಲಿ ಬಹುಮಾನ ವಿತರಣೆ ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ