ಇಂದಿನ ಬಜೆಟ್ ನಲ್ಲಿ ಗ್ರಾಮೀಣ ಪ್ರದೇಶದ ಹಾಗೂ ರೈತಾಪಿವರ್ಗ , ಹಿಂದುಳಿದ ವರ್ಗದವರ ಬಗ್ಗೆ ಹೆಚ್ಚಿನ ಅದ್ಯತೆ ನೀಡುವ ಬಗ್ಗೆ ಕುತೂಹಲ ತಾಳಿದ್ದ ಜನತೆಗೆ ಸಿದ್ದರಾಮಯ್ಯನವರ ಬಜೆಟ್ ಹೆಚ್ಚಿನ ನಿರಾಸೆ ಮೂಡಿಸದೆ ಅನುಕೂಲ ಮಾಡಿಕೊಟ್ಟಿದೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಸತತ ಹತ್ತನೇ ಬಾರಿ ದಾಖಲೆ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿಕೊಂಡಿದ್ದ ಹುಳಿಯಾರಿನ ಜನತೆಯಿಂದ ವ್ಯಕ್ತವಾದ ಪ್ರತಿಕ್ರಿಯೆ ಹೀಗಿದೆ.
ತೆಂಗು ಉತ್ಪಾದಕರ ಅಭಿವೃದ್ಧಿಗೆ ಉತ್ತೇಜನ ನೀಡುವುದಾಗಿ ಈ ಬಜೆಟ್ ನಲ್ಲಿ ಹೇಳಿರುವುದು ಸ್ವಾಗತಾರ್ಹ, ತೆಂಗು ಬೆಳೆಗಾರರ ಸಮಗ್ರ ಅಭಿವೃದ್ದಿಗೆ ಪಣತೊಟ್ಟಿರುವ ಸರ್ಕಾರ ತೆಂಗುಬೆಳೆಗಾರರ ಬಹು ವರ್ಷದ ಬೇಡಿಕೆಯಾದ ನೀರಾ ಇಳಿಸುವ ನಿರ್ಧಾರಕ್ಕೆ ಒಪ್ಪಿಗೆ ನೀಡಿರುವುದು ಅಶಾದಾಯಕ ಬೆಳವಣಿಗೆ : ಮೋಹನ್ ,ತೆಂಗುಬೆಳೆಗಾರ,ಹುಳಿಯಾರು.
ಕೃಷಿ ಆಧಾರಿತ ಕೊಳವೆ ಬಾವಿ ವಿಫಲವಾದರೆ ಸಾಲಮನ್ನಾ ಮಾಡುವುದಾಗಿ ಹೇಳಿದೆ.ಅಲ್ಲದೆ ಕೃಷಿ, ತೋಟಗಾರಿಕಾ ಬೆಳೆಗಳಿಗೆ ವೈಜ್ಞಾನಿಕ ದರ ನಿಗದಿಗೆ ಕೃಷಿ ಬೆಲೆ ಆಯೋಗ ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹವಾಗಿದ್ದು, ಇದು ಕೇವಲ ಆಶ್ವಾಸನೆಯಾಗದೆ ಜಾರಿಯಾಗಬೇಕು :
ಕೆಂಕೆರೆಸತೀಶ್, ಹಸಿರುಸೇನೆ ಕಾರ್ಯದರ್ಶಿ.
.
ಕನ್ನಡ ಸಾಹಿತ್ಯ ಪರಿಷತ್ ಶತಮಾನೋತ್ಸವ. 2015-16ನ್ನು ಕನ್ನಡ ವರ್ಷವೆಂದು ಘೋಷಣೆ ಮಾಡಿ ಇದಕ್ಕಾಗಿ 10 ಕೋಟಿ ರೂ ಮೀಸಲಿಟ್ಟಿರುವುದಾಗಿ ಟಿವಿಯಲ್ಲಿ ಕೇಳಲ್ಪಟ್ಟೆ . ಘೋಷಣೆಯಂತೆ ಹಣ ಬಿಡುಗಡೆ ಮಾಡಿದಲ್ಲಿ ಪರಿಷತ್ ನ ಶತಮಾನೋತ್ಸವ ಕಾರ್ಯಕ್ರಮಕ್ಕೆ ಅನುಕೂಲವಾಗುತ್ತದೆ :
ತ.ಶಿ.ಬಸವಮೂರ್ತಿ. ಹುಳಿಯಾರು ಹೋಬಳಿ ಕಸಾಪ.
ಪ್ರಮುಖ ೨೫ ಎಪಿಎಂಸಿ ಮಾರುಕಟ್ಟೆಗಳ ಆಧುನೀಕರಣಕ್ಕೆ ಮುಂದಾಗಿರುವುದು ವ್ಯಾಪಾರಿಗಳಿಗೆ ಹಾಗೂ ರವಾನೆದಾರರಿಗೆ ಅನುಕೂಲ ಕಲ್ಪಿಸಿದಂತಾಗಿದೆ :
ಎಲ್.ಆರ್.ಬಾಲಾಜಿ, ಹುಳಿಯಾರು ಎಪಿಎಂಸಿ ವರ್ತಕ.
ಆನ್‌ಲೈನ್ ಮೂಲಕ ಭೂ ಪರಿವರ್ತನೆ ಪ್ರಕ್ರಿಯೆಗೆ ಚಾಲನೆ ಹಾಗೂ ತಾಲ್ಲೂಕ್ , ಜಿಲ್ಲಾಧಿಕಾರಿಗಳ ಕಛೇರಿಗಳಲ್ಲಿ ಕಾಗದ ರಹಿತ ವ್ಯವಸ್ಥೆಗೆ ಮುಂದಾಗಿರುವುದು ಏನೂ ತಿಳಿಯದ ಗ್ರಾಮೀಣ ಪ್ರದೇಶದವರಿಗೆ ವರದಾನದ ಬದಲು ಅನಾನುಕೂಲ ಹೆಚ್ಚಿದಂತಾಗುತ್ತದೆ :
ರವಿಕುಮಾರ್ , ಜೋಡಿತಿರುಮಲಾಪುರ.
ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿರುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದು ಅದಕ್ಕೂ ಹೆಚ್ಚಿನದಾಗಿ ಮೇ 1ರಿಂದ ಹೊಸಪಡಿತರ ಚೀಟಿಗೆ ಅವಕಾಶ ನೀಡುತ್ತಿರುವುದು ಜನಸಾಮಾನ್ಯರಿಗೆ ಅನುಕೂಲಮಾಡಿದಂತಾಗಿದೆ :
ಹನುಮಂತಪ್ಪ , ತಾಲ್ಲೂಕ್ ದಲಿತ ಸಹಾಯವಾಣಿ ಅಧ್ಯಕ್ಷ.
ಡಿಸೇಲ್, ಪೆಟ್ರೋಲ್ ಬೆಲೆ ದಿನೇದಿನೆ ಏರುತ್ತಲೇ ಇದ್ದು ಅದರ ಬೆನ್ನಲ್ಲೇ ಮತ್ತೆ ಸೆಸ್ ಶೇ.1ರಷ್ಟು ಏರಿಕೆ ಮಾಡಿರುವುದು ಸರಕು ಸಾಗಾಣೆ ಹಾಗೂ ಪ್ರಯಾಣ ದರದ ಮೇಲೆ ಪರಿಣಾಮ ಬೀರುತ್ತದೆ:
ರಂಗನಾಥ್ ಪ್ರಸಾದ್ ,ಲಾರಿ ಮಾಲೀಕರು.
ಹನುಮಂತಪ್ಪ , ತಾಲ್ಲೂಕ್ ದಲಿತ ಸಹಾಯವಾಣಿ ಅಧ್ಯಕ್ಷ.
ಡಿಸೇಲ್, ಪೆಟ್ರೋಲ್ ಬೆಲೆ ದಿನೇದಿನೆ ಏರುತ್ತಲೇ ಇದ್ದು ಅದರ ಬೆನ್ನಲ್ಲೇ ಮತ್ತೆ ಸೆಸ್ ಶೇ.1ರಷ್ಟು ಏರಿಕೆ ಮಾಡಿರುವುದು ಸರಕು ಸಾಗಾಣೆ ಹಾಗೂ ಪ್ರಯಾಣ ದರದ ಮೇಲೆ ಪರಿಣಾಮ ಬೀರುತ್ತದೆ:
ರಂಗನಾಥ್ ಪ್ರಸಾದ್ ,ಲಾರಿ ಮಾಲೀಕರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ