ಹುಳಿಯಾರು ಹೋಬಳಿ ದೊಡ್ಡಬಿದರೆಯ ಅಡವಿಪರಮೇಶ್ ಅವರಿಗೆ ಸೇರಿದ್ದ ಸುಮಾರು ನಾಲ್ಕೈದು ಮಾರು ಉದ್ದದ ೨ ರಾಗಿ ಬಣವೆಗೆ ಶನಿವಾರ ತಡರಾತ್ರಿ ಬೆಂಕಿ ಬಿದ್ದು ಭಸ್ಮವಾಗಿ ಸುಮಾರು ೫೦ಸಾವಿರದಷ್ಟು ನಷ್ಟಉಂಟಾಗಿದೆ.
ದೊಡ್ಡಬಿದರೆಯಿಂದ ತಾಂಡ್ಯಾಕ್ಕೆ ಹೋಗುವ ರಸ್ತೆ ಪಕ್ಕದ ಕೊಪ್ಪಲಿನಲ್ಲಿ ಸಂಗ್ರಹ ಮಾಡಿದ್ದ ರಾಗಿಹುಲ್ಲಿನ ಬಣವೆಗಳಿಗೆ ಶನಿವಾರ ತಡರಾತ್ರಿ ಆಕಸ್ಮಿಕ ಬೆಂಕಿ ಬಿದಿದೆ. ಹತ್ತಿಉರಿಯುತ್ತಿದ್ದ ಬೆಂಕಿಯನ್ನು ಕಂಡ ದಾರಿಹೋಕರು ಅಗ್ನಿಶಾಮಕ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಜೊತೆಗೆ ಸ್ಥಳೀಯರೆಲ್ಲಾ ಸೇರಿ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ನಂತರ ಸ್ಥಳಕ್ಕಾಗಮಿಸಿದ ಚಿ.ನಾ.ಹಳ್ಳಿ ಅಗ್ನಿಶಾಮಕದಳದವರು ಬೆಂಕಿ ನಂದಿಸಿದರಾದರೂ ಸಹ ರಾಗಿ ಹುಲ್ಲು ಸುಟ್ಟುಹೋಗಿದೆ. ಈ ಬಾರಿ ಉತ್ತಮ ಮಳೆಯಿಂದಾಗಿ ರಾಗಿಹುಲ್ಲು ಚೆನ್ನಾಗಿಬಂದಿತ್ತು ಇನ್ನೂ ಎರಡುಮೂರು ವರ್ಷ ರಾಸುಗಳ ಮೇವಿಗೆ ಆಗುತ್ತದೆ ಎಂದುಕೊಂಡಿದ್ದರೆ ಈರೀತಿ ಆಗಿದೆ ಏನು ಮಾಡುವುದು ಎಂಬ ಚಿಂತೆ ಕಾಡುತ್ತಿದೆ ಎನ್ನುತ್ತಾರೆ ಅಡವಿಪರಮೇಶ್. ಹುಳಿಯಾರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ