ಹಂದನಕೆರೆ ಹೋಬಳಿಯ ಮತ್ತಿಘಟ್ಟ ಸಮೀಪದ ಮಲ್ಲಿಗೆರೆಯ ಶ್ರೀಕರಿಯಮ್ಮದೇವಿಯ ವೈಭವಯುತ ಜಾತ್ರಾಮಹೋತ್ಸವ (ತಾ.೬) ಶುಕ್ರವಾರದಿಂದ ಪ್ರಾರಂಭಗೊಂಡು ತಾ. ೧೦ರ ಮಂಗಳವಾರದವರೆಗೆ ೫ ದಿನಗಳ ಕಾಲ ನಡೆಯಲಿದೆ.
ಮಲ್ಲಿಗೆರೆ ಕರಿಯಮ್ಮದೇವಿ. |
ತಾ.೬ರ ಶುಕ್ರವಾರ ಧ್ವಜಾರೋಹಣ ಹಾಗೂ ಮಡಿಲಕ್ಕಿ ಸೇವೆ, ತಾ.೭ರ ಶನಿವಾರ ಬಾನ, ತಾ.೮ರ ಭಾನುವಾರ ಸಿಡಿಕಾರ್ಯ ಮತ್ತು ಅದೇ ದಿನ ಸಂಜೆ ಆರ್ಕೆಸ್ಟ್ರಾ, ತಾ.೯ರ ಸೋಮವಾರ ಗಂಗಾಸ್ನಾನ ಹಾಗೂ ದೇವಿಯ ರಥೋತ್ಸವ ಹಾಗೂ ಸಾಮೂಹಿಕ ವಿವಾಹ ಕಾರ್ಯ,ಅನ್ನಸಂತರ್ಪಣೆ ನಡೆಯಲಿದೆ. ತಾ.೧೦ರ ಮಂಗಳವಾರ ಅಂಬಾರಿ ಉತ್ಸವ ಹಾಗೂ ಉಯ್ಯಾಲೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ. ರಥೋತ್ಸವದ ದಿನದ ಸಂಜೆ ಹರಟೆ ಕಾರ್ಯಕ್ರಮ ಖ್ಯಾತಿಯ ಸುಧಾಬರಗೂರು ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ಅಯೋಜಿಸಿದ್ದು ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ದೇವಾಲಯ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ