ಹುಳಿಯಾರು ಪಟ್ಟಣದ ಹಿರಿಯ ರಂಗಕರ್ಮಿ,ವಿಪ್ರಸಮಾಜದ ಗೌರವಾದ್ಯಕ್ಷರೂ ಆಗಿದ್ದ ಹೆಚ್.ಕೆ. ಅನಂತರಾಮಯ್ಯ ಅವರು ಸೋಮವಾರ ಬೆಳಿಗ್ಗೆ ನಿಧನರಾದರು
ಅನಂತರಾಮಯ್ಯ |
ಇವರು ಕನ್ನಡ ಸಂಘ ಕಟ್ಟಿಕೊಂಡು ಕನ್ನಡಪರ ಕೆಲಸ ಮಾಡುತ್ತಿದ್ದರಲ್ಲದೆ ಹಳ್ಳಿಹಳ್ಳಿಗೆ ನಾಟಕ ತಂಡ ಕಟ್ಟಿಕೊಂಡು ಹಳ್ಳಿಚಿತ್ರ ಸೇರಿದಂತೆ ಅನೇಕ ನಾಟಕಗಳನ್ನು ಅಭಿನಯಿಸಿ ಪ್ರಶಸ್ತಿಗಳನ್ನೂ ಸಹ ಪಡೆದಿದ್ದಾರೆ. ಹುಳಿಯಾರಿನ ಪ್ರಜಾವಾಣಿ ಪ್ರತಿನಿಧಿ ಎಚ್.ಎ.ರಘು ಕುಮಾರ್ ಸೇರಿದಂತೆ ೫ ಮಂದಿ ಗಂಡು ಮಕ್ಕಳು , ಒಬ್ಬ ಮಗಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. ಹುಳಿಯಾರಿಗೆ ಮುಕ್ತಿಧಾಮ ತರಲು ಶ್ರಮಿಸಿದ ಅವರನ್ನು ಸೋಮವಾರ ಸಂಜೆ ಅದೇ ಮುಕ್ತಿಧಾಮದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು. ತಾಲ್ಲೂಕು ವಿಪ್ರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಡಿ.ಆರ್.ನರೇಂದ್ರಬಾಬು, ಕಾರ್ಯದರ್ಶಿ ಮಧುಸೂದನ್ ರಾವ್, ಕುಪ್ಪೂರ್ ರಾಜೀವ್, ಹುಳಿಯಾರು ವಿಪ್ರ ಸಂಘದ ಹು.ಕೃ.ವಿಶ್ವನಾಥ್,ರಂಗನಾಥ ಪ್ರಸಾದ್, ಸುಭ್ರಮಣ್ಯ ಸೇರಿದಂತೆ ಸಮುದಾಯದವರು ಸಂತಾಪ ಸೂಚಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ