ಹುಳಿಯಾರು ಪಟ್ಟಣದ ವಿವಿಧ ದೇವಾಲಯಯ ಹಾಗೂ ಸಮೀಪದ ಬೋರನಕಣಿವೆಯ ಶ್ರೀಸಾಯಿಬಾಬ ಮಂದಿರದಲ್ಲಿ ಗುರುವಾರ ಹೋಳಿ ಹುಣ್ಣಿಮೆ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆದವು.
ಪಟ್ಟಣದ ಬನಶಂಕರಿ ದೇವಾಲಯದಲ್ಲಿ ಅರ್ಚಕ ಶ್ರೀಧರ್ ಪೌರೋಹಿತ್ಯದಲ್ಲಿ ಬನಶಂಕರಿದೇವಿಗೆ ವಿಶೇಷ ಪೂಜೆ ಹಾಗೂ ಅಲಂಕಾರ ಮಾಡಿದ್ದಲ್ಲದೆ ಸತ್ಯನಾರಾಯಣ ಪೂಜೆ ನಡೆದು ನಂತರ ಆಗಮಿಸಿದ ಭಕ್ತಾಧಿಗಳಿಗೆ ಪ್ರಸಾದ ವಿತರಿಸಲಾಯಿತು.
ಬೋರನಕಣಿವೆಯ ಸೇವಾಚೇತನದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಸಾಯಿಬಾಬ ಮಂದಿರದಲ್ಲಿ ಇದೇ ಪ್ರಥಮ ಬಾರಿ ಹುಣ್ಣೆಮೆ ಪೂಜೆ ನಡೆಯಿತು. ಸಾಬಿಬಾಬ ಮೂರ್ತಿಗೆ ಅಭಿಷೇಕ, ಅಲಂಕಾರ,ಕಾಕಡಾರತಿ ಹಾಗೂ ವಿವಿಧ ಪೂಜಾಕೈಂಕರ್ಯಗಳು ನಡೆಯಿತು. ಮಹಾಮಂಗಳಾರತಿಯ ನಂತರ ಆಗಮಿಸಿದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಶ್ರೀಶಿರಡಿಸಾಯಿಬಾಬ ಟ್ರಸ್ಟ್ ವಿಠಲ್ ಸೇರಿದಂತೆ ಇತರ ಸದಸ್ಯರು, ಹುಳಿಯಾರಿನ ಎಂ.ಎಸ್.ನಟರಾಜ್, ಪಿಎಸೈ ಪ್ರವೀಣ್ ಕುಮಾರ್ ಹಾಗೂ ಬೋರನಕಣಿವೆ,ದಬ್ಬಗುಂಟೆ,ಹೊಯ್ಸಳಕಟ್ಟೆ ಸುತ್ತಮುತ್ತಲ ಹಳ್ಳಿಯ ಭಕ್ತಾಧಿಗಳು ಆಗಮಿಸಿದ್ದು ಸಾಯಿಬಾಬ ಮೂರ್ತಿಯ ದರ್ಶನ ಪಡೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ