ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿದ ದನದ ಕೊಟ್ಟಿಗೆಗಳ ಕಾಮಗಾರಿಗಳ ಬಿಲ್ ನಲ್ಲಿ ಅವ್ಯವಹಾರ ನಡೆದಿದೆ ಹಾಗೂ ಬಸವೇಶ್ವರ ನಗರ ವಾರ್ಡ್ ಸೇರಿದಂತೆ ಇನ್ನಿತರ ವಾರ್ಡ್ ಗಳಲ್ಲಿ ಕುಡಿಯುವ ನೀರು ಹಾಗೂ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೆ ಜನಪರದಾವಂತಾಗಿದೆ ಎಂದು ಆರೋಪಿಸಿ ಪಟ್ಟಣದ ನಿವಾಸಿಗಳು ಸೋಮವಾರ ಬೆಳಿಗ್ಗೆ ಪಂಚಾಯ್ತಿ ಕಛೇರಿಗೆ ಬೀಜ ಹಾಕಿ ಪ್ರತಿಭಟಿಸಿದರು.
ದನದಕೊಟ್ಟಿಗೆ ಬಿಲ್ ಪಾವತಿಯಲ್ಲಿ ಅವ್ಯವಹಾರವಾಗಿದೆ ಎಂದು ಅರೋಪಿಸಿದ ಸಾರ್ವಜನಿಕರು ಹುಳಿಯಾರು ಗ್ರಾ.ಪಂ.ಕಛೇರಿಗೆ ಬೀಗ ಹಾಕಿ ಕಛೇರಿ ಮುಂದೆ ಧರಣಿ ನಡೆಸಿದರು |
ಕಳೆದ ೨೦೧೩-೧೪ ನೇ ಸಾಲಿನಲ್ಲಿ ಖಾತ್ರಿ ಯೋಜನೆಯಡಿ ದನದಕೊಟ್ಟಿಗೆ ನಿರ್ಮಿಸಿ ಒಂದೂವರೆ ವರ್ಷ ಕಳೆಯುತ್ತಾ ಬಂದರೂ ಇದುವರೆಗೂ ಅದರ ಬಿಲ್ ಮಾಡಿಲ್ಲ, ಈ ಬಗ್ಗೆ ಪಿಡಿಓ ಅವರನ್ನು ಕೇಳಿದರೆ ಇಲ್ಲಸಲ್ಲದ ಸಬೂಬು ಹೇಳುತ್ತಾರೆ. ಈ ಹಿಂದೆ ನಾವು ಕಾಮಗಾರಿ ಮಾಡುವಾಗ ೩೫ಸಾವಿರ ಎಂದು ಹೇಳಿದ ಅಧಿಕಾರಿಗಳು ಇದೀಗ ೧೬ಸಾವಿರ ಮಾತ್ರ ಬಿಲ್ ಆಗುವುದು ಎನ್ನುತ್ತಿದ್ದಾರೆ. ತಮಗೆ ಬೇಕಾದವರಿಗೆ ೩೫ಸಾವಿರ ಬಿಲ್ ಸಹ ಮಾಡಿದ್ದು, ನಮಗೆ ಅನ್ಯಾಯ ಮಾಡುತ್ತಿದ್ದಾರೆಂದು ಪ್ರತಿಭಟನಾ ನಿರತರು ಆರೋಪಿಸಿದರು.
ಕಳೆದ ಒಂದುವರ್ಷದ ಹಿಂದೆಯೇ ಕೊಟ್ಟಿಗೆ ಮನೆ ನಿರ್ಮಿಸಿ ಪಿಡಿಓ ಅವರನ್ನೇ ಸ್ಥಳಕ್ಕೆ ಕರೆದುಕೊಂಡು ಹೋಗಿ ಪರಿಶೀಲಿಸಿದ್ದು ಅಗತ್ಯ ದಾಖಲೆಗಳನ್ನು ನೀಡಿದ್ದರೂ ಸಹ ನಮ್ಮ ಬಿಲ್ ಪಾವತಿಸದೆ ಹಾಗೆಯೇ ಪೆಂಡಿಂಗ್ ಇಟ್ಟು ಇದುವರೆಗೂ ಬಿಲ್ ಪಾವತಿಸಿಲ್ಲ, ಸಾಲ ಮಾಡಿ ಕೊಟ್ಟಿಗೆ ಮನೆ ಕಟ್ಟಿದ್ದೇವೆ. ಇಷ್ಟಾದರೂ ಸಹ ಅಧಿಕಾರಿಗಳು ಈ ಬಗ್ಗೆ ಗಮನಕೊಡದೆ ತಮ್ಮ ಮನಬಂದಂತೆ ನಡೆದುಕೊಳ್ಳುತ್ತಿದ್ದು, ನಮ್ಮ ಗೋಳು ಕೇಳುತ್ತಿಲ್ಲ, ಎಲ್ಲೆಡೆ ಖಾತ್ರಿ ಹಣ ಬಿಡುಗಡೆ ಯಾಗಿದೆಯಲ್ಲಾ ನಮ್ಮ ಬಿಲ್ಲನ್ನು ನೀಡಿ ಎಂದು ಅಂಗಲಾಚುತ್ತಿದ್ದರೂ ಸಹ, ಬಿಲ್ ಪಾವತಿಸಲು ಲಂಚ ಆಮಿಷವೊಡ್ಡುತ್ತಿದ್ದಾರೆ. ನಾವು ಖರ್ಚುಮಾಡಿದ ಹಣವನ್ನು ಪಡೆಯುವುದು ಸಹ ದುಸ್ಥರವಾಗಿದೆ ಈ ಬಗ್ಗೆ ಮೇಲಾಧಿಕಗಳು ಶಿಸ್ತುಕ್ರಮ ಕೈಗೊಳ್ಳುವಂತೆ ಪ್ರತಿಭಟನಾನಿರತ ವಿಶ್ವನಾಥ್ ದೂರಿದರು.
ಪಂಚಾಯ್ತಿಯ ಕೆಲ ವಾರ್ಡ್ ಗಳಲ್ಲಿ ಮಾತ್ರ ಚರಂಡಿಗಳನ್ನು ಸ್ವಚ್ಚಗೊಳಿಸುವುದು, ನೀರು ಬಿಡಿಸುವುದು, ವಿದ್ಯುತ್ ದೀಪದ ವ್ಯವಸ್ಥೆ ಮಾಡಿಸುತ್ತಾರೆ ಹೊರತು ನಮ್ಮ ವಾರ್ಡ್ ನಲ್ಲಿ ಚರಂಡಿ ಸ್ವಚ್ಚ ಮಾಡಿ, ಬೀದಿ ದೀಪದ ಬಲ್ಪ್ ಹೋಗಿ, ಕುಡಿಯುವ ನೀರು ಬಿಟ್ಟು ತಿಂಗಳುಗಳು ಉರುಳಿವೆ ಈ ಬಗ್ಗೆ ಪಿಡಿಓ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜಯಣ್ಣ ತಿಳಿಸುತ್ತಾರೆ.
ಬೆಳಿಗ್ಗೆ ೧೧ ರಿಂದ ಧರಣಿ ಪ್ರಾರಂಭಗೊಂಡು ಸಂಜೆಯವರೆಗೂ ಸಾಗಿದರೂ ಸಹ ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕಾಗಮಿಸದೆ ಧರಣಿ ನಿರತರನ್ನು ಕೆರಳುವಂತೆ ಮಾಡಿತ್ತು. ಫೋನ್ ಮೂಲಕ ಸಂಪರ್ಕಿಸಿದಾಗ ಮೀಟಿಂಗ್ ಇದೆ ಎಂದು ಸಬೂಬು ಹೇಳಿದರೆ ಹೊರತು ಪಂಚಾಯ್ತಿಗೆ ಸಂಬಂಧಿಸಿದ ಸಿಬ್ಬಂದಿಯವರು ಬಂದಿರಲಿಲ್ಲ. ಧರಣಿ ವಿಷಯ ತಿಳಿದ ಪೋಲೀಸ್ ನವರು ಸ್ಥಳಕ್ಕಾಗಮಿಸಿ ವಿಚಾರಿಸಿದರು.ಸರ್ಕಾರಿ ಕಛೇರಿಗಳಿಗೆ ಏಕಾಏಕಿ ಬೀಗ ಹಾಕುವುದು ಕಾನೂನುರೀತ್ಯಾ ಅಪರಾಧ ಈ ಬಗ್ಗೆ ಮೊದಲೆ ಸಂಬಂಧಪಟ್ಟವರಿಗೆ ಮಾಹಿತಿ ನೀಡಬೇಕು ಎಂದು ಹೇಳಿದ ನಂತರ ಪಂಚಾಯ್ತಿಯ ಬೀಗ ತೆಗೆದರೂ ಸಹ ಸಾರ್ವಜನಿಕರು ಅಲ್ಲಿಂದ ಕದಲಡೆ ಪಿಡಿಓ ಹಾಗೂ ಇಓ ಅವರನ್ನು ಕರೆಸುವಂತೆ ಪಟ್ಟು ಹಿಡಿದು ಸಂಜೆಯಾದರೂ ಅಲ್ಲಿಂದ ಕದಲದೆ ಸಂಜೆಯಾದರೂ ಧರಣಿ ಮುಂದುವರಿಸಿದ್ದಾರೆ.
ಬೆಳಿಗ್ಗೆಯಿಂದ ಪ್ರಾರಂಭವಾದ ದಿಢೀರ್ ಧರಣಿಯಲ್ಲಿ ಮಲ್ಲಿಕಣ್ಣ, ಡಾಬಾ ಸೂರಪ್ಪ, ಚಿದಾನಂದಮೂರ್ತಿ(ಎಸ್.ಎಸ್..ಆರ್), ಮೋಹನ್ ಕುಮಾರ್ ರೈ, ಓಂಕಾರಮೂರ್ತಿ,ತಮ್ಮಯ್ಯ ಸೇರಿದಂತೆ ಪಟ್ಟಣದ ಬಸವೇಶ್ವರ ನಗರದ ಸಾರ್ವಜನಿಕರು ಪಾಲ್ಗೊಂಡಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ