೧೨ ನೇ ಶತಮಾನದಲ್ಲಿ ವಚನಕಾರರು ತಮ್ಮ ವಚನದ ಮೂಲಕ ಸಾಮಾಜಿಕ ಕ್ರಾಂತಿ ಉಂಟುಮಾಡಿದರು.ಜಾತಿ ಧರ್ಮಗಳ ವಿರುದ್ದ ಮೆಟ್ಟಿನಿಂತು ಶೋಷಣೆ , ಅಸಮಾನತೆ ವಿರುದ್ದ ಹೋರಾಡಿದರು. ದೇವರ ದಾಸಿಮಯ್ಯನಂತ ವಚನಕಾರರು ತಮ್ಮ ಕ್ರಾಂತಿಕಾರಿ ನಿಲುವಿನಿಂದ ಇಂದಿಗೂ ಪ್ರಸ್ತುತವಾಗಿದ್ದಾರೆಂದು ಪಿಡಿಓ ಅಡವೀಶ್ ಕುಮಾರ್ ತಿಳಿಸಿದರು.
ಹುಳಿಯಾರು ಗ್ರಾ.ಪಂ.ಕಛೇರಿಯಲ್ಲಿ ಅಧ್ಯಕ್ಷೆ ಕಾಳಮ್ಮ ಅವರ ಅಧ್ಯಕ್ಷತೆಯಲ್ಲಿ ದೇವರ ದಾಸಿಮಯ್ಯನವರ ಜಯಂತಿ ಆಚರಿಸಲಾಯಿತು. |
ಹುಳಿಯಾರು ಗ್ರಾಮ ಪಂಚಾಯ್ತಿಯಲ್ಲಿ ಅಧ್ಯಕ್ಷೆ ಕಾಳಮ್ಮ ಅವರ ಅಧ್ಯಕ್ಷತೆಯಲ್ಲಿ ಬುಧವಾರ ಬೆಳಿಗ್ಗೆ ನಡೆದ ದೇವರ ದಾಸಿಮಯ್ಯನವರ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.
ಅಧ್ಯಕ್ಷೆ ಕಾಳಮ್ಮ ಮಾತನಾಡಿ ಸಾಮಾಜಿಕ ಕ್ರಾಂತಿ ಉಂಟುಮಾಡಿದ ದಾಸಿಮಯ್ಯ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ತಮ್ಮ ಪಂಚಾಯ್ತಿಯಲ್ಲಿ ಆಚರಿಸುತ್ತಿರುವುದು ಸಂತಸ ತಂದಿದೆ ಎಂದರು. ಗ್ರಾ.ಪಂ.ಸದಸ್ಯ ಗಂಗಣ್ಣ, ದೇವಾಂಗ ಮಂಡಳಿಯ ಅಧ್ಯಕ್ಷ ಅನಂತ್ ಕುಮಾರ್,ಶೇಖರಪ್ಪ, ಪಂಚಾಯ್ತಿ ಸಿಬ್ಬಂದಿಗಳದ ಆನಂದ್, ಕೃಷ್ಣಮೂರ್ತಿ,ವೆಂಕಟೇಶ್,ಪಾಂಡುರಂಗಯ್ಯ ಮುಂತಾದವರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ