ಹುಳಿಯಾರು ಹೋಬಳಿ ಸೀಗೆಬಾಗಿ ಗ್ರಾಮದ ಹತ್ತಕ್ಕೂ ಅಧಿಕ ಮಂದಿ ಮಹಿಳೆಯರು ಕಾರ್ಯಕ್ರಮವೊಂದರಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ದೇವರಾಜು ಅವರ ಸಮ್ಮುಖದಲ್ಲಿ ರೈತಸಂಘಕ್ಕೆ (ಕೋಡಿಹಳ್ಳಿ ಚಂದ್ರಶೇಖರ್ ಬಣ) ಸೇರ್ಪಡೆಯಾದರು.
ಹುಳಿಯಾರು ಹೋಬಳಿ ಸೀಗೆಬಾಗಿಯ ಮಹಿಳೆಯರು ರೈತ ಸಂಘದ ಹಸಿರುಶಾಲು ಹೊದ್ದು ಸಂಘಕ್ಕೆ ಸೇರ್ಪಡೆಯಾದರು |
ರೈತ ಸಂಘದ ಹೋರಾಟದ ಹಾದಿ ಹಾಗೂ ರೈತರ ಬಗ್ಗೆ ಉತ್ತಮ ನಿಲುವುಗಳನ್ನು ಕೈಗೊಳ್ಳುವ ಮೂಲಕ ರೈತರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡುವಲ್ಲಿ ರೈತಸಂಘ ಮುಂದಾಗಿದ್ದು, ರೈತರ ಸಂಘಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಯಾಗುವ ಮೂಲಕ ಸಂಘಕ್ಕೆ ಬಲ ನೀಡಬೇಕೆಂದು ಹಸಿರುಸೇನೆಯ ರಾಜ್ಯ ಕಾರ್ಯದರ್ಶಿ ಕೆಂಕೆರೆ ಸತೀಶ್ ಕರೆನೀಡಿದರು.
ಈ ವೇಳೆ ರೈತಸಂಘದ ಜಿಲ್ಲಾ ಕಾರ್ಯದರ್ಶಿ ಧನಂಜಯರಾಧ್ಯ, ಸಂಚಾಲಕ ಶಂಕರಣ್ಣ, ತಾಲ್ಲೂಕ್ ಅಧ್ಯಕ್ಷ ಕೆ.ಪಿ.ಮಲ್ಲೇಶ್, ಹೋಬಳಿ ಘಟಕದ ಅಧ್ಯಕ್ಷ ತಮ್ಮಡಿಹಳ್ಳಿ ಮಲ್ಲಿಕಣ್ಣ, ಸಂಚಾಲಕರಾದ ಪಾತ್ರೆ ಸತೀಶ್,ಶಿವಣ್ಣ, ಹೂವಿನರಘು, ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ