ಹುಳಿಯಾರು ಹೋಬಳಿ ನಂದಿಹಳ್ಳಿ ಗ್ರಾಮದ ಶ್ರೀನಂದಿಬಸವೇಶ್ವರ ಸ್ವಾಮಿಯ ಜಾತ್ರಾಮಹೋತ್ಸವ ಇದೇ ೨೮ರ ಶನಿವಾರದಿಂದ ಪ್ರಾರಂಭವಾಗಿ ತಾ.೩೧ರ ಮಂಗಳವಾರದವರೆಗೆ ನಾಲ್ಕು ದಿನಗಳಕಾಲ ನಡೆಯಲಿದೆ.
ನಂದಿಹಳ್ಳಿ ನಂದಿಬಸವೇಶ್ವರ. |
ತಾ.೨೮ರ ಶನಿವಾರ ಬೆಳಿಗ್ಗೆ ೮ ಗಂಟೆಗೆ ರಾಮನವಮಿ, ಆಂಜನೇಯಸ್ವಾಮಿ ರುದ್ರಾಭಿಷೇಕ,ಕುಂಕುಮಾರ್ಚನೆ,ಧ್ವಜಾರೋಹಣ, ಸಂಜೆ ಆಂಜನೇಯಸ್ವಾಮಿಯ ಉತ್ಸವ ,೬ಗಂಟೆಗೆ ಬಿಲ್ಲುಗೂಡು ಸೇವೆ, ನಂದಿಬಸವೇಶ್ವರ ಕಲಾತಂಡದವರಿಂದ ರಾಮಭಜನೆ ನಡೆಯಲಿದೆ.ತಾ.೨೯ರ ಭಾನುವಾರ ನಂದಿಬಸವೇಶ್ವರಸ್ವಾಮಿ, ಆಂಜನೇಯಸ್ವಾಮಿ,ಶನೇಶ್ವರಸ್ವಾಮಿ, ಕ್ಯಾತಲಿಂಗೇಶ್ವರಸ್ವಾಮಿ,ಹುಲ್ಕಲ್ ದುರ್ಗಮ್ಮ,ತೊರೆಮನೆಯ ಅಂತರಘಟ್ಟೆ ಕರಿಯಮ್ಮ ಎಲ್ಲಾ ದೇವರುಗಳ ಆಗಮ ಹಾಗೂ ಕೂಡುಭೇಟಿ, ರಾತ್ರಿ ನೂರೊಂದೆಡೆ ಸೇವೆ, ಗುರುಪರುವಿನೊಂದಿಗೆ ಅನ್ನಸಂತರ್ಪಣೆ ನಡೆಯಲಿದೆ.
ತಾ.೩೦ರ ಸೋಮವಾರದಂದು ಸ್ವಾಮಿಯವರ ಬೆಳ್ಳಿ ಪಾಲಿಕೆಯ ಅಡ್ಡಪಲ್ಲಕ್ಕಿ ಉತ್ಸವ, ದೋಣು ಸೇವೆ ಹಾಗೂ ಮುತ್ತಿನ ಮಂಟಪೋತ್ಸವ,ತಾ.೩೧ರ ಮಂಗಳವಾರ ಬೆಳಿಗ್ಗೆ ಸ್ವಾಮಿಯ ರಥೋತ್ಸವ ನಡೆದು ನಂತರ ಗಂಗಾಪೂಜೆಯೊಂದಿಗೆ ನಡೆಮುಡಿಯಲ್ಲಿ ರುದ್ರದೇವರ ನೃತ್ಯದೊಂದಿಗೆ ಮೂಲಸ್ಥಾನಕ್ಕೆ ದಯಮಾಡಿಸಿ ಹಣ್ಣುಕಾಯಿ ಸೇವೆ, ಮಹಾಮಂಗಳಾರತಿ ಕಾರ್ಯ ನಡೆಯಲಿದೆ. ಅದೇ ದಿನ ರಾತ್ರಿ ನಂದಿಬಸವೇಶ್ವರ ಕಲಾಸಂಘದವರಿಂದ ಸಂಪೂರ್ಣರಾಮಾಯಣ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದ್ದು ಸುತ್ತಮುತ್ತಲಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ