ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯಾಗಿದ್ದ ಡಿ.ಕೆ.ರವಿಯವರು ಸಾವು ನಾಡಿನ ಜನತೆಗೆ ಆಘಾತವನ್ನುಂಟು ಮಾಡಿದ್ದು ಇಂತಹ ವ್ಯಕ್ತಿ ಇಲ್ಲದಾರಿರುವುದು ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ನಿವೃತ್ತ ಶಿಕ್ಷಕ ಹಾಗೂ ಕೃಷಿಕ ನಂದಿಹಳ್ಳಿ ಸಿದ್ದಬಸವಯ್ಯ ಕಳವಳ ವ್ಯಕ್ತಪಡಿಸಿದರು.
ಹುಳಿಯಾರಿನ ಮುಂಜಾನೆ ತರಕಾರಿ ಮಾರುಕಟ್ಟೆಯ ರೈತರು ಹಾಗೂ ರೈತಸಂಘದಿಂದ ಡಿ.ಕೆ.ರವಿ ಅವರ ಸ್ಮರಣಾರ್ಥ ಬುಧವಾರ ಬೆಳಿಗ್ಗೆ ಶ್ರದ್ಧಾಂಜಲಿ ಸಮರ್ಪಿಸಲಾಯಿತು. |
ಪಟ್ಟಣದ ನಾಡಕಛೇರಿಯ ಮುಂದೆ "ಮುಂಜಾನೆ ತರಕಾರಿ ಮಾರುಕಟ್ಟೆ" ರೈತರಿಂದ ನಡೆದ ಡಿ.ಕೆ.ರವಿ ಅವರಿಗೆ ಬುಧವಾರ ಬೆಳಿಗ್ಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರವಿ ಅವರ ಸಾವು ಉನ್ನತ ಸ್ಥಾನದಲ್ಲಿದ್ದುಕೊಂಡು ಪ್ರಾಮಾಣಿಕ ಕಾರ್ಯ ನಿರ್ವಹಿಸುವ ಅಧಿಕಾರಿಗಳನ್ನು ಧೃತಿಗೆಡುವಂತೆ ಮಾಡಿದೆ ಎಂದರು. ಮಾರುಕಟ್ಟೆಯ ರೈತರುಗಳೆಲ್ಲಾ ಮೌನ ಆಚರಿಸುವ ಮೂಲಕ ಸಂತಾಪ ವ್ಯಕ್ತಪಡಿಸಿದರು. ಇಂಜಿನಿಯರ್ ಲಿಂಗರಾಜ್, ಕೃಷಿಕರಾದ ಮುರುಳಿ, ಗೊಲ್ಲರಹಟ್ಟಿ ಕೊಟ್ರೇಶ್, ಪೈಂಟರ್ ಲೋಕೇಶ್,ಮಹೇಶ್, ಪಂಡಿತ್ ಬಸವರಾಜು ಸೇರಿದಂತೆ ರೈತ ಮಹಿಳೆಯರು ಹಾಗೂ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ