ಇಲ್ಲಿನ ಪುರಾತನ ಈಶ್ವರ ದೇವಾಲಯದಲ್ಲಿ ಕಳೆದೆರಡು ದಿನಗಳಿಂದ ಮುಂಜಾನೆ ಸೂರ್ಯೋದಯದ ಸಮಯದಲ್ಲಿ ಕೆಲ ನಿಮಿಷಗಳ ಕಾಲ ಶಿವಲಿಂಗಕ್ಕೆ ಸೂರ್ಯ ಕಿರಣ ಸ್ಪರ್ಶವಾಗುತ್ತಿದ್ದು ನೋಡುಗರಲ್ಲಿ ಪುಳಕಿತವನ್ನುಟುಂಮಾಡಿದೆ.
ಹುಳಿಯಾರಿನ ಈಶ್ವರನ ಸನ್ನಿದಿಯ ಶಿವಲಿಂಗಕ್ಕೆ ಸೂರ್ಯನ ಕಿರಣಗಳು ಸ್ಪರ್ಶಿಸಿದ ಅಪರೂಪದ ದೃಶ್ಯವನ್ನು ಅಂಬಿಕಾ ಸ್ಟುಡಿಯೋದ ಸುದರ್ಶನ್ ತಮ್ಮ ಕ್ಯಾಮರದಲ್ಲಿ ಸೆರೆಹಿಡಿದಿರುವುದು. |
ಹೊಯ್ಸಳರ ಕಾಲದ ಇಲ್ಲಿನ ಈಶ್ವರ ದೇವಾಲಯದಲ್ಲಿ ಫೆ.27 ರಿಂದ ಹಂತ ಹಂತವಾಗಿ ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬೀಳುತ್ತಿದ್ದು ಮೂರ್ನಾಲ್ಕು ದಿನ ಮಾತ್ರ ಈ ದೃಶ್ಯ ಕಾಣಬಹುದಾಗಿದೆ. ದೇವಸ್ಥಾನ ಶಿಲ್ಪಿಯ ವಾಸ್ತುಶಿಲ್ಪದ ಚಾಕುಚಕ್ಯತೆಯ ಅನಾವರಣದಿಂದಾಗಿ ಪ್ರತಿವರ್ಷ ಫೆಬ್ರವರಿ-ಮಾರ್ಚ್ ಮಾಹೆಯಲ್ಲಿ ಮಾತ್ರ ಈ ಕೌತುಕ ಸಂಭವಿಸುತ್ತಿದೆ. ಸೂರ್ಯ ದಕ್ಷಿಣಾಯದಿಂದ ಉತ್ತರಾಯಣಕ್ಕೆ ಚಲಿಸುವ ಕ್ಷಣದಲ್ಲಿ ಶಿವಲಿಂಗದ ಮೇಲೆ ಬೀಳುವಂತೆ ಮಾಡುವ ಅಂದಿನ ವಾಸ್ತುಶಿಲ್ಪಕಲೆಯಿಂದಾಗಿ ಇಂತಹ ಚಮತ್ಕಾರವನ್ನು ಸಂಭವಿಸುತ್ತಿದೆ. ಬೆಂಗಳೂರಿನ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಪ್ರತಿ ವರ್ಷ ರಥಸಪ್ತಮಿಯಂದೆ ಈ ದೃಶ್ಯ ಸಂಭವಿಸುತ್ತಿದ್ದು, ಇಲ್ಲಿ ಮಾತ್ರ ಮಾರ್ಚ್ ತಿಂಗಳ ಮೊದಲ ವಾರದಲ್ಲಿ ಈ ದೃಶ್ಯ ಕಾಣ ಸಿಗುತ್ತದೆ. ಸೂರ್ಯನ ಕಿರಣಗಳು ಬಸವನ ಕೊಡಿನಿಂದ ಹಾದು ಹೋಗಿ ಶಿವಲಿಂಗದ ಮೇಲೆ ಬೀಳುವ ದೃಶ್ಯ ಮನಮೋಹಕವಾಗಿದ್ದು ಮುಂಜಾನೆಯೇ ಸಾಕಷ್ಟು ಭಕ್ತರು ಇದನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ . ಸದ್ಯ ದೇವಸ್ಥಾನದ ಮುಂಭಾಗ ದೇವಸ್ಥಾನಕ್ಕೆ ಸಂಬಂಧಿಸಿದ ಸಮುದಾಯ ಭವನ ನಿರ್ಮಾಣವಾಗುತ್ತಿದ್ದು ಮುಂದಿನ ದಿನಗಳಲ್ಲಿ ಇಂತಹ ಅಪರೂಪದ ದೃಶ್ಯ ಕಾಣಸಿಗದ ಸಾಧ್ಯತೆ ಇದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ